March 2, 2026
0000003

ಹಿರಿಯೂರು:

ನಗರದ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ “ಸ್ವಚ್ಛತಾ ಇ ಸೇವಾ” ಕಾರ್ಯಕ್ರಮದಡಿ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗುತ್ತಿದ್ದು, ಈ ದಿನ ವಾರ್ಡ್ ನಂಬರ್ 27ರ ಸಾಯಿಗಾರ್ಡನ್ ಹತ್ತಿರದ ಪಾರ್ಕ್ ನಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಗರದ ವಾರ್ಡ್ ನಂಬರ್ 27ರ ಸಾಯಿಗಾರ್ಡನ್ ಹತ್ತಿರದ ಪಾರ್ಕ್ ನಲ್ಲಿ “ಸ್ವಚ್ಛತಾ ಇ ಸೇವಾ” ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ, ಅವರು ಮಾತನಾಡಿದರು.

ಸಾಯಿಗಾರ್ಡನ್ ಮೊಗ್ಗುಮಲ್ಲಿಗೆ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದವರಾದ ರಮೇಶನಾಯ್ಕ ಮಾತನಾಡಿ, ವಾರ್ಡ್ ಗಳ ಮುಖ್ಯರಸ್ತೆಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಸಿ.ಸಿ. ಕ್ಯಾಮರಗಳನ್ನು ಅಳವಡಿಸಲು ಜನರು ಬೇಡಿಕೆಯಿಟ್ಟಿದ್ದು, ಅದರಂತೆ ಅವಶ್ಯಕತೆ ಇರುವ ಸ್ಥಳಗಳಲ್ಲಿ ಈಗಾಗಲೇ 3ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ ಎಂದರಲ್ಲದೆ,

ಇದರಿಂದಾಗಿ ರಸ್ತೆಬದಿ ಹಾಗೂ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಲು ನಗರ ಸಭೆಯೊಂದಿಗೆ ಕೈಜೋಡಿಸಿ ಹಿರಿಯೂರಿನ ಸ್ವಚ್ಛತೆಗೆ ಸಹಕರಿಸಿದಂತಾಗುತ್ತದೆ. ಜನಸಂಖ್ಯೆ ಹೆಚ್ಚಾಗುತ್ತಿದ್ದು, ಹಿರಿಯೂರು ನಗರವು ಬೆಳೆಯುತ್ತಿರುವುದರಿಂದ ತಡರಾತ್ರಿಗಳಲ್ಲಿ ಕಳ್ಳತನದಿಂದಾಗುವ ಅವಘಡಗಳನ್ನು ತಪ್ಪಿಸಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದಂತಾಗುತ್ತದೆ  ಎಂಬುದಾಗಿ ಅವರು ಅಭಿಪ್ರಾಯಪಟ್ಟರು.

ಎ.ರವಿಚಂದ್ರನಾಯ್ಕ್ ರವರು ಮಾತನಾಡಿ, ನಮ್ಮ ಬಡಾವಣೆಯಲ್ಲಿ ಇನ್ನೂ ಅವಶ್ಯಕತೆಯಿರುವ 7-8ಸಿ.ಸಿ. ಕ್ಯಾಮರಗಳನ್ನು ಖುದ್ದಾಗಿ ನಮ್ಮ  ಸಂಘದ ವತಿಯಿಂದ ಅಳವಡಿಸಿಕೊಡುವುದರ ಮೂಲಕ ನಗರಸಭೆಯೊಂದಿಗೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ನಗರದ ಅಭಿವೃದ್ಧಿಗೆ ಸಹಕರಿಸುತ್ತೇವೆ ಎಂಬುದಾಗಿ ಅವರು ಹೇಳಿದರು.

ಈ ಕುರಿತು ನಗರಸಭೆ ಪೌರಾಯುಕ್ತರಾದ ಎ.ವಾಸಿಂ ಮಾತನಾಡಿ, ಸಾಯಿಗಾರ್ಡನ್ ಮೊಗ್ಗುಮಲ್ಲಿಗೆ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದವರಂತೆ ನಗರ ವ್ಯಾಪ್ತಿಯ ಎಲ್ಲಾ ಬಡಾವಣೆಗಳ ನಿವಾಸಿಗಳು ಮುಖಂಡರುಗಳು ಮತ್ತು ಸಂಘ ಸಂಸ್ಥೆಗಳು ತಮ್ಮ ಬಡಾವಣೆಗಳಲ್ಲಿ ಅವಶ್ಯವಿರುವ ಕಡೆ ಸ್ವಯಂಪ್ರೇರಿತರಾಗಿ ಸಿ.ಸಿ. ಕ್ಯಾಮೆರಾ ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಬಡಾವಣೆಗಳ ಸುರಕ್ಷತೆಗೆ ಮುಂದಾಗಬೇಕು ಎಂಬುದಾಗಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.   

                                                                                    

ಈ ಸಂದರ್ಭದಲ್ಲಿ  ನಗರಸಭೆ ಪೌರಾಯುಕ್ತರಾದ ಎ.ವಾಸೀಂ,  ಹಿರಿಯ,  ಕಿರಿಯ ಆರೋಗ್ಯ ನಿರೀಕ್ಷಕರುಗಳು ಹಾಗೂ ಸದರಿ ಬಡಾವಣೆಯ ರವಿಚಂದ್ರನಾಯ್ಕ್,  ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಚೇತನ,  ರಾಜಕುಮಾರ್ ನಾಯ್ಕ,  ರಮೇಶ್ ನಾಯ್ಕ ಸೇರಿದಂತೆ ಪೌರಕಾರ್ಮಿಕರು, ದಪ್ಪೇದಾರ್ ಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *