October 27, 2026
005

ಹಿರಿಯೂರು :

ಆಗ್ನೇಯ ಪದವೀಧರ ಚುನಾವಣೆ ಎನ್.ಡಿ.ಎ ಅಭ್ಯರ್ಥಿ ಕೆ.ಎಂ.ಸುರೇಶ್ ರವರ ವಿರುದ್ಧ ಕೆಲವು ಸ್ವಪಕ್ಷ ಬಿಜೆಪಿ ಮುಖಂಡರು ಕಾರ್ಯಕರ್ತರ ಹೆಸರಿನಲ್ಲಿ ನಕಾರಾತ್ಮಕವಾಗಿ ಟ್ರೋಲ್ ಮಾಡುತ್ತಿರುವುದು ಖಂಡನೀಯ ಎಂಬುದಾಗಿ ಬಿಜೆಪಿ ಜಿಲ್ಲಾ ಒಬಿಸಿ ಕಾರ್ಯದರ್ಶಿ ಕೇಶವಮೂರ್ತಿ ಮಾಧ್ಯಮಗಳೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ಮೂರು ದಿನಗಳ ಹಿಂದೆ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಕೆ.ಎಂ.ಸುರೇಶ್ ರವರು ಮತದಾನದ ದಿನ ವಾಡಿಕೆಯಂತೆ ಚುನಾವಣೆ ಕ್ಷೇತ್ರದ ಎಲ್ಲಾ ಮತಗಟ್ಟೆಗಳಿಗೂ ಭೇಟಿ ನೀಡಿರುವುದು ಸಹಜ ಪ್ರಕ್ರಿಯೆ ಆಗಿದೆ.

ಆದರೆ ಮತದಾನ ಕೇಂದ್ರದ ಬಳ್ಳಿದಾವಣೆಗೆ ಉಸ್ತುವಾರಿ ಸಚಿವರು, ಸಂಸದೆಯೂ ಆಗಿರುವ ಶಾಮನೂರು ಕುಟುಂಬದವರು ಎದುರುಗೊಂಡಾಗ ನಮ್ಮ ಅಭ್ಯರ್ಥಿ ಕುಶಲೋಪರಿ ವಿಚಾರಿಸಿದ್ದಾರೆ. ಒಬ್ಬ ಸಂಸ್ಕಾರಯುತ ಸೌಜನ್ಯದ ವ್ಯಕ್ತಿಯಾಗಿ ಅವರಿಗೆ ನಮಸ್ಕರಿಸಿ ಎದುರಾಳಿ ಪಕ್ಷದವರಿಗೆ ಗೌರವ ನೀಡಿರುವುದು ತಪ್ಪೇ, ಅದು ಅವರ ದೊಡ್ಡಗುಣ ಎಂಬುದಾಗಿ ಅವರು ವಿಶ್ಲೇಶಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು ಎನ್.ಡಿ.ಎ ಅಭ್ಯರ್ಥಿ ಚುನಾವಣೆಗೂ ಮುನ್ನ ಹೋಗಿ ಅವರುಗಳಿಗೆ ಗೌರವ ಸಲ್ಲಿಸಿ ಸಹಕಾರ ಬೇಡಿದ್ದರೆ ಅದು ತಪ್ಪಾದ ಹಾಗೂ ಪ್ರಶ್ನೆರೂಪಕದ ನಡೆಯಾಗಿರುತ್ತಿತ್ತು, ಸುರೇಶ್ ಅವರಿಗೆ ಸಂಸ್ಕಾರ ಇದೆ, ಅದರಲ್ಲೂ ಸಂಘ ಪರಿವಾರದ ಹಿನ್ನೆಲೆಯ ಸಂಸ್ಕಾರವಿದೆ, ಈ ಕಾರಣಕ್ಕೆ ಎದುರಾಳಿ ಪಕ್ಷದ ನಾಯಕರುಗಳಿಗೆ ನಮಸ್ಕರಿಸಿ ಗೌರವ ನೀಡಿದ್ದಾರೆ. ಅದನ್ನು ಅಪಾರ್ಥ ಮಾಡಿಕೊಳ್ಳುವುದು ಬೇಡ ಎಂಬುದಾಗಿ ಅವರು ಹೇಳಿದ್ದಾರೆ.

ಬಿಜೆಪಿಯ ರಾಜ್ಯ ಜಿಲ್ಲಾ ತಾಲೂಕುವಾರು ನಾಯಕರುಗಳ ಕಾರ್ಯಕರ್ತರ ಪರಿಶ್ರಮದಿಂದ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕೆ.ಎಂ.ಸುರೇಶ್ ರವರು ಗೆಲವು ಸಾಧಿಸಲಿದ್ದು, ಟೀಕಾಕಾರರುಗಳಿಗೆ ಚುನಾವಣಾ ಫಲಿತಾಂಶ ತಕ್ಕ ಉತ್ತರ ನೀಡಲಿದೆ ಎಂಬುದಾಗಿ ಬಿಜೆಪಿ ಜಿಲ್ಲಾ ಒಬಿಸಿ ಕಾರ್ಯದರ್ಶಿ ಕೇಶವಮೂರ್ತಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *