October 6, 2026
000000005

ಹಿರಿಯೂರು :

ಭದ್ರಾ ನೀರಿಗಾಗಿ ಸುಮಾರು 50 ವರ್ಷಗಳಿಂದ ಕಾದಿದ್ದೀರಿ, ಈಗ ನೀರು ಹರಿಸಲು ಆರಂಭಿಸಿದೆ ಕೇವಲ 20 ದಿನ ತಡೆದರೆ ನಿಗದಿಯಂತೆ ಎಲ್ಲಾ ಕೆರೆಗಳಿಗೆ ನೀರು ಬರಲಿದೆ ರೈತರು ಆತುರದಲ್ಲಿ ನಾಲೆಯನ್ನು ಹಾಳು ಮಾಡುವ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಬಾರದು ಎಂಬುದಾಗಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನವಿ ಮಾಡಿದರು.

ಭದ್ರಾ ಮೇಲ್ದಂಡೆ ನಾಲೆ ಹಾದುಹೋಗಿರುವ ತಾಲೂಕಿನ ಗುಡಿಹಳ್ಳಿ, ಭೂತಯ್ಯನಹಟ್ಟಿ, ಗೌನಹಟ್ಟಿ, ಕೆ.ಸಿ.ರೊಪ್ಪ, ಭರಂಪುರ, ದಾಸಣ್ಣನ ಮಾಳಿಗೆ, ಕಲ್ಲಹಟ್ಟಿ, ಐಮಂಗಲ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಅವರು ಸ್ಥಳೀಯ ರೈತರುಗಳೊಂದಿಗೆ ಮಾತನಾಡಿದರು.

ಚಿತ್ರದುರ್ಗ ಶಾಖ ಕಾಲುವೆಯ ಮೂಲಕ ಐಮಂಗಲ ಹೋಬಳಿಯ ಗೌಡಹಳ್ಳಿ, ಆದ್ರಾಳು, ಹುಲಿತೊಟ್ಲು ತಾವಂದಿ, ಸೂರ್ಯಗೊಂಡನಹಳ್ಳಿ, ಮರಡಿದೇವಿಗೆರೆ, ತಾಳವಟ್ಟಿ, ಬಸವಪ್ಪನಮಾಳಿಗೆಯ 12 ಕೆರೆಗಳಿಗೆ ಖಚಿತವಾಗಿ ನೀರು ಹರಿಸಲಾಗುತ್ತದೆ ನೀರು ಬರುವುದಿಲ್ಲ ಎಂಬ ಆತಂಕದಲ್ಲಿ ನಾಲೆಗೆ ಪಂಪ್ ಸೆಟ್ ಹಾಕಿ ಬಳಸುವುದು, ನಾಲೆಯನ್ನು ಒಡೆದು ನೀರು ಹರಿಸಿಕೊಳ್ಳುವುದು ಸರಿಯಲ್ಲ.

ನೀರು ಎಲ್ಲರಿಗೂ ಬೇಕಿದೆ ಕೆರೆಗಳು ತುಂಬಿದರೆ ಅಂತರ್ಜಲ ಹೆಚ್ಚುತ್ತದೆ ಎಂಬುದು ನೆನಪಿರಲಿ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಅಂದುಕೊಂಡಂತೆ ನೀರು ಹರಿಸಲು ಸಾಧ್ಯವಾಗಿಲ್ಲ ಮೂರು ಟಿಎಂಸಿ ಅಡಿ ನೀರು ಹರಿಸಲು ಮುಖ್ಯಮಂತ್ರಿಗಳು ಆದೇಶ ಮಾಡಿದ್ದು, ಯಾರು ಆತಂಕ ಪಡುವ ಅಗತ್ಯವಿಲ್ಲ ಎಂಬುದಾಗಿ ರೈತರನ್ನು ಸಮಾಧಾನ ಪಡಿಸಿದರು.

ಈಗಾಗಲೇ ಕೆ.ಸಿ.ರೊಪ್ಪ, ಆದರಾಳು, ಗೋಕಟ್ಟೆಗಳು ತುಂಬಿದ್ದು ರಾತ್ರಿ ವೇಳೆಗೆ ಸೂರಗೊಂಡನಹಳ್ಳಿ ಕೆರೆಗೆ ನೀರು ತಲುಪುವ ಸಾಧ್ಯತೆ ಇದೆ, ಅಲ್ಲಿನ ಎರಡು ಕೆರೆಗಳು ತಾವಂದಿಕೆರೆ ಒಂದು ವಾರದಲ್ಲಿ ನೀರು ತುಂಬುವ ನಿರೀಕ್ಷೆ ಇದೆ, ಕಲ್ಲಹಟ್ಟಿ ಕೆರೆ ತುಂಬಿದ್ದು ದೊಡ್ಡಕೆರೆಯತ್ತ ನೀರು ಹರಿಯತೊಡಗಿದೆ ಅಲ್ಲಿಂದ ಐಮಂಗಲ ಚಿಕ್ಕಕೆರೆ, ತಾಳವಟ್ಟಿ ಕೆರೆ ತುಂಬಿದ ನಂತರ ಸೊಂಡಿಕೆರೆ ಕಡೆ ನೀರು ಹೋಗಲಿದೆ

ಇದು ಪ್ರಾಯೋಗಿಕವಾಗಿ ಹರಿಸುತ್ತಿರುವ ನೀರು, ಯೋಜನೆಯ ಕಾಮಗಾರಿ ಪೂರ್ಣಗೊಂಡಲ್ಲಿ ನಿಗದಿಪಡಿಸಿದ ಪ್ರಮಾಣದಲ್ಲಿ ಎಲ್ಲರಿಗೂ ನೀರು ಸಿಗಲಿದೆ ಒಂದು ವೇಳೆ ನೀರು ಸಿಗದೇ ಹೋದರೆ ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ನೀರು ಬಿಡಿಸಲು ಪ್ರಯತ್ನ ಮಾಡುತ್ತೇನೆ ಎಂಬುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಸೂರಗೊಂಡನಹಳ್ಳಿಕೃಷ್ಣಮೂರ್ತಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಆರ್.ನಾಗೇಂದ್ರ ನಾಯಕ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಪ್ಪ, ನಗರಸಭೆ ಮಾಜಿ ಉಪಾಧ್ಯಕ್ಷ ಬಿ.ಎನ್.ಪ್ರಕಾಶ್, ಬಳಗಟ್ಟ ಮೂರ್ತಿ, ಐಮಂಗಲ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ತಿಪ್ಪೀರಯ್ಯ, ಅಣ್ಣಪ್ಪ, ತಿಪ್ಪೇಸ್ವಾಮಿ, ಕಲ್ಲಹಟ್ಟಿ ಹರೀಶ್, ಗಿಡ್ಡೋಬನಹಳ್ಳಿ ಅಶೋಕ್, ಬಸಣ್ಣ, ಸಿದ್ದೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *