October 6, 2026
00000002

ಹಿರಿಯೂರು :

ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡೆಯೂ ಅಷ್ಟೇ ಮುಖ್ಯ,  ಆಟೋಟಗಳಿಂದ ನಮ್ಮಲ್ಲಿ ಶಿಸ್ತು ಏಕಾಗ್ರತೆ ಸಹೋದರತ್ವ ಭಾವನೆ ಮೂಡುತ್ತದೆ, ಕ್ರೀಡೆಯಲ್ಲಿ ಗೆಲ್ಲುವುದಕ್ಕಿಂತ ಭಾಗವಹಿಸುವುದೇ ಮುಖ್ಯ, ಸೋಲು ಗೆಲುವುಗಳೆರಡು ಜೀವನದ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆಎಂಬುದಾಗಿ  ಬಿಜೆಪಿ ಮುಖಂಡರಾದ ರಾಜಣ್ಣ ಹೇಳಿದರು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜವನಗೊಂಡನಹಳ್ಳಿ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಬಹುಮಾನ ವಿತರಿಸಿ, ನಂತರ ಅವರು ಮಾತನಾಡಿದರು.

ಸೋಲಿನಿಂದ ಧೃತಿಗೆಡದೆ ಮುಂದಿನ ಬಾರಿ ಮತ್ತಷ್ಟು ಕಠಿಣ ಪರಿಶ್ರಮ ಪಡಬೇಕು, ಕ್ರೀಡೆಯು ಬರೀ ನಮಗೆ ಮನೋರಂಜನೆಯನ್ನು ನೀಡುವುದಿಲ್ಲ ಬದಲಾಗಿ ನಮ್ಮನ್ನು ದೈಹಿಕವಾಗಿ ಮಾನಸಿಕವಾಗಿ ಸದೃಢಗೊಳಿಸುತ್ತದೆ, ಇಂದು ಇಲ್ಲಿ ಭಾಗವಹಿಸಿ ಸ್ಪರ್ಧೆಯಲ್ಲಿ ವಿಜೇತರಾಗಿರುವ ಎಲ್ಲರಿಗೂ ನನ್ನ ಶುಭ ಹಾರೈಕೆಗಳು ಎಂದರು.

 ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ್ ಮಾಜಿ ಉಪಾಧ್ಯಕ್ಷರಾದ ದ್ಯಾಮಣ್ಣ,  ಬಿಜೆಪಿ ಯುವ ಮುಖಂಡರಾದ ಧನಂಜಯ್, ಚಿಗಳಿಕಟ್ಟೆ ದೇವರಾಜ್, ಬ್ಯಾರಮಡುಚಂದ್ರು, ಹಿಂಡಸಕಟ್ಟೆ ತಿಪ್ಪೇಸ್ವಾಮಿ, ಅಶೋಕ್,  ಶಿಕ್ಷಕರಾದ  ಶ್ರೀನಿವಾಸ್, ಅಶೋಕ್, ಮೋಹನ್, ಶಿವಮೂರ್ತಿ, ಶ್ರೀನಿವಾಸ್  ಜವನಗೊಂಡನಹಳ್ಳಿ,  ಹೋಬಳಿ ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *