
ಹಿರಿಯೂರು :
ಇಂದಿನ ಯುವಜನತೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದು, ಸಮಾಜದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಮಾದಕ ವಸ್ತುಗಳು ಮತ್ತು ತಂಬಾಕು ಪದಾರ್ಥಗಳು ಸೇವನೆ ಹಾಗೂ ಮಾರಾಟವನ್ನು ನಿಯಂತ್ರಿಸಲು ಜನರ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂಬುದಾಗಿ ಡಾ.ತ್ರಿವೇಣಿ ಹೇಳಿದರು
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರದಂದು ಕಾರ್ಯನಿರತ ಪತ್ರಕರ್ತರಿಗೆ ಹಮ್ಮಿಕೊಳ್ಳಲಾಗಿದ್ದ ತಂಬಾಕು ಪದಾರ್ಥಗಳ ಅರಿವು ಜಾಗೃತಿ ನಿಯಂತ್ರಣ ದುಷ್ಪರಿಣಾಮಗಳ ಬಗ್ಗೆ ನಡೆದ ಮಾಹಿತಿ ಕಾರ್ಯಗಾರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ, ಅವರು ಮಾತನಾಡಿದರು.
ತಂಬಾಕು ಮತ್ತು ಅದರ ಸಂಬಂಧಿತ ಪದಾರ್ಥಗಳಿಂದ ಮಾರಣಂತಿಕ ಖಾಯಿಲೆಗಳು ಹಬ್ಬುತ್ತಿವೆ, ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಪ್ರತಿವರ್ಷ ಹತ್ತು ಲಕ್ಷಕ್ಕೂ ಅಧಿಕ ಪ್ರಮಾಣದ ಜನರ ಸಾವು ದಾಖಲಾಗಿದೆ ಹೊಸ ಹೊಸ ಬಗೆಯ ತಂಬಾಕುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಅದರಲ್ಲಿನ ವಿಷಕಾರಿ ಅಂಶ ಶ್ವಾಸಕೋಶ ಮತ್ತು ಮೆದುಳಿಗೆ ಹಾನಿಮಾಡುತ್ತಿದೆ

ಬೀಡಿ ಸಿಗರೇಟ್ ಗಳ ಸೇವನೆಯಿಂದ ಹೊರ ಬರುವ ಹೊಗೆ ಸಾರ್ವಜನಿಕವಾಗಿ ಪರಿಸರದ ಮೇಲೂ ಪರಿಣಾಮ ಬೀರುತ್ತಿದೆ ತಂಬಾಕಿನಲ್ಲಿ ಕಂಡು ಬರುತ್ತಿರುವ ನಿಕೋಟಿನ್ ಮನುಷ್ಯನ ದೇಹದಲ್ಲಿ ರಕ್ತದ ಚಲನೆಯನ್ನು ಕಡಿಮೆಗೊಳಿಸುತ್ತದೆ ಆಧುನಿಕ ಭರಾಟೆಗೆ ಮಾರು ಹೋಗಿರುವ ಯುವಜನರು ಆರೋಗ್ಯದ ಮೇಲಾಗುವ ದುಷ್ಪರಿಣಾಮ ಅರಿಯದೆ ವಿಷಕಾರಿ ಅಂಶಗಳಿಗೆ ಬಲಿಯಾಗುತ್ತಿದ್ದಾರೆ ಎಂದರಲ್ಲದೆ,
ಸರ್ಕಾರ ಜಾಹೀರಾತುಗಳ ಮೂಲಕ ಮತ್ತು ತಂಬಾಕು ಮತ್ತು ಸಿಗರೇಟು ಕವಚಗಳ ಮೇಲೆ ಅದರಿಂದಾಗುವ ಪರಿಣಾಮಗಳನ್ನು ಮುದ್ರಿಸಿದೆ , ಮಾರಾಟಕ್ಕೆ ಹಲವಾರು ನಿರ್ಭಂಧಗಳನ್ನು ವಿಧಿಸಿದೆ, ಮಾದಕ ವಸ್ತುಗಳ ನಿಯಂತ್ರಣಕ್ಕೆ ಮುಖ್ಯವಾಗಿ ಜನರ ಸಹಭಾಗಿತ್ವ ಪೋಷಕರ ನಿಗಾ ಅದರ ಕುರಿತು ವಿಶೇಷವಾಗಿ ಜಾಗೃತಿಯ ಅವಶ್ಯವಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎನ್.ಎಲ್. ಬಸವರಾಜ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂಎಲ್. ಗಿರಿಧರ್, ಪ್ರಧಾನ ಕಾರ್ಯದರ್ಶಿ ಚಿದಾನಂದ್ ಎಂ ಮಸ್ಕಲ್, ಹಿರಿಯ ಪತ್ರಕರ್ತರಾದ ಖಂಡೇನಹಳ್ಳಿ ಬಸವರಾಜ್, ರಮೇಶ್ ಬಿದರಿಕೆರೆ, ರಾಜಣ್ಣಹರ್ತಿಕೋಟೆ, ಶಿವಶಂಕರ್ ಮಠದ್, ಪ್ರಸನ್ನಕುಮಾರ್, ಹನುಮಂತರಾಯ, ಸಾಮಾಜಿಕ ಕಾರ್ಯಕರ್ತ ಚಮನ್ ಷರಿಪ್, ಸೇರಿದಂತೆ ಡಾ.ತ್ರಿವೇಣಿ ಇತರರು ಉಪಸ್ಥಿತರಿದ್ದರು.
