
ಹಿರಿಯೂರು :
ಮುಸ್ಲಿಂ ಬಾಂಧವರ ಪ್ರೀತಿ, ಆತ್ಮೀಯತೆ ಹಾಗೂ ಸಹೋದರತ್ವ ನೋಡಿ ಮನಸ್ಸಿಗೆ ತುಂಬಾ ಸಂತೋಷವಾಯಿತು. ಈ ಪವಿತ್ರ ಬಕ್ರೀದ್ ಹಬ್ಬವು ಎಲ್ಲರ ಜೀವನದಲ್ಲಿ ಶಾಂತಿ, ಸಂತೋಷ, ಸಮೃದ್ಧಿ ಹಾಗೂ ಐಕ್ಯತೆಯನ್ನು ತರಲಿ ಎಂಬುದಾಗಿ ಸಚಿವರಾಗಿದ್ದ ಡಿ.ಸುಧಾಕರ್ ರವರ ಪುತ್ರ ಸುಹಾಸ್ ಸುಧಾಕರ್ ಶುಭಹಾರೈಸಿದರು.
ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ, ಎಲ್ಲಾ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿ, ನಂತರ ಅವರು ಮಾತನಾಡಿದರು.

ಅಲ್ಲಾಹನಕೃಪೆಯಿಂದ ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ರೈತರ ಬದುಕು ಹಸನಾಗಲಿ, ಜನರು ಸಮೃದ್ಧವಾದ ಜೀವನ ನಡೆಸುವಂತಾಗಲಿ ಎಂದರಲ್ಲದೆ ನಮ್ಮ ತಂದೆಯವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ದೊರಕಲಿ ಎಂಬುದಾಗಿ ಬಕ್ರೀದ್ ಹಬ್ಬದ ಸಾಮಾಹಿಕ ಪ್ರಾರ್ಥನೆಯಲ್ಲಿ ಅಲ್ಲಾಹರಿಗೆ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ನಾಗೇಂದ್ರನಾಯ್ಕ, ಸೇರಿದಂತೆ ನಗರದ ಅನೇಕ ಮುಸ್ಲಿಂ ಮುಖಂಡರು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
