
ಹಿರಿಯೂರು :
ಸಮಾಜದಲ್ಲಿ ನೊಂದವರ, ಬಲಹೀನ ಜನರ ಧ್ವನಿಯಾಗಿ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಚಂದ್ರವಳ್ಳಿ ದಿನಪತ್ರಿಕೆ ಇನ್ನಷ್ಟು ಯಶಸ್ಸನ್ನು ಸಾಧಿಸಲಿ ಎಂಬುದಾಗಿ ಸುಹಾಸ್ ಸುಧಾಕರ್ ರವರು ಶುಭಹಾರೈಸಿದರು.
ನಗರದ ಬಿ.ಎಲ್.ಗೌಡ ಬಡಾವಣೆಯಲ್ಲಿರುವ ಚಂದ್ರವಳ್ಳಿ ಕನ್ನಡ ದಿನಪತ್ರಿಕೆಯ ನೂತನ ಮುದ್ರಣಾಲಯದ ಕಾರ್ಯಾರಂಭ ಸಮಾರಂಭದಲ್ಲಿ ಭಾಗವಹಿಸಿ, ಪತ್ರಿಕಾ ಬಳಗಕ್ಕೆ ಶುಭಕೋರಿ ನಂತರ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಚಂದ್ರವಳ್ಳಿ ದಿನಪತ್ರಿಕೆ ವರದಿಗಾರರಾದ ಎಂ.ಎಲ್.ಗಿರಿಧರ್, ಉಪಸಂಪಾದಕ ಗಿರೀಶ್ ಹಾಗೂ ಅವರ ಪತ್ನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
