September 12, 2026
002

ಹಿರಿಯೂರು :      

ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ವಿಭಿನ್ನ ಚಾಪು ಮೂಡಿಸಿದ ಮುಖ್ಯಮಂತ್ರಿಗಳ ಪೈಕಿ ಮೇಲ್ಪoಕ್ತಿಯಲ್ಲಿ ಕೇಳಿ ಬರುವ ಹೆಸರೇ ರಾಮಕೃಷ್ಣ ಹೆಗಡೆ ಅವರದು, ಇಂದು ಆಗಸ್ಟ್ 29 ಅವರ ಜನ್ಮ ಶತಮಾನೋತ್ಸವದ ದಿನ, 1926 ಆಗಸ್ಟ್ 29ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದಲ್ಲಿ ಮಹಾಬಲೇಶ್ವರ ಹೆಗಡೆ ಹಾಗೂ ಸರಸ್ವತಿ ಹೆಗಡೆ ಪುತ್ರರಾಗಿ ಜನಿಸಿದರು.

ಶ್ರೀಯುತ ರಾಮಕೃಷ್ಣ ಹೆಗ್ಗಡೆಯವರದು ಮೂಲತಃ ಕೃಷಿಕ ಕುಟುಂಬ, ಬಾಲ್ಯದ ಶಿಕ್ಷಣವನ್ನು ಇಲ್ಲಿಯೇ ಮುಗಿಸಿದ ನಂತರ  ಉನ್ನತ ಶಿಕ್ಷಣದ ಅಧ್ಯಯನವನ್ನು ಕಾಶಿ ಬನಾರಸ್ ಲಕ್ನೋದಂತಹ ಪ್ರತಿಷ್ಠಿತ  ವಿವಿಗಳಲ್ಲಿ  ಅಧ್ಯಯನ ಮಾಡಿದರು  ನ್ಯಾಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು, ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಪತ್ರಿಕೆಗಳಿಗೆ ಹಲವು ಲೇಖನಗಳನ್ನು ಬರೆಯುತ್ತಿದ್ದರು.

ಎಷ್ಟೋಬಾರಿ ತಾವೇ ಪತ್ರಕರ್ತನಾಗಬೇಕೆಂಬ ಮಹಾದಾಕಾಂಕ್ಷೆ  ಇತ್ತು ಎಂದು ಹೇಳಿಕೊಂಡಿದ್ದುoಟು, ಸಣ್ಣವಯಸ್ಸಿನಲ್ಲಿ ರಾಜ್ಯದಲ್ಲಿ ರೈತ ಚಳುವಳಿಯನ್ನ ರೂಪಿಸಿದ ರಾಮಕೃಷ್ಣ ಹೆಗಡೆ  ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದು, ಸಿದ್ದು ಕಾಂಗ್ರೆಸ್ ಪಕ್ಷದ ಮುಖಾಂತರ 1957ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು.

ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ 1975ರಲ್ಲಿ ರಾಷ್ಟ್ರದ ಮೇಲೆ ಏರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೈಲುವಾಸ ಕಂಡು ಹೊರಬಂದ ನಂತರ ಜನತಾ ಪಾರ್ಟಿ ಸೇರಿದರು 1983 ರಲ್ಲಿ 18 ಜನ ಭಾರತೀಯ ಜನತಾಪಕ್ಷದ ಸದಸ್ಯರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದ ಹೆಗ್ಗಡೆಯವರು  ದೇಶದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಭಾಜನರಾದವರು.

ತದನಂತರ ನಡೆದ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರು, ಪ್ರಮುಖವಾಗಿ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು  ನೀಡಿದರು  ಅಧಿಕಾರ ವಿಕೇಂದ್ರೀಕರಣದಲ್ಲಿ ಪ್ರಬಲ ನಂಬಿಕೆ ಇಟ್ಟಿದ್ದ ಅವರು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ತಂದು ಯಶಸ್ವಿಯಾದರು ಮುಂದೆ ಅದು ದೇಶಕ್ಕೆ ಮಾದರಿಯಾಯಿತು,

ಭ್ರಷ್ಟಾಚಾರ ತಡೆಯಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರಲು ದೇಶದಲ್ಲೇ ಮೊದಲ ಬಾರಿಗೆ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಿದರು ಆ ಮೂಲಕ ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ನಿಯಂತ್ರಣ ಹಾಕುವ ಕೆಲಸ ಮಾಡಿದರು  ಅಷ್ಟಲ್ಲದೆ ಅನೇಕ ಜನಪರ ಯೋಜನೆಗಳನ್ನ ಜಾರಿಗೆ ತಂದರು.

ಬಡ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಪಠ್ಯಪುಸ್ತಕ ವಿದ್ಯಾರ್ಥಿಗಳಿಗಾಗಿ ಬಸ್ ಪಾಸ್ ವಿಧವೆಯರಿಗೆ  ಗರ್ಭಿಣಿಯರಿಗೆ ಭತ್ಯೆ ರೈತರ ಸಾಲ ಮನ್ನಾ  ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ಧಿಗಾಗಿ ಆಯೋಗ ಅಭಿವೃದ್ಧಿ ನಿಗಮಗಳ ಸ್ಥಾಪನೆ ಪೌರಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ  ಸೇರಿದಂತೆ  ಹತ್ತುಹಲವು ಜನಪ್ರಿಯ ಕಲ್ಯಾಣಕಾರ್ಯಕ್ರಮಗಳನ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ.

ಅವರು ಜಾರಿಗೆ ತಂದ ಹಲವು ಯೋಜನೆಗಳು ದೇಶದಲ್ಲಿ ಮೊದಲ ಬಾರಿಗೆ ಜಾರಿಯಾದವು ಎಂಬುದನ್ನು  ನೋಡಿದಾಗ ತಮ್ಮನ್ನು ಆರಿಸಿ ಕಳುಹಿಸಿದ  ಮತದಾರರ ವರ್ಗದ ಮೇಲೆ ಅವರಿಗಿದ್ದ ಕಾಳಜಿ ಮತ್ತು ಬದ್ಧತೆಯನ್ನು ತೋರಿಸುತ್ತದೆ , ರಾಷ್ಟ್ರ ರಾಜಕಾರಣದಲ್ಲೂ ವಿಶೇಷ ಚಾಪು ಮುಡಿಸಿದ ಹೆಗ್ಗಡೆಯವರು  ಯೋಜನಾ ಆಯೋಗದ ಉಪಾಧ್ಯಕ್ಷರಾಗಿ  ಹಾಗೂ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಚಿವ ಸಂಪುಟದಲ್ಲಿ  ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ  ಸಮರ್ಥವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರು.

ದಕ್ಷ ಆಡಳಿತಗಾರರಾಗಿ ಜನನಾಯಕರಾಗಿ ಜನಾನು ರಾಗಿಯಾಗಿ  ಮತ್ತು ಅತ್ಯಂತ ಸ್ನೇಹಮಹಿ  ಸರಳತೆ ಮಾನವೀಯ ಸಂವೇದನೆ ಸಜ್ಜನಿಕೆ ವ್ಯಕ್ತಿಯಾಗಿದ್ದ ರಾಮಕೃಷ್ಣ ಹೆಗಡೆ  ಕರ್ನಾಟಕ ರಾಜಕಾರಣ ಕಂಡ ಅಪರೂಪದ ನಾಯಕ  ಅವರ  ತತ್ವಾದರ್ಶಗಳು  ಇಂದಿನ ಯುವ ಜನತೆಗೆ ಪ್ರಸ್ತುತವಾಗಿವೆ.ಕರ್ನಾಟಕ ಮತ್ತು ದೇಶಕ್ಕೆ ಅವರು  ನೀಡಿದ ಕೊಡುಗೆಯನ್ನ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಸ್ಮರಿಸಿ ಸಂಭ್ರಮಿಸೋಣ ಮುಖ್ಯವಾಗಿ ಅವರಿಗೆ ಗೌರವವನ್ನು ಸಲ್ಲಿಸೋಣ.     

ಲೇಖಕರು ಧನಂಜಯ.ಎನ್. ಮಹಾತ್ಮ ಗಾಂಧಿ ರಾಷ್ಟ್ರೀಯ ಸೇವಾಪ್ರಶಸ್ತಿ ಪುರಸ್ಕೃತರು ಹಿರಿಯೂರು

About The Author

Leave a Reply

Your email address will not be published. Required fields are marked *