September 13, 2026
00002

ಹಿರಿಯೂರು :

ರಾಜ್ಯದಲ್ಲಿ ಭೀಕರ ಬರ ಇರುವಾಗ ನೀರಿನ ವಿಚಾರ ಎತ್ತಿಕೊಂಡು ಅಕ್ಕಪಕ್ಕದ ಜಿಲ್ಲೆಯವರಿಗೆ ಜಗಳ ತಂದಿಡುವ ಕೆಲಸವನ್ನು ರಾಜಕಾರಣಿಗಳು ನಿಲ್ಲಿಸಬೇಕು. ಈ ಹಿಂದೆ ನಮ್ಮನ್ನಾಳಿದ ವಿವಿಧ ಪಕ್ಷದ ಮುಖಂಡರುಗಳು ಅಧಿಕಾರಕ್ಕೆ ಬರುವಾಗ ಕೊಟ್ಟ ಆಶ್ವಾಸನೆಗಳನ್ನು ನೆರವೇರಿಸಲು ಹೆಚ್ಚು ಗಮನಹರಿಸಬೇಕು ಎಂಬುದಾಗಿ ಲಕ್ಷ್ಮಣ್ ಹೂಗಾರ್ ಒತ್ತಾಯಿಸಿದರು.

ನಗರದಲ್ಲಿ ಬಯಲು ಸೀಮೆ ನೀರಾವರಿ ಹೋರಾಟ ಸಮಿತಿ ವತಿಯಿಂದ ಭದ್ರಾ ಮೇಲ್ದಂಡೆ ಯೋಜನೆ ಬಯಲು ಸೀಮೆ ಜನರ ಆ ಜನ್ಮ ಸಿದ್ಧ ಹಕ್ಕು ಎಂಬ ಘೋಷಣೆಯೊಂದಿಗೆ ಕಪ್ಪುಪಟ್ಟಿ ಧರಿಸಿ, ನಡೆಸಲಾದ “ವಾಣಿವಿಲಾಸಸಾಗರ ಜಲಾಶಯ ಉಳಿಸಿ” ಧರಣಿ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಸಿಂಹ ಪಾಲು ನೀರು ಸಿಗುವ ತುಂಗಾ ಜಲಾಶಯದ ನೀರನ್ನು ತ್ವರಿತವಾಗಿ ಭದ್ರ ಜಲಾಶಯಕ್ಕೆ ತರುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡಬೇಕು ಹಾಗೆಯೇ ನೀರು ದೇವರುಕೊಟ್ಟ ವರ ಅದನ್ನು ಬಳಸುವ ಸಮಾನಹಕ್ಕು ಸೃಷ್ಟಿಯ ಸಕಲ ಜೀವರಾಶಿಗಳಿಗೂ ಇದೆ, ನೀರು ರಾಷ್ಟ್ರೀಯ ಸಂಪತ್ತು ನೀರು ಕೊಡುವುದಿಲ್ಲ ಎಂದು ಹೇಳುವವರು ಸಂವಿಧಾನ ವಿರೋಧಿಗಳು ಅಂತವರ ವಿರುದ್ಧ ಶಾಂತಿಭಂಗ ಆರೋಪದಡಿ ಪ್ರಕರಣ ದಾಖಲಿಸಬೇಕು

ನೀರು ಪ್ರಕೃತಿಯ ಸಂಪತ್ತು, ಅದನ್ನು ಎಲ್ಲರಿಗೂ ಸಮಾನವಾಗಿ ಬಳಸುವ ಹಕ್ಕಿದೆ, ಬಯಲು ಸೀಮೆ ರೈತರು ಸೌಹಾರ್ದೈತವಾಗಿ ನೀರಿನ ಹಂಚಿಕೆಯನ್ನು ಮಾಡಿಕೊಂಡು ಸಹಬಾಳ್ಯ ನಡೆಸಬೇಕು, ತಮ್ಮ ರಾಜಕೀಯ ಭವಿಷ್ಯವನ್ನು ಕಾಪಾಡಿಕೊಳ್ಳಲು ನೀರಿನ ವಿಚಾರ ಎತ್ತಿಕೊಂಡು ನೀರಿನ ರಾಜಕೀಯ ಮಾಡುವ ರಾಜಕಾರಣಿಗಳು ರೈತರ ನಡುವೆ ಪರಸ್ಪರ ಬೆಂಕಿ ಹಚ್ಚುವ ಕೆಲಸವನ್ನು ಮಾಡಬಾರದು ಎಂಬುದಾಗಿ ಎಚ್ಚರಿಕೆ ನೀಡಿದರು.

ಇಂದು ನಡೆದ ವಾಣಿವಿಲಾಸ ಸಾಗರ ಉಳಿಸಿ ಹೋರಾಟದಲ್ಲಿ ವಿವಿಧ ಜಲಮೂಲಗಳಿಂದ ಎಷ್ಟು ಸಾಧ್ಯವೊ ಅಷ್ಟು ಗರಿಷ್ಠ ನೀರನ್ನ ವಾಣಿವಿಲಾಸಕ್ಕೆ ತರುವಂತಹ ಯೋಜನೆಗಳು ಜಾರಿಯಾಗುವ ಮೂಲಕ ವಾಣಿವಿಲಾಸ ಸಾಗರವನ್ನು ಜಲಪಾತ್ರೆಯಾಗಿ ಬಳಸಿಕೊಳ್ಳಬೇಕು ಎಂಬ ಹಕ್ಕೊತ್ತಾಯ ಮಾಡಿದರಲ್ಲದೆ, ಈಗಾಗಲೇ ವೇದಾವತಿ ಉಪನದಿ ಜಗಚಿ ನದಿ ನೀರು ಕೈ ತಪ್ಪಿದ್ದರಿಂದ ವಾಣಿ ವಿಲಾಸ ಸಾಗರ ಡೆಡ್ ಸ್ಟೋರೇಜ್ ತಲುಪಲು ಕಾರಣವಾಯಿತು ಎಂದರಲ್ಲದೆ,

ಆದ ಪ್ರಯುಕ್ತ ನಮಗೆ ಹೆಚ್ಚುವರಿ ನೀರನ್ನ ಭದ್ರಾ ಮೇಲ್ದಂಡೆ ಯೋಜನೆ ಮತ್ತು ಎತ್ತಿನಹೊಳೆಯಿಂದ ಕೂಡ ಪೂರೈಸಬೇಕು. ಆಗಿಂದಾಗೆ ವ್ಯರ್ಥವಾಗಿ ಸಮುದ್ರ ಸೇರುವ ತುಂಗಾ ಭದ್ರಾ ಜಲಾಶಯದ ನೀರನ್ನು ಬಯಲು ಸೀಮೆ ಕೆರೆಗಳಿಗೆ ತುಂಬಿಸುವ ಕೆಲಸ ಆಗಬೇಕಾಗಿದ್ದು,ಪ್ರತಿವರ್ಷ ವಾಣಿವಿಲಾಸ ಸಾಗರಕ್ಕೆ ಕನಿಷ್ಠ 10 ಟಿಎಂಸಿ ನೀರನ್ನು ಹರಿಸುವ ಮೂಲಕ ಈ ವಾಣಿವಿಲಾಸ ಸಾಗರವನ್ನು ಸಮೃದ್ಧಗೊಳಿಸಬೇಕು ಎಂದರಲ್ಲದೆ,

ಡಾ.ಮಧುಸೀತಪ್ಪ ಅವರ ಯೋಜನೆಯಂತೆ ಶರಾವತಿ ಇನ್ನಿರು ಅಗನಾಸಿನಿ ಬೇಡ್ತಿ ನದಿ ನೀರನ್ನು ವಾಣಿವಿಲಾಸ ಸಾಗರಕ್ಕೆ ತರುವ ಹೊಸ ಯೋಜನೆ ಪ್ರಾರಂಭಿಸಬೇಕಾಗಿದೆ. ಈ ಬಗ್ಗೆ ಹಿರಿಯ ಮುತ್ಸದ್ದಿ ರಾಜಕಾರಣಿಯಾದ ಜಯಚಂದ್ರ ಅವರು ಗಮನಹರಿಸುವುದನ್ನು ಬಿಟ್ಟು ನಮ್ಮ ಜನಗಳಿಗೆ ದಾರಿತಪ್ಪಿಸುವ ಕೆಲಸವನ್ನು ಮಾಡಬಾರದು ಎಂದು ಸಭೆಯು ಒಮ್ಮತದಿಂದ ಒತ್ತಾಯ ಮಾಡಲಾಯಿತು.

ಈ ಧರಣಿಯಲ್ಲಿ ರೈತಮುಖಂಡ ಹಾಗೂ ಪತ್ರಕರ್ತ ಲಕ್ಷ್ಮಣ್ ಹೂಗಾರ್, ನರೇನಹಳ್ಳಿ ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್, ರೈತಮುಖಂಡರುಗಳಾದ ಈಚಗಟ್ಟ ಸಿದ್ದವೀರಪ್ಪ ಕೆಪಿ ಶ್ರೀನಿವಾಸ್ ,ಎಸ್.ವಿ.ರಂಗನಾಥ್,  ಮಂಜುನಾಥ್ ಪ್ರೊಫೆಸರ್ ಶಿವಣ್ಣ ಪ್ರೊಫೆಸರ್ ಎಂಜಿ ರಂಗಸ್ವಾಮಿ ಗೋವರ್ಧನ್ ಫಿಲಾಲಿ, ಅರ್ಜುನ್ ಬ್ಯಾಡ್ರಳ್ಳಿ ಚಂದ್ರಗಿರಿ ದಿಂಡಾವರ ,ಕೆಜಿ ಗೌಡ ,ಪುಟ್ಟಸ್ವಾಮಿ ಕಾಮ್ರೇಡ್ ಪ್ರಸನ್ನ ,ಮಲ್ಲಪ್ಪನಳ್ಳಿ ಮಹಾಲಿಂಗಯ್ಯ ,ಕೆ.ಕೆ.ಹಟ್ಟಿ ಜಯಪ್ರಕಾಶ್,  ಜಗದೀಶ ಗಡಾರಿ ಕೃಷ್ಣಪ್ಪ, ಕರಿಕೆರೆ ತಿಪ್ಪೇಸ್ವಾಮಿ ವೆಂಕಟೇಶ್ ರೆಡ್ಡಿ, ಕೆ.ಸಿ.ವರಕ್ಕೇರಪ್ಪ ನಿರಂಜನ್ ಪುಟ್ಟಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *