
ಹಿರಿಯೂರು :
ವಾಣಿವಿಲಾಸ ಪತ್ತಿನ ಸಹಕಾರ ಸಂಘವು ಪ್ರಸ್ತುತ ಸಾಲಿನಲ್ಲಿ 13ಕೋಟಿ 27ಲಕ್ಷ 39 ಸಾವಿರದ 684 ರೂಗಳ ವಹಿವಾಟು ನಡೆಸಿದ್ದು, ಸಂಘದ ದುಡಿಯುವ ಬಂಡವಾಳ 2 ಕೋಟಿ 80 ಲಕ್ಷದ 66 ಸಾವಿರದ 481 ರೂಗಳಿದ್ದು, ಈ ಸಾಲಿನಲ್ಲಿ 7 ಲಕ್ಷ 30 ಸಾವಿರದ 805 ರೂ.ಗಳ ನಿವ್ವಳ ಲಾಭಗಳಿಸಿ ಪ್ರಗತಿಯ ಹಾದಿಯಲ್ಲಿ ಸಾಗಿದೆ ಎಂಬುದಾಗಿ ವಾಣಿವಿಲಾಸ ಪತ್ತಿನ ಸಹಾಕಾರ ಸಂಘದ ಅಧ್ಯಕ್ಷರಾದ ಆಲೂರು ಹನುಮಂತರಾಯಪ್ಪ ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿನ ವಾಣಿವಿಲಾಸ ವಿದ್ಯಾಸಂಸ್ಥೆಯ “ವಾಣಿವಿಲಾಸ ಸಭಾಂಗಣ”ದಲ್ಲಿ ಏರ್ಪಡಿಸಲಾಗಿದ್ದ ವಾಣಿವಿಲಾಸ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ನಮ್ಮ ಸಹಕಾರ ಸಂಘ ಕಳೆದ 26 ವರ್ಷಗಳಲ್ಲಿ ಗ್ರಾಹಕರ ಮೇಲೆ ಯಾವುದೇ ರೀತಿಯ ದಾವೆಗಳಾಗಲಿ, ಮೊಕ್ಕದ್ದಮ್ಮೆಗಳಾಗಲಿ ದಾಖಲಿಸದೆ ಸಾಲ ವಸೂಲಿ ಮಾಡಲಾಗಿದ್ದು, ಸಂಘದ ಎನ್.ಪಿ.ಎ ಅಂದರೆ ವಸೂಲಿಯಾಗದ ಸಾಲಗಳು ಜೀರೋ ಪರ್ಸೆಂಟ್ ನಲ್ಲಿದ್ದು ಜಿಲ್ಲೆಯಲ್ಲಿಯೇ ಒಂದು ಮಾದರಿಯ ಉತ್ತಮ ಸಹಕಾರ ಸಂಘವಾಗಿದೆ ಎಮಬುದಾಗಿ ಅವರು ಹೇಳಿದರು.
ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಜಿ. ಪಂ.ಮಾಜಿ ಅಧ್ಯಕ್ಷರಾದ ಬಿ.ಎಸ್.ರಘುನಾಥ್ ಮಾತನಾಡಿ, ನಮ್ಮ ವಾಣಿವಿಲಾಸ ಪತ್ತಿನ ಸಹಕಾರ ಸಂಘ ಉತ್ತಮ ಷೇರು ಸದಸ್ಯರು ಹಾಗೂ ಉತ್ತಮ ಗ್ರಾಹಕರನ್ನು ಹೊಂದಿದ್ದು, ಯಾವುದೇ ಸಹಕಾರ ಸಂಘ ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ಉತ್ತಮ ಆಡಳಿತ ಮಂಡಳಿ, ಉತ್ತಮ ಸಿಬ್ಬಂದಿ ಹಾಗೂ ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಉತ್ತಮ ಗ್ರಾಹಕರನ್ನು ಹೊಂದಿರಬೇಕು ಎಂಬುದಾಗಿ ಅವರು ಹೇಳಿದರು.

ವಾರ್ಷಿಕ ಮಹಾಸಭೆಯ ನೋಟಿಸ್ ಅನ್ನು ಸಂಘದ ನಿರ್ದೇಶಕರಾದ ಟಿ.ಮಲ್ಲೇಶಪ್ಪನವರು ಸಭೆಯಲ್ಲಿ ಓದಿದರು, ಸಂಘದ ಆಡಳಿತ ಮಂಡಳಿ ವರದಿಯನ್ನು ನಿರ್ದೇಶಕ ಆರ್.ವಸಂತ್ ಕುಮಾರ್ ಸಭೆಗೆ ಮಂಡಿಸಿದರು. 2025-26ನೇ ಸಾಲಿನ ಲಾಭ-ನಷ್ಟ ತಃಖ್ತೆಯನ್ನು ಉಪಾಧ್ಯಕ್ಷ ಪಿ.ಆರ್.ಸತೀಶ್ ಬಾಬು ಸಭೆಗೆ ಓದಿ ತಿಳಿಸಿದರು. 2026-27ನೇ ಸಾಲಿನ ಆಯವ್ಯಯ ಬಜೆಟ್ ಅನ್ನು ವ್ಯವಸ್ಥಾಪಕಿ ಶ್ರೀಮತಿ ಹೇಮಲತಾ ಸಭೆಗೆ ಮಂಡಿಸಿದರು. ಆಸ್ತಿ ಜವಾಬ್ದಾರಿ ತಃಖ್ತೆಯನ್ನು ಲೇಖಪಾಲಕ ಶಿವರಾಜ್ ರವರು ಸಭೆಗೆ ಮಂಡಿಸಿ, ಅನುಮೋದನೆ ಪಡೆಯಲಾಯಿತು.
ಇದೇ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷರಾದ ಬಿ.ಎಸ್.ರಘುನಾಥ್, ಷೇರುದಾರ ಸದಸ್ಯರುಗಳಾದ ತಿಪ್ಪೇಸ್ವಾಮಿ, ಮುನೀಶ್, ಕೃಷ್ಣಮೂರ್ತಿ, ದಾಸಪ್ಪ, ಎ.ಕೆ.ಹನುಮಂತಪ್ಪ, ಶ್ರೀಮತಿ ಸೌಮ್ಯ, ಶ್ರೀಮತಿ ನಂದಿನಿ ಇವರುಗಳನ್ನು ಶಾಲು, ಹೊದಿಸಿ, ಸನ್ಮಾನಿಸಿ, ಗೌರವಿಸಲಾಯಿತು.
ಕಳೆದ 2025-2026ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಗಳ ಪ್ರೋತ್ಸಾಹಧನದ ಜೊತೆಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಿ ಸನ್ಮಾನಿಸಲಾಯಿತು. ಸಂಘದಲ್ಲಿ ಅತಿಹೆಚ್ಚಿನ ವ್ಯವಹಾರ ಮಾಡಿದಂತಹ ಗ್ರಾಹಕರುಗಳನ್ನು ಹಾಗೂ ಸಂಘದಲ್ಲಿ ಠೇವಣಿ ಮಾಡಿದಂತಹ ಹೂಡಿಕೆದಾರ ಸದಸ್ಯರುಗಳನ್ನು ಮತ್ತು ಸಂಘದಲ್ಲಿ ಸಾಲಸೌಲಭ್ಯ ಪಡೆದು, ಪ್ರಾಮಾಣಿಕವಾಗಿ ಸಂಘಕ್ಕೆ ಸಾಲ ಮರುಪಾವತಿ ಮಾಡಿರುವ ಸಂಘದ ಸದಸ್ಯರುಗಳನ್ನು ಶಾಲು ಹೊದಿಸಿ, ಪುಷ್ಪಮಾಲೆ, ಹಾಕಿ ಸನ್ಮಾನಿಸಿ, ಅಭಿನಂದಿಸಲಾಯಿತು.

ಈ ವೇದಿಕೆಯಲ್ಲಿ ವಾಣಿವಿಲಾಸ ಪತ್ತಿನ ಸಹಕಾರಸಂಘದ ಉಪಾಧ್ಯಕ್ಷರಾದ ಪಿ.ಆರ್.ಸತೀಶ್ ಬಾಬು, ಹಾಗೂ ನಿರ್ದೇಶಕರುಗಳಾದ ಟಿ.ಮಲ್ಲೇಶಪ್ಪ, ಎಚ್.ನಟರಾಜ್, ಆರ್.ವಸಂತ್ ಕುಮಾರ್, ಹೆಚ್.ಡೀಶಪ್ಪ, ಎಸ್.ಮೂರುಕಣ್ಣಪ್ಪ, ಜಿ.ಆರ್.ರಂಗನಾಥ್, ಸಿ.ಜಗನ್ನಾಥ್, ಶ್ರೀಮತಿಗಂಗಮ್ಮ, ಶ್ರೀಮತಿರಂಜಿತಾ ಇವರುಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆ ಅಧ್ಯಕ್ಷರು ಹಾಗೂ ಜಿ.ಪಂ.ಮಾಜಿ ಅಧ್ಯಕ್ಷರಾದ ಬಿ.ಎಸ್.ರಘುನಾಥ್, ವಾಣಿವಿಲಾಸಪತ್ತಿನ ಸಹಕಾರಸಂಘದ ವ್ಯವಸ್ಥಾಪಕಿ ಶ್ರೀಮತಿ ಹೇಮಲತಾ, ಲೇಖಪಾಲಕ ಶಿವರಾಜ್, ನಗದು ಗುಮಾಸ್ತ ಆರ್.ಎನ್.ಪ್ರಭಾಕರ್, ಸಾಲ ವಸೂಲಾತಿ ಪ್ರತಿನಿಧಿ ಕೆ.ಕಾಂತರಾಜ್, ಪಿಗ್ಮಿ ಸಂಗ್ರಹಗಾರ ಪಿ.ಎನ್.ಪರಮೇಶ್ವರಪ್ಪ, ಹಾಗೂ ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಕೋ-ಆರ್ಡಿನೇಟರ್ ಉಮೇಶ್ ಯಾದವ್ ಹಾಗೂ ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಪೂಜಾಯಾದವ್, ಸೇರಿದಂತೆ ಸಿಬ್ಬಂದಿ ವರ್ಗದವರು, ಷೇರುಸದಸ್ಯರು ಹಾಗೂ ಗ್ರಾಹಕರು ಪಾಲ್ಗೊಂಡಿದ್ದರು.
ಆರಂಭದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಶ್ರೀಮತಿ ವಸಂತಾ ಪ್ರಾರ್ಥಿಸಿದರು. ವಾಣಿವಿಲಾಸಪತ್ತಿನ ಸಹಕಾರಸಂಘದ ವ್ಯವಸ್ಥಾಪಕರಾದ ಶ್ರೀಮತಿಹೇಮಲತಾ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಕೋ-ಆರ್ಡಿನೇಟರ್ ಉಮೇಶ್ ಯಾದವ್ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ಎಲ್ಲರಿಗೂ ವಂದಿಸಿದರು.
