
ಹಿರಿಯೂರು :
ನಗರದ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಗಂಗಾ ಸಮೂಹ ವಿದ್ಯಾಸಂಸ್ಥೆಯಲ್ಲಿ ಅಕ್ಟೋಬರ್ 17ರಂದು ಧಾರವಾಡದ ಕನೆಕ್ಟ್ ಸಂಸ್ಥೆ ಸಹಯೋಗದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಬಯಲುಸೀಮೆಯ ಉದ್ಯೋಗ ಆಕಾಂಕ್ಷಿಗಳಿಗೆ “ಉದ್ಯೋಗ ಮೇಳ” ಆಯೋಜಿಸಲಾಗಿದೆ ಎಂಬುದಾಗಿ ಸಂಸ್ಥೆಯ ಸಿಇಒ ಪ್ರಶಾಂತ್ ಓಬಯ್ಯ ತಿಳಿಸಿದ್ದಾರೆ.
ಟಾಟಾ ಮೋಟಾರ್ಸ್, ಎನ್.ಟಿ.ಟಿ.ಎಫ್, ಲುಮ್ಯಾಕ್ಸ್, ಡೆನ್ಸೊ, ಕಿರ್ಲೋಸ್ಕರ್, ಸಾನ್ಸೆರಾ ಎಂಜಿನಿಯರಿಂಗ್, ಫೆಡರಲ್ ಮೊಗಲ್, ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ, ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮೋ, ಮತ್ತು ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಉದ್ಯೋಗಾವಕಾಶ ಪಡೆದುಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಎಂದಿದ್ದಾರೆ.
ಈ “ಉದ್ಯೋಗ ಮೇಳ” ದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ತರಬೇಕಾದ ದಾಖಲೆಗಳು ಬಯೋಡೇಟಾದ 10 ಪ್ರತಿಗಳು, ಅಂಕಪಟ್ಟಿಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ಪೋರ್ಟ್ ಅಳತೆ 8 ಭಾವಚಿತ್ರಗಳನ್ನು ತರಬೇಕು ಎಂಬುದಾಗಿ ಗಂಗಾ ಸಮೂಹ ವಿದ್ಯಾಸಂಸ್ಥೆಯ ಸಿಇಒ ಪ್ರಶಾಂತ್ ಓಬಯ್ಯ ತಿಳಿಸಿದ್ದಾರೆ.
