
ಹಿರಿಯೂರು :
ಸಾರ್ವಜನಿಕರ ರಕ್ಷಣೆಗಾಗಿ ಟೊಂಕಕಟ್ಟಿ ನಿಂತು, ಪುಡಾರಿಗಳ ಸೊಕ್ಕು ಮುರಿಯುವ ಮೂಲಕ ಪೋಲೀಸ್ ಪವರ್ ಎಂದರೆ ಏನು ಎಂಬುದನ್ನು ದುಷ್ಟ ಜನರಿಗೆ ಪರಿಚಯ ಮಾಡಿಕೊಟ್ಟ ದಕ್ಷ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಐ.ಪಿ.ಎಸ್. ಪೋಲೀಸ್ ಅಧಿಕಾರಿ ಶ್ರೀಯುತರ ವಿ.ಡಿ.ಚನ್ನಣ್ಣನವರಿಗೆ “ಹಿರಿಯೂರುನ್ಯೂಸ್” ತಂಡದ ವತಿಯಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಲಾಗಿದೆ.
ಅವರ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಶ್ರೀಯುತ ರವಿ.ಡಿ.ಚನ್ನಣ್ಣ ನವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಆ ಭಗವಂತ ಆರೋಗ್ಯ ಆಯಸ್ಸು ಯಶಸ್ವಿನ ಜೊತೆಗೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ಎಂಬುದಾಗಿ “ಹಿರಿಯೂರು ನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆ ರಂಗನಾಥ್ ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್ ಯಾದವ್, ಪರಮೇಶ್ವರಪ್ಪ, ವೆಂಕಟೇಶ್, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ, ಇವರುಗಳು ಶುಭಹಾರೈಸಿದ್ದಾರೆ.
