
ಹಿರಿಯೂರು :
ಜನರ ವಿಶ್ವಾಸವೇ ನನ್ನ ಶಕ್ತಿ ಜನಸೇವೆಯೇ ನನ್ನ ಗುರಿ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ, ವಾರ್ಡ್‌ನ ಅಭಿವೃದ್ಧಿಗಾಗಿ ಸದಾ ನಿಮ್ಮೊಂದಿಗೆ ನಿಂತು ಕಾರ್ಯನಿರ್ವಹಿಸುವ ಸಂಕಲ್ಪ ನನ್ನದು. ಮುಂದಿನ ದಿನಗಳಲ್ಲಿಯೂ ನಿಮ್ಮೆಲ್ಲರ ಸಹಕಾರ, ಮಾರ್ಗದರ್ಶನ ಮತ್ತು ಆಶೀರ್ವಾದ ಸದಾ ನನ್ನೊಂದಿಗಿರಲಿ ಎಂಬುದಾಗಿ ಸುಹಾಸ್ ಸುಧಾಕರ್ ಹೇಳಿದರು.
ನಗರದ ವಾರ್ಡ್ ಸಂಖ್ಯೆ 27ರಲ್ಲಿ ಮನೆ ಮನೆಗೆ ಭೇಟಿ ನೀಡಿ, ಸಾರ್ವಜನಿಕರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ವಾರ್ಡ್‌ನ ಸ್ಥಳೀಯ ಸಮಸ್ಯೆಗಳು, ಸಾರ್ವಜನಿಕರ ಅಗತ್ಯಗಳು, ಸಲಹೆ–ಅಭಿಪ್ರಾಯಗಳು ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಜನರ ಮಾತುಗಳನ್ನು ಆಲಿಸಿ, ನಂತರ ಮಾತನಾಡಿದರು.
ಈ ಸಂದರ್ಭದಲ್ಲಿ ಮನೆ ಮನೆ ಭೇಟಿಯ ವೇಳೆ ವಾರ್ಡ್‌ನ ಜನತೆ ತೋರಿದ ಪ್ರೀತಿ, ವಿಶ್ವಾಸ, ಆತ್ಮೀಯ ಸ್ವಾಗತ ಮತ್ತು ಆಶೀರ್ವಾದ ನನ್ನ ಜನಸೇವೆಯ ಪಯಣಕ್ಕೆ ಮತ್ತಷ್ಟು ಶಕ್ತಿ ಹಾಗೂ ಪ್ರೇರಣೆ ತುಂಬಲಿದೆ ಎಂಬುದಾಗಿ ಅವರು ಸಂತಸ ವ್ಯಕ್ತಪಡಿಸಿದರು.
