
ಹಿರಿಯೂರು :
ಭಾರತೀಯ ಜನತಾಪಾರ್ಟಿ, ಹಿರಿಯೂರು ಮಂಡಲದ ವತಿಯಿಂದ ಅಕ್ಟೋಬರ್ 23ರಂದು ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿಯಾದ ಕೆ.ಎಂ.ಸುರೇಶ್ ರವರನ್ನು ಬೆಂಬಲಿಸಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂಬುದಾಗಿ ಚುನಾವಣೆಯ ಗ್ರಾಮಾಂತರ ಸಂಚಾಲಕ ಕೇಶವಮೂರ್ತಿ ಹೇಳಿದರು.
ತಾಲೂಕಿನ ಹೊಸಯಳನಾಡು, ಹಳೆಯಳನಾಡು, ಟೀ.ನಾಗೇನಹಳ್ಳಿ, ಆರನಕಟ್ಟೆ, ರಂಗನಾಥಪುರ ಮತ್ತು ಆದಿವಾಲ ಫಾರ್ಮ್ ಶಾಲಾ-ಕಾಲೇಜುಗಳ ಪದವೀಧರ ಶಿಕ್ಷಕರನ್ನು ಶುಕ್ರವಾರ ಭೇಟಿ ಮಾಡಿ ಭಾರತೀಯ ಜನತಾಪಾರ್ಟಿ ಅಭ್ಯರ್ಥಿಯಾದ ಕೆ.ಎಂ.ಸುರೇಶ್ ರವರನ್ನು ಬೆಂಬಲಿಸಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಮತಯಾಚನೆ ಮಾಡಿ ಮಾತನಾಡಿದರು.

ಎನ್.ಡಿ.ಎ ಅಭ್ಯರ್ಥಿಯಾದ ಕೆ.ಎಂ.ಸುರೇಶ್ ರವರು ಕಳೆದ 30 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸತತವಾಗಿ ಸೇವೆ ಸಲ್ಲಿಸುತ್ತಿದ್ದು, ಪದವೀಧರರ ಸಮಸ್ಯೆಗಳನ್ನು ಬಲ್ಲವರಾಗಿದ್ದಾರೆ, ಉದ್ಯೋಗದ ಕೊರತೆ, ಅವಕಾಶಗಳ ಅಭಾವಗಳ ಅರಿತವರಾಗಿದ್ದು, ಸದನದಲ್ಲಿ ಪದವೀಧರ ಪರಧ್ವನಿಯಾಗಿರಲು ಸಮರ್ಥ ಅಭ್ಯರ್ಥಿಯಾಗಿದ್ದಾರೆ ಎಂಬುದಾಗಿ ತಿಳಿಸಿದರು
ಪದವೀಧರರಿಗಾಗಿ ಸ್ಪಷ್ಟ ದೃಷ್ಟಿಕೋನ ಹೊಂದಿರುವ ಕೆ.ಎಂ.ಸುರೇಶ್ ರವರ ಚಿಂತನೆಗಳಿಂದ ಉದ್ಯೋಗಾವಕಾಶಗಳ ವೃದ್ಧಿ, ಕೌಶಲ್ಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಸಮಾಲೋಚನೆಗಳ ಮೂಲಕ ಪದವೀಧರ ಶ್ರೇಯೋಭಿವೃದ್ಧಿಗೆ ಬದ್ಧರಾಗಿರುವುದರಿಂದ ಅವರಿಗೆ ತಮ್ಮ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕೆಂದು ಮನವಿ ಮಾಡಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಸಹ ಸಂಚಾಲಕ ನಿತಿನ್ ಗೌಡ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಗರಣ, ಭ್ರಷ್ಟಾಚಾರದ ಮೂಲಕ ಜನರ ವಿಶ್ವಾಸ ಕಳೆದುಕೊಂಡಿದೆ, ಸದನದಲ್ಲಿ ಬಹುಮತವಿರುವ ಅಹಂನಲ್ಲಿ ಭ್ರಷ್ಟಾಚಾರಿಗಳಿಗೆ ಸಮರ್ಥಿಸಿಕೊಳ್ಳುವ ಕಾರ್ಯದಲ್ಲಿ ಸರ್ಕಾರದ ಸಚಿವರು ಶಾಸಕರು ನಿರತರಾಗಿದ್ದಾರೆ ಎಂದರಲ್ಲದೆ,

ಆಗ್ನೇಯ ಪದವೀಧರ ಕ್ಷೇತ್ರದ ಎನ್.ಡಿ.ಎ.ಅಭ್ಯರ್ಥಿ ಕೆ.ಎಂ.ಸುರೇಶ್ ರವರು ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಜೊತೆಗೆ ಸಾವಿರಾರು ಜನರಿಗೆ ಉದ್ಯೋಗಾವಕಾಶ ಮಾಡಿ ಕೊಟ್ಟಿರುವುದು ಅವರ ಸೇವೆಯ ಆದರ್ಶ ಗುಣಗಳಾಗಿವೆ ಪದವೀಧರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸಮಾಲೋಚನೆಯ ಮೂಲಕ ಪದವೀಧರರ ಆಶಯಕ್ಕೆ ಬೆನ್ನೆಲುಬಾಗಿ ಇರುವ ಕೆ.ಎಂ.ಸುರೇಶ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಪರಮೇಶ್, ಪ್ರದೀಪ್, ದೇವರಾಜ್, ಲಕ್ಷ್ಮೀನಾರಾಯಣ, ಯಶವಂತ್, ಮಹೇಶ್, ಆಸಿಫ್, ದೇವರಾಜ್ ಇತರರು ಉಪಸ್ಥಿತರಿದ್ದರು.
