
ಹಿರಿಯೂರು :
ಇಡೀ ಕರುನಾಡ ಕನ್ನಡಿಗರ ಮನಸ್ಸನ್ನು ಕೇವಲ ತಮ್ಮ ವಾಕ್ ಚಾತುರ್ಯದಿಂದ ಗೆದ್ದಿರುವ ಅಧ್ಬುತ ಕಲಾವಿದ, ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರೂಪಕನಾಗಿ ಹೆಸರು ಮಾಡಿರುವುದಲ್ಲದೆ, ಕಿರುತೆರೆಯ ಕಾರ್ಯಕ್ರಮ ‘ಮಜಾ ಟಾಕೀಸ್’ನ ಮೂಲಕ ಜನರನ್ನು ಮೋಡಿ ಮಾಡಿರುವ ಮಾತಿನ ಮಲ್ಲ, ಕನ್ನಡದ ಖ್ಯಾತ ಹಿರಿಯ ನಟ ಲೋಕೇಶ್ ಹಾಗೂ ಕಲಾವಿದೆ ಗಿರಿಜಾಲೋಕೇಶ್ ರವರ ಪುತ್ರರಾದ ಸೃಜನ್ ಲೋಕೇಶ್ ರವರಿಗೆ “ಹಿರಿಯೂರುನ್ಯೂಸ್” ತಂಡದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಲಾಗಿದೆ.
ಅವರ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ನಟ ಸೃಜನ್ ಲೋಕೇಶ್ ರವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಆ ಭಗವಂತ ಆರೋಗ್ಯ ಆಯಸ್ಸು ಯಶಸ್ವಿನ ಜೊತೆಗೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ಎಂಬುದಾಗಿ “ಹಿರಿಯೂರು ನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ಕರ್ನಾಟಕ ಮಾಧ್ಯಮಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಕೇಶವಮೂರ್ತಿ, ಶ್ರೀಪಾದ್ ವಸಿಷ್ಟ, ಶಿವರಾಜ್, ನಾಯಕ್, ಉಮೇಶ್ ಯಾದವ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ, ಇವರುಗಳು ಶುಭ ಹಾರೈಸಿದ್ದಾರೆ.
