September 12, 2026
0004

ಹಿರಿಯೂರು :

ಭದ್ರ ಮೇಲ್ದಂಡೆ ಯೋಜನೆಯ ಹೆಬ್ಬೂರು ಬಳಿಯ ವೈಜಂಕ್ಷನ್ ಮತ್ತು ಅಬ್ಬಿನಹೊಳಲು ಗ್ರಾಮಗಳ ರೈತರ ದಶಕಗಳ ಸಮಸ್ಯೆ, ಭದ್ರಾ ಮೇಲ್ದಂಡೆ ಇಂಜಿನಿಯರ್ ಗಳ ಅರೆಬರೆ ಕೆಲಸದಿಂದ ಭದ್ರಾದಿಂದ ಚಿತ್ರದುರ್ಗಕ್ಕೆ ಹರಿಸುವ ಪ್ರಯೋಗಿಕ ನೀರು ಒಂದೇ ದಿನಕ್ಕೆ ಸ್ಥಗಿತಗೊಂಡಿದೆ ಎಂಬುದಾಗಿ ಹೋರಾಟಗಾರ ಕಸವನಹಳ್ಳಿರಮೇಶ್ ಆಪಾದಿಸಿದ್ದಾರೆ.

ಮೊದಲನೆಯದು ಹೆಬ್ಬೂರು ಬಳಿಯ ವೈ ಜಂಕ್ಷನ್ ಸಮೀಪದ ರೈತರಿಗೆ  ಪಂಪ್ ಹೌಸ್ ನಿರ್ಮಾಣ ಮಾಡಿ ಹನಿ ನೀರಾವರಿ ಮೂಲಕ ನೀರು ಕೊಡುವುದು ಇದಕ್ಕೆ ಸಂಬಂಧಪಟ್ಟಂತೆ ಕಾಮಗಾರಿಯಾಗಿದೆ. ಒಂದು ಬಾರಿ ಎರಡು ಬಾರಿ ಟ್ರಯಲ್ ಸಹ ಆಗಿದೆ ಆದರೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡುತ್ತಿಲ್ಲ.

ಇದಕ್ಕೆ ಸಂಬಂಧಪಟ್ಟಂತೆ ಇಂಜಿನಿಯರ್ ಗಳು ಮತ್ತು ಗುತ್ತಿಗೆದಾರರು ಸರಿಯಾದ ರೀತಿ ಸಂವಹನ ನಡೆಸದೆ ಈ ರೀತಿ ಗೊಂದಲಕ್ಕೆ ಕಾರಣವಾಗಿದೆ. ಸ್ಥಳೀಯ ರೈತರಿಗೆ ನಮ್ಮ ಹೊಲಗಳಿಗೆ ಈಗಾಗಲೇ ನಿರ್ಮಾಣವಾಗಿರುವ ಪಂಪ್ ಹೌಸಿನಿಂದ ನೀರು ಕೊಟ್ಟು ಮುಂದೆ ತೆಗೆದುಕೊಂಡು ಹೋಗಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಈ ಪಂಪ ಹೌಸ್ ನಿರ್ಮಾಣ ಮಾಡಿದ ಗುತ್ತಿಗೆದಾರ ಮೇಘನಾ ಕನ್ಸ್ಟ್ರಕ್ಷನ್ ಕಂಪನಿಯವರು ನಮಗೆ ಕಂಪ್ಲೇಶನ್ ರಿಪೋರ್ಟ್ ಕೊಡಿ ಹಾಗೂ ಹಣ ಪಾವತಿಸಿ. ಆಗ ನಾವು ಪಂಪ್ ಹೌಸನ್ನು ಚಾಲು ಮಾಡುತ್ತೇವೆ ನೀರು ರೈತರ ಹೊಲಗಳಿಗೆ ಬಿಡುತ್ತೇವೆ ಎಂದು ಹೇಳುತ್ತಾರೆ. ಸ್ಥಳೀಯ ಕೆರೆಗಳಿಗೆ ನೀರು ಹರಿಸಲು ಬೇಡಿಕೆ ಇಟ್ಟಿದ್ದಾರೆ.

ಇದಕ್ಕೆ ಸಂಬಂಧಪಟ್ಟಂತ ಚೀಫ್ ಇಂಜಿನಿಯರ್ , ಸೂಪರ್ ಡೆಂಟ್ ಇಂಜಿನಿಯರ್ , ಕನ್ಸ್ಟ್ರಕ್ಷನ್ ಕಂಪನಿಯ ಹೊಣೆಗಾರರು, ಮತ್ತು ರೈತರ ಮಧ್ಯೆ ಒಂದು ಸರ್ವಸಮತ ಸಭೆ ನಡೆಯದೆ ಸಮಸ್ಯೆ ಗೊಂದಲದಲ್ಲಿ ಉಳಿದಿದೆ, ಇವೆರಡರ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ರಘುಮೂರ್ತಿಯವರು ಬಹಳಷ್ಟು ಸಾರಿ ಭದ್ರ ಮೇಲ್ದಂಡೆ ಇಂಜಿನಿಯರ್ ಗಳಿಗೆ ಬೇಕಾದರೆ ಸಮಯ ತೆಗೆದುಕೊಳ್ಳಿ ಯಾವುದೇ ಅಡೆತಡೆ ಆಗಬಾರದು ಎಂದು ನಮ್ಮ ಮುಂದೆ ಸಹ  ಹೇಳಿದ್ದಾರೆ.

ಆ ಸಂದರ್ಭದಲ್ಲಿ ಇಂಜಿನಿಯರ್ ಗಳು ಇಲ್ಲ ಸರ್ ಎಲ್ಲ ರೆಡಿ ಇದೆ ನಾಳೆನೇ ಬಂದು ನೀವು ಚಾಲು ಮಾಡಬಹುದು ಎಂದು ಹೇಳಿದರು, ಇದು ಮಾತುಕತೆ ನಡೆದು ಸುಮಾರು ರೂ.15 ದಿನ ಆಯ್ತು. ನೆನ್ನೆ ವಿದ್ಯುಕ್ತವಾಗಿ ಟ್ರಯಲ್ ರನ್ ಎರಡನೇ ಹಂತದ ಭದ್ರ ಮೇಲ್ದಂಡೆ ಯೋಜನೆ ನೀರನ್ನು ಚಿತ್ರದುರ್ಗ ಬ್ರಾಂಚ್ ಕೆನಾಲ್ ಮೂಲಕ ಹರಿಸುವ ಕಾರ್ಯಕ್ಕೆ ಉಸ್ತುವಾರಿ ಸಚಿವರು ನಮ್ಮೆಲ್ಲ ಶಾಸಕರು ಗಣ್ಯರು ರೈತರು ಚಾಲನೆ ಮಾಡಿದರು.

ಈ ರೀತಿಯಾಗಿ ನೀರು ಹರಿಸುವ ಸಂದರ್ಭದಲ್ಲಿ ಬಹು ನಿರೀಕ್ಷಿತ ಚಿತ್ರದುರ್ಗ ಜನರ ಭದ್ರ ಮೇಲ್ದಂಡೆ ಯೋಜನೆಗೆ ವಿಘ್ನವಾಗಿದೆ.. ಒಂದೆಡೆ ಸಚಿವರು ದಾವಣಗೆರೆ ಭಾಗದ ರೈತರ ಮನವೊಲಿಸಿ, ನೀರು ಹರಿಸಲು ಇದ್ದ ಅಡ್ಡಿಯನ್ನು ನಿವಾರಿಸಿದ್ದಾರೆ. ಇದರ ಮಧ್ಯದಲ್ಲಿ ಸಂಬಂಧಪಟ್ಟ ಇಂಜಿನಿಯರ್ ಗಳು ನಿರ್ಲಕ್ಷವಹಿಸಿ ಅಲ್ಲಿ ರೈತರು ನೀರು ತಡೆಗಟ್ಟಲು ಕಾರಣರಾಗಿದ್ದಾರೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಇಂಜಿನಿಯರ್ಗಳನ್ನು ತುರ್ತಾಗಿ ಸಸ್ಪೆಂಡ್ ಮಾಡಿಸಬೇಕೆಂದು ಒತ್ತಾಯಿಸಿದರು.

ಇದರ ಬಗ್ಗೆ ಮುಖ್ಯಮಂತ್ರಿಗಳು ಸಹ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ.. ಇಷ್ಟು ವರ್ಷಗಳ ಕಾಲ ಭದ್ರ ಮೇಲ್ದಂಡೆ ಇಂಜಿನಿಯರ್ ಗಳು ಸರಿಯಾಗಿ ಕೆಲಸ ಮಾಡದೆ ಎಲ್ಲಾ ಸಮಸ್ಯೆಗಳನ್ನು ಅಲ್ಲೇ ಬಿಟ್ಟಿದ್ದಾರೆ ಉದಾರಣೆಗೆ. ಮೊದಲನೇ ಪ್ಯಾಕೇಜ್ ನ ತುಂಗಾ ದಿಂದ ಭದ್ರಕ್ಕೆ ಲಿಫ್ಟ್ ಮಾಡುವ 12 ಕಿಲೋಮೀಟರ್ ಕಾಮಗಾರಿಯನ್ನು 17 ವರ್ಷದಿಂದ ಮಾಡಿದರು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ತುಮಕೂರು ಬ್ರಾಂಚ್ ಕ್ಯಾನಲನ್ನು ಇಲ್ಲಿಯವರೆಗೂ ಒಂದು ಒಂದು ಹಂತಕ್ಕೆ ತರಲು ಸಾಧ್ಯವಾಗಿಲ್ಲ… ಯುದ್ಧಕಾಲೇ ಶಸ್ತ್ರಾಭ್ಯಾಸ ಪರೀಕ್ಷೆ ಕಾಲ ವಿದ್ಯಾಭ್ಯಾಸ ಎನ್ನುವಂತೆ ಸಚಿವರು , ಮುಖ್ಯಮಂತ್ರಿಗಳು ಬರುತ್ತಾರೆ ಎಂದಾಗ ಮಾತ್ರ ಸಿಂಗರಿಸಿಕೊಂಡು ಬರುತ್ತಾರೆ. ಉಳಿದಂತೆ ಬದ್ಧತೆಯಿಂದ ಕೆಲಸ ಮಾಡಿದ ಇಂಜಿನಿಯರ್ಗಳನ್ನು ನಾನು ನೋಡೇ ಇಲ್ಲ.

ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರಾದ ರಘುಮೂರ್ತಿಯವರು ಭದ್ರಾ ಮೇಲ್ದಂಡೆ ಯೋಜನೆಯ ಇಂಜಿನಿಯರ್ ಗಳಿಗೆ ಮೇಜರ್ ಆಪರೇಷನ್ ಮಾಡಬೇಕು, ಆ ಮುಖಾಂತರ ಇರುವ ಸ್ವಲ್ಪ ಸಮಯದಲ್ಲಿ ಪ್ರಗತಿ ಕಾಣಬೇಕು ಚಿತ್ರದುರ್ಗ ಜಿಲ್ಲೆಗೆ ಭದ್ರ ಮೇಲ್ದಂಡೆ ನೀರು ಬರಬೇಕು ಎಂಬುದಾಗಿ ವಿವಿಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟು ದಾರ ರೈತರು ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *