July 29, 2026
000001

ಹಿರಿಯೂರು :

ಮಾನವ ಬಂಧುತ್ವ ವೇದಿಕೆ ರಾಜ್ಯದ ಪ್ರತಿ ಹಳ್ಳಿಗಳಲ್ಲಿ ಕೆಲಸ ಮಾಡುತ್ತಿದ್ದು, ಈಗಾಗಲೇ ಮೌಡ್ಯತೆ , ಹಾಗೂ ಶಿಕ್ಷಣ ವಿಚಾರಧಾರೆಗಳ ಮೂಡಿಸುವ ಬಹು ದೊಡ್ಡ ವೇದಿಕೆಯಾಗಿದೆ, ಮಾನವಬಂಧುತ್ವ ವೇದಿಕೆ ವಿಚಾರಗಳು ಪ್ರತಿ ಸಮಾಜದ ಜನರಿಗೆ ತಲುಪುವ ನಿಟ್ಟಿನಲ್ಲಿ ವೇದಿಕೆ ಸದಸ್ಯರು ಶ್ರಮಿಸುತ್ತಿದ್ದಾರೆ ಎಂಬುದಾಗಿ ಅದಿಜಾಂಭವ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಜಿ.ಎಸ್.ಮಂಜುನಾಥ್ ಹೇಳಿದರು.

ನಗರದ ರೋಟರಿ ಭವನದಲ್ಲಿ ತಾಲ್ಲೂಕು ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ತಾಲ್ಲೂಕು ಗ್ರಾಮ ಸಂಚಾಲಕರ ವಿಚಾರ ಸಂಕಿರಣ ಹಾಗೂ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಂದಿಕೆರೆ ಸುರೇಶ್ ಬಾಬು ರವರು ಮಾತನಾಡಿ, ಸುಮಾರು ವರ್ಷಗಳಿಂದ ಮಾನವ ಬಂಧುತ್ವ ವೇದಿಕೆ ಮೌಡ್ಯತೆಯ ವಿರುದ್ದ ನಿರಂತರ ಹೋರಾಟ ನಡೆಸುತ್ತಿದೆ, ಸತೀಶ್ ಜಾರಕಿಹೊಳಿ ಸಾಹೇಬರು ಬುದ್ಧ, ಬಸವ, ಅಂಬೇಡ್ಕರ್, ಸಿದ್ಧಾಂತ ಮೈಗೂಡಿಸಿಕೊಂಡು, ಬಂಧುತ್ವ ಅವರ ಕನಸು ವಿದ್ಯಾರ್ಥಿಗಳು, ಹೋರಾಟಗಾರರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶ ಸಿಗಬೇಕೆಂದು ಹೇಳಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಡಿ.ಕೋಟೆ ಚಂದ್ರಪ್ಪ ಮಾತನಾಡಿ, ಮಾನವ ಬಂಧುತ್ವ ವೇದಿಕೆಯ ವಿಚಾರಧಾರೆಗಳನ್ನು  ನಾನು ಕೇಳಿದ್ದೇನೆ, ಸತೀಶ್ ಜಾರಕಿಹೊಳಿ ರವರು ಈ ರಾಜ್ಯದ ಪ್ರತಿ ಸಮಾಜದ  ರಾಜಕೀಯ, ಶಿಕ್ಷಣ ಸಮಾನತೆಗಾಗಿ ಅವರು ಹೋರಾಡುತ್ತಿದ್ದು, ರಾಜ್ಯದಲ್ಲಿ ಇಂತಹ ರಾಜಕಾರಣಿ ನೋಡಲು ಸಾಧ್ಯವಿಲ್ಲ  ಎಂದು ಹೇಳಿದರು.

ರೈತ ಹೋರಾಟಗಾರರಾದ ಕಸವನಹಳ್ಳಿರಮೇಶ್ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ರವರ ಆದರ್ಶ ಅದು ಮಾನವ ಬಂಧುತ್ವ ವೇದಿಕೆ, ಇಂದು ಶ್ರೀಮಂತರ ಮನೆಗಳಲ್ಲಿ ಬುದ್ಧ ಪ್ರತಿಮೆಗಳು ಬಂಗಾರ, ಬೆಳ್ಳಿ, ಮರದ ಕಟ್ಟಿಗೆಯಲ್ಲಿ ಸ್ಥಾಪಿಸಿದರೆ ಸಾಲದು, ಅವರ ಆದರ್ಶಗಳನ್ನು ನಡತೆ ಮುಖಾಂತರ ತೋರಿಸಬೇಕು ಎಂಬುದಾಗಿ ಹೇಳಿದರು.

ತಾಲೂಕು ಗ್ಯಾರಂಟಿ  ಯೋಜನೆಯ ಅಧ್ಯಕ್ಷರಾದ ಸುರಗೊಂಡನಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಮೊಬೈಲ್ ಗೀಳಿನಲ್ಲಿ ಯುವಜನತೆ ಹಾಳಾಗುತಿದೆ, ಹಳ್ಳಿಗಳಲ್ಲಿ ವಿದ್ಯಾಭ್ಯಾಸದ ಕೊರತೆ ಎದ್ದು ಕಾಣುತ್ತಿದೆ ಮೊಬೆಲ್ ವ್ಯಾಮೋಹ ಬಿಟ್ಟು ಪುಸ್ತಕ ಹಿಡಿದು ಓದುವ ಹವ್ಯಾಸ ಬೆಳಸಿಕೊಳ್ಳುವ ಮೂಲಕ ಉತ್ತಮ ವಿದ್ಯಾವಂತರಾಗಿ ಹೊರಹೊಮ್ಮಬೇಕು ಎಂಬುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಸುಜಾತರವರು ಮಾತನಾಡಿ, ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಬಂಧುತ್ವ ಕಟ್ಟುವ ಕೆಲಸ ಆಗಬೇಕು, ಜೊತೆಗೆ ಮಾನ್ಯ ಸಚಿವರಾದ ಸತೀಶ್ ಜಾರಕಿಹೊಳಿರವರ ಆದರ್ಶ ನಮಗೆ ತುಂಬಾ ಮೆಚ್ಚುಗೆಯಾಗಿದ್ದು, ಹಾಗಾಗಿ ಬಂಧುತ್ವ ವೇದಿಕೆ ಕಟ್ಟುವಲ್ಲಿ ಈ ವೇದಿಕೆಯ ಎಲ್ಲಾ ಕಾರ್ಯಗಳಿಗೆ ನನ್ನ ಸಾಹಕರ ಇದೆ ಎಂಬುದಾಗಿ ಹೇಳಿದರು.

ಈ ವೇದಿಕೆಯಲ್ಲಿ ತಾಲ್ಲೂಕು ಸಂಚಾಲಕರಾದ ಕೂನಿಕೆರೆ ಹೆಚ್.ಎಸ್.ಮಾರುತೇಶ್, ರೈತ ಮುಖಂಡರಾದ ಕೆ.ಸಿ.ಹೊರಕೇರಪ್ಪ, ಕಾರ್ಮಿಕ ಪರಿಷತ್ ಅಧ್ಯಕ್ಷರಾದ ಪರಮೇಶ್,  ಕುರುಬ ಸಮಾಜದ ಅಧ್ಯಕ್ಷರಾದ ಹರ್ತಿಕೋಟೆಮಹಾಂತೇಶ್, ಭಗೀರಥ ಸಮಾಜ ಅಧ್ಯಕ್ಷರಾದ ಪದ್ಮನಾಭ , ಸವಿತಾ ಸಮಾಜದ ಅಧ್ಯಕ್ಷರಾದ ನರಸಿಂಹಮೂರ್ತಿ, ಚಿತ್ರದುರ್ಗ ತಾಲ್ಲೂಕು ಸಂಚಾಲಕರಾದ ತಮಟೆಕಲ್ಲುಹನುಮಂತಪ್ಪ, ಜಿಲ್ಹಾ ಮಹಿಳಾ ಸಂಚಾಲಕರಾದ ಬೈಲಮ್ಮ, ಚಳ್ಳಕೆರೆ ಸಂಚಾಲಕರಾದ ಆಯಿಷ, ಹಿರಿಯೂರು ಸಂಚಾಲಕರಾದ ಅಂಬಿಕಾ, ಮೊಳಕಾಲ್ಮುರು ಸಂಚಾಲಕರಾದ ಮಾರುತಿ, ಚಳ್ಳಕೆರೆ ಸಂಚಾಲಕರಾದ ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಸಂಘಟನೆ ಪದಾಧಿಕಾರಿಗಳು ಹಾಗೂ ವಿವಿಧ ಸಮುದಾಯದ ನಾಯಕರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *