
ಹಿರಿಯೂರು:
ತಾಲ್ಲೂಕಿನ ಮ್ಯಾಕ್ಲೂರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮ್ಯಾಕ್ಯೂರಹಳ್ಳಿ ಇದರ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಅಧ್ಯಕ್ಷರ ಸ್ಥಾನಕ್ಕೆ ಬಿ.ಶ್ರೀನಿವಾಸ್ ಮತ್ತು ಚಂದ್ರಹಾಸರವರಿಂದ ನಾಮಪತ್ರ ಸಲ್ಲಿಕೆಯಾಗಿದ್ದವು.
ಎಸ್.ಶ್ರೀನಿವಾಸ್ ಇವರ ಪರವಾಗಿ 09 ಮತಗಳು ಚಲಾವಣೆಯಾಗಿದ್ದು, ಪ್ರತಿಸ್ಪರ್ಧಿ ಚಂದ್ರಹಾಸರ ಪರವಾಗಿ 03 ಮತಗಳು ಚಲಾವಣೆಯಾಗಿ ಶ್ರೀನಿವಾಸ ರವರು ಜಯ ಗಳಿಸಿರುತ್ತಾರೆ. ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಟಿ.ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂಬುದಾಗಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣಾಧಿಕಾರಿಗಳಾದ ಕೆ.ಶಿವಮೂರ್ತಿ ಘೋಷಿಸಿದ್ದಾರೆ.

