
ಹಿರಿಯೂರು :
ಕರ್ನಾಟಕ ಪಬ್ಲಿಕ್ ಶಾಲೆಗಳ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಉಚಿತ ಬಸ್ ವ್ಯವಸ್ಥೆ ಘೋಷಿಸಿತ್ತು. ಆದರೆ ಈಗ ಕೊಟ್ಟ ಭರವಸೆಯನ್ನು ಸರ್ಕಾರ ಮರೆತಿದೆ ಎಂಬುದಾಗಿ ಬಿಜೆಪಿ ಮುಖಂಡರಾದ ಎನ್.ಧನಂಜಯ ಖಂಡಿಸಿದ್ದಾರೆ.
ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಸರ್ಕಾರದ ಭರವಸೆ ಇನ್ನೂ ಈಡೇರದಿರುವ ಹಿನ್ನೆಲೆಯಲ್ಲಿ ಸುಮಾರು 25 ಸಾವಿರ ಮಕ್ಕಳ ಸ್ಥಿತಿ ಅತಂತ್ರವಾಗಿದೆ. ಸಾರಿಗೆ ವ್ಯವಸ್ಥೆ ಇರುತ್ತದೆ ಎಂಬ ವಿಶ್ವಾಸದಿಂದ ಹತ್ತಿರದ ಶಾಲೆ ಅಥವಾ ಹಾಸ್ಟೆಲ್ ಸೇರುವುದನ್ನು ಬಿಟ್ಟು ಕೆ.ಪಿ.ಎಸ್ ಶಾಲೆಗಳಿಗೆ ಸೇರಿದ ಮಕ್ಕಳು ಮತ್ತು ಅವರ ಪಾಲಕರು ಸಂಕಷ್ಟ ಪಡುತ್ತಿದ್ದಾರೆ.
ಈ ಮೂಲಕ ಕಾಂಗ್ರೆಸ್ ಸರ್ಕಾರವು ಯೋಜನೆ ಘೋಷಿಸುವಲ್ಲಿ ತೋರುವ ಉತ್ಸಾಹವನ್ನು ಯೋಜನೆಯನ್ನು ಜಾರಿಗೊಳಿಸುವಲ್ಲಿ ತೋರಿಸುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಆರೋಪಿಸಿದ್ದಾರೆ.
