
ಹಿರಿಯೂರು :
ಮಾಜಿ ಸಚಿವರಾದ ಡಿ.ಸುಧಾಕರ್ ಅವರ ನಿಧನದಿಂದ ಕ್ಷೇತ್ರದಲ್ಲಿ ಅನಿರೀಕ್ಷಿತವಾಗಿ ಉಪಚುನಾವಣೆಯು ಎದುರಾಗಿದೆ, ನಾನು ಸಹ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೋ ಅವರನ್ನು ಎಲ್ಲರೂ ಸೇರಿ ಗೆಲ್ಲಿಸೋಣ ಎಂಬುದಾಗಿ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಸಲಹೆ ನೀಡಿದರು.
ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಾಜಿಸಚಿವ ಡಿ.ಸುಧಾಕರ್ ನುಡಿನಮನ ಕಾರ್ಯಕ್ರಮದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು, ಇಂತಹ ಸಮಯದಲ್ಲಿ ಮುಖಂಡರು ಒಗ್ಗಟ್ಟು ಪ್ರದರ್ಶಿಸಬೇಕು ಯಾರಿಗೇ ಟಿಕೆಟ್ ಸಿಕ್ಕರೂ ಉಳಿದವರು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂಬುದಾಗಿ ಹೇಳಿದರು.
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ, ನುಡಿನಮನ ಕಾರ್ಯಕ್ರಮ ಸುಧಾಕರ್ ಕುಟುಂಬದ ಕಾರ್ಯಕ್ರಮ ಎಂದು ಯಾರೂ ಭಾವಿಸಬಾರದು, ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಭದ್ರೆ ನೀರನ್ನು ಜಿಲ್ಲೆಗೆ ತರಲು ಸುಧಾಕರ್ ಪಟ್ಟಿರುವ ಶ್ರಮ ಎಲ್ಲರಿಗೂ ತಿಳಿಯಬೇಕು, ನಮ್ಮ ಭಾಗದ ಎಲ್ಲಾ ಸ್ವಾಮೀಜಿಗಳನ್ನು ನುಡಿನಮನ ಕಾರ್ಯಕ್ರಮಕ್ಕೆ ಕರೆಸೋಣ ಎಂಬುದಾಗಿ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿಶಾಸಕಿ ಪೂರ್ಣಿಮಾಶ್ರೀನಿವಾಸ್, ವಿಶ್ವೇಶ್ವರ ಜಲನಿಗಮದ ನಿವೃತ್ತ ಅಧಿಕಾರಿ ಎಂ.ಡಿ.ಸಣ್ಣಚಿತ್ತಯ್ಯ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸುಧಾಕರ್ ಸಹೋದರ ಡಿ.ಎಸ್.ಕುಮಾರ್, ಡಿಸಿಸಿ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ರಘು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪಾಪಣ್ಣ, ಗೀತಾ ನಾಗಕುಮಾರ್, ನಾಗೇಂದ್ರನಾಯ್ಕ. ಅನಂತ್, ಗೀತಾನಂದಿನಿಗೌಡ, ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿರಮೇಶ್, ಈರಲಿಂಗೇಗೌಡ, ಮೈಲಾರಪ್ಪ, ಜಿ.ಆರ್.ಸುಜಾತ, ನಾಗರತ್ನಮ್ಮ, ಸಂಪತ್ ಕುಮಾರ್, ಇಂದಿರಾ ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.
