
ಹಿರಿಯೂರು :
ಮಧ್ಯ ಕರ್ನಾಟಕದ ಜಲಪಾತ್ರೆ ವಿವಿಸಾಗರ ಜಲಾಶಯದ ಸಂಗ್ರಹ ಸಾಮರ್ಥ್ಯ 30 ಟಿಎಂಸಿ ಆದರೆ ಭದ್ರಾ ಮೇಲ್ದಂಡೆಯಲ್ಲಿ ಹಂಚಿಕೆ ಮಾಡಿರುವುದು ಎರಡು ಟಿಎಂಸಿ. ಇದಕ್ಕೂ ವಿಪರ್ಯಾಸ ಎಂದರೆ ವಿವಿಸಾಗರದಿಂದ ಬಳಕೆಯಾಗುವ ನೀರು 10 ಟಿಎಂಸಿ ಇಂಥ ಪರಿಸ್ಥಿತಿಯಲ್ಲಿ ತುಂಗಾದಿಂದ ಭದ್ರ ಕಾಮಗಾರಿ ವಿಳಂಬವಾಗಿ ಅಲ್ಲಿ ನೀರು ಬರುತ್ತಿಲ್ಲ ಎಂಬುದಾಗಿ ವಿವಿಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚು ಕಟ್ಟುದಾರ ರೈತರ ಹಿತರಕ್ಷಣ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ವಿ ವಿ ಸಾಗರ ಉಳಿಸಿ ಕಾರ್ಯಕ್ರಮದಲ್ಲಿ ಸರ್ವ ಪಕ್ಷಗಳ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಮುಖಂಡರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳ ಕುಡಿಯುವ ನೀರಿನ ಬೇಡಿಕೆಯನ್ನು ಮೊದಲು ಪೂರೈಸಬೇಕು, ಆದರೆ ಇದರ ಮಧ್ಯದಲ್ಲಿ ಶಿರಾ ಶಾಸಕ ಟಿ.ಬಿ.ಜಯಚಂದ್ರ ಕೈಗಾರಿಕೆಗಾಗಿ ನನಗೂ ಒಂದು ಟಿಎಂಸಿ ನೀರು ಬೇಕು ಎಂದು ಬೇಡಿಕೆ ಇಟ್ಟಿದ್ದು, ಬೇಡಿಕೆ ಇಡುವವರು ಮೊದಲು ವಿವಿಸಾಗರಕ್ಕೆ ಹತ್ತು ಟಿಎಂಸಿ ಮಂಜೂರು ಮಾಡಿಸಿಕೊಂಡು ಬಂದು ನಂತರ ನೀರು ತೆಗೆದುಕೊಂಡು ಹೋಗಲಿ,
ಆದರೆ ಅದು ಬಿಟ್ಟು ಶಿರಾ ಶಾಸಕ ಟಿ.ಬಿ.ಜಯಚಂದ್ರ ವಾಮ ಮಾರ್ಗದಲ್ಲಿ ಆದೇಶ ಮಾಡಿಸಲು ಪ್ರಯತ್ನ ಪಟ್ಟರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಅಲ್ಲದೆ ಇದರ ಬಗ್ಗೆ ವಿವಿಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚು ಕಟ್ಟುದಾರ ರೈತರ ಹಿತರಕ್ಷಣ ಸಮಿತಿ ನೇತೃತ್ವದಲ್ಲಿ ಬಹಿರಂಗ ಚರ್ಚೆಗೆ ಶಿರಾ ಶಾಸಕ ಟಿಬಿ ಜಯಚಂದ್ರ ಅವರನ್ನು ಆಹ್ವಾನಿಸುತ್ತೇವೆ ಅವರು ಎಂಬುದಾಗಿ ಅವರು ಸವಾಲು ಹಾಕಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಸಾಗರ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ದಾಖಲೆಗಳನ್ನು ಅನುಸರಿಸಿ ಹೈಕೋರ್ಟ್ ನಲ್ಲಿ ಬೇಕಾಬಿಟ್ಟಿ ನೀರು ಬಳಕೆಯನ್ನು ನಿರ್ಬಂಧಿಸುವಂತೆ ಪಿಐಎಲ್ ಸಲ್ಲಿಸುವುದು, ನೀರಿನ ಮಾಹಿತಿಗಳನ್ನು ಹಂಚಲು ಗ್ರಾಮ ಸಭೆಗಳನ್ನು ನಂತರ ಪಾದಯಾತ್ರೆ ಹಮ್ಮಿಕೊಳುವುದು ಒಂದು ವಾರದೊಳಗಾಗಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ನಂತರ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆಗೆದುಕೊಂಡು ಹೋಗಲು ಕ್ರಮವಹಿಸುವುದು
ನಂತರ ಹಿರಿಯೂರಿನಲ್ಲಿ ಜಿಲ್ಲೆಯ ಎಲ್ಲಾ ಎಂಎಲ್ಎಗಳು ಎಂಎಲ್ಸಿ ಗಳು ಜಿಲ್ಲಾ ಉಸ್ತುವಾರಿ ಸಚಿವರು ಸಂಸದರೊಂದಿಗೆ ಸಭೆ ನಡೆಸಿ. ಇದರ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುವುದು. ಇದಕ್ಕೂ ಸಮಸ್ಯೆ ಬಗೆಯರಿಯದಿದ್ದಲ್ಲಿ ಹಿರಿಯೂರು ಬಂದ್ ಮಾಡುವುದು, ಚುನಾವಣೆ ಬಹಿಷ್ಕಾರದ ಮೂಲಕ ಜಾಗೃತಿಗೊಳಿಸಿ,, ತಜ್ಞರ ಸಮಿತಿ ರಚಿಸಲು ಒತ್ತಾಯ ಮಾಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಸಭೆಯಲ್ಲಿ ರೈತಸಂಘಧ ಕಾರ್ಯಾಧ್ಯಕ್ಷ ಎಚ್.ಆರ್.ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ, ಆಲೂರು ಸಿದ್ದರಾಮಣ್ಣ, ಸಂಚಾಲಕ ಎಸ್.ಬಿ.ಶಿವಕುಮಾರ್, ಜೆಡಿಎಸ್ ವರಿಷ್ಠರಾದ ಕಂದಿಕೆರೆ ಯಶೋಧರ, ರಂಗೇನಹಳ್ಳಿ ಶಂಕರಮೂರ್ತಿ, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೆ.ಸಿ.ಹೊರಕೇರಪ್ಪ, ಬ್ಯಾಡರಹಳ್ಳಿ ಶಿವಕುಮಾರ್, ಕೆ.ಟಿ.ತಿಪ್ಪೇಸ್ವಾಮಿ, ವೆಂಕಟೇಶ್, ಪಿಟ್ಲಾಲಿ ಶ್ರೀನಿವಾಸ್, ಶಿವರಾಂ, ಆರ್.ಕೆ.ಗೌಡ ರಾಮಚಂದ್ರ ಕಸವನಹಳ್ಳಿ, ಕುಬೇರಪ್ಪ, ಕೆ.ಜಿ.ಹನುಮಂತರಾಯಪ್ಪ, ಉದ್ಯಮಿ ಆನಂದಶೆಟ್ರು, ಕರವೇ ಗೋ.ಬಸವರಾಜ್, ಸಕ್ಕರ ಗಿರಿ, ಹಿರಿಯ ಮುಖಂಡ ಸಿದ್ದಪ್ಪ, ವಂದೇ ಮಾತರಂ ದೇವರಾಜ್ ನಾಗಣ್ಣ, ಸ್ವಾಮಿ, ತಿಪ್ಪೇಸ್ವಾಮಿ, ತ್ರಯಂಬಕಮೂರ್ತಿ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಗಡಾರಿ ಕೃಷ್ಣಪ್ಪ, ಕಾರ್ಮಿಕ ಮುಖಂಡ ಪುಟ್ಟಸ್ವಾಮಿ, ಎಂಟಿಬಿ ನಾಯಕ, ಸವಿತಾ ಸಮಾಜದ ಮುಖಂಡ ಬಸವರಾಜ್, ವಕೀಲರಾದ ಶಿವಶಂಕರ್, ವಿವಿಪುರ ಪೇರಿಸ್ವಾಮಿ, ಸುಬ್ರಮಣ್ಯ, ಲಕ್ಕವನಹಳ್ಳಿ ಅರುಳ, ,ಮಮತಾ ಕೃಷ್ಣಮೂರ್ತಿ, ವಾಲ್ಮೀಕಿ ಸಂಘದ ಅಧ್ಯಕ್ಷ ಜೋಗಪ್ಪ, ದ್ವಿಚಕ್ರವಾಹನ ರಿಪೇರಿ ಮಾಲೀಕರ ಸಂಘದ ಜಿಲಾನ್ ಬಾಷಾ, ಹುಚ್ಚನಳ್ಳಿ ಅವಿನಾಶ್. ಬಸವರಾಜ್, ಉಪಸ್ಥಿತರಿದ್ದರು.
