
ಹಿರಿಯೂರು :
ನಗರದ ವೇದಾವತಿ ಬಡಾವಣೆಯ ನಿವಾಸಿ ರತ್ನಮ್ಮ ಅವರ ಮನೆಯಲ್ಲಿ ಜೂನ್ 24 ರಂದು ರಾತ್ರಿ ಕಳ್ಳತನವಾಗಿದ್ದು, ಸುಮಾರು 73 ಸಾವಿರ ರೂಗಳ 10 ಗ್ರಾಂ ಚಿನ್ನ ಕಳ್ಳತನವಾಗಿದೆ ಎಂಬುದಾಗಿ ರತ್ನಮ್ಮ ರವರು ನೀಡಿದ ದೂರನ್ನು ಆಧರಿಸಿ, ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಣೆಬೆನ್ನೂರು ನಗರದ ಪರಶುರಾಮ ಚಂದಳ್ಳಿ ಹಾಗೂ ಶಿವಮೊಗ್ಗದ ಸಚಿನ್ ಬಂಧಿತರು, ರತ್ನಮ್ಮ ಅವರ ಮನೆಯ ಬೀಗ ಮುರಿದು, ರೂ 48ಸಾವಿರ ನಗದು ಹಾಗೂ 10 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿತ್ತು. ಪ್ರಕರಣದ ಬೆನ್ನು ಹತ್ತಿರ ಪೋಲೀಸರು ಆರೋಪಿಗಳಿಂದ ಒಟ್ಟು 18 ಲಕ್ಷ ಮೌಲ್ಯದ 138ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಸ್.ಪಿ.ರಂಜಿತ್ ಕುಮಾರ್ ಬಂಡಾರು ಅವರು ಕಾರ್ಯಾಚರಣೆಗಾಗಿ ಹಿರಿಯೂರು ಉಪವಿಭಾಗದ ಡಿ.ವೈ.ಎಸ್.ಪಿ ಶಿವಕುಮಾರ್ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಮಹಮದ್ ಸಿರಾಜ್, ಬೆರಳಚ್ಚು ವಿಭಾಗದ ಇನ್ಸ್ ಪೆಕ್ಟರ್ ವಿಶ್ವನಾಥ್, ಎಸ್.ಐ.ಭೀಮನಗೌಡ ಪಾಟೀಲ್, ಸಿಬ್ಬಂದಿ ಚೇತನ್, ಮಂಜುನಾಥ್, ದೇವೇಂದ್ರಪ್ಪ, ಸುರೇಶ್ ನಾಯ್ಕ, ಎಚ್.ಸಿದ್ಧಲಿಂಗೇಶ್ವರಯಳವಟ್ಟಿ, ಸುದರ್ಶನ್ ಗೌಡ,ಶಿವಪ್ಪ, ನಾಗನಾಯ್ಕ್ ಹಾಗೂ ಶರಣಬಸಪ್ಪ ಅವರನ್ನೊಳಗೊಂಡ ತಂಡವನ್ನು ರಚಿಸಿದ್ದರು. ತಂಡದ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
