
ಹಿರಿಯೂರು :
ಸಚಿವರಾದ ಡಿ.ಸುಧಾಕರ್ ರವರ ನಿಧನದಿಂದ ತಾಲ್ಲೂಕಿನ ಜನ ಅಕ್ಷರಶಃ ಅನಾಥರಾಗಿದ್ದು, ಅವರ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂಬುದಾಗಿ ಕಾಂಗ್ರೆಸ್ಸಿನ ಮುಖಂಡರಾದ ಈಶ್ವರಪ್ಪ ಹೇಳಿದರು.
ತಾಲ್ಲೂಕಿನ ಖಂಡೇನಹಳ್ಳಿಯಲ್ಲಿ ಡಿ.ಸುಧಾಕರ್ ರವರ ಅಭಿಮಾನಿಗಳಿಂದ ಹಮ್ಮಿಕೊಳ್ಳಲಾಗಿದ್ದ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಸಚಿವ ಡಿ.ಸುಧಾಕರ್ ರವರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಮೌನಾಚರಣೆ ಮಾಡಿ, ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಮುಖಂಡರಾದ ಈಶ್ವರಪ್ಪ, ವೆಂಕಟರಮಣ, ಮಂಜುನಾಥ್. ಕೆ.ಎನ್.ಶಿವುಖಂಡೇನಹಳ್ಳಿ, ಜೀಯಾವುಲ್ಲ, ಚಿದಾನಂದ್, ಡಿ.ಗೋವಿಂದರಾಯ, ದಾಸರಿನರಸಿಂಹಮೂರ್ತಿ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
