
ಹಿರಿಯೂರು :
ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು ಕೇವಲ ಸಚಿವರಾಗಿ ಅಷ್ಟೇ ಅಲ್ಲ, ಸಹಕಾರಿ ಕ್ಷೇತ್ರದಲ್ಲಿ ಸಹ ತಮ್ಮನ್ನು ಗುರುತಿಸಿಕೊಳ್ಳುವ ಮೂಲಕ ನೂರಾರು ಜನರಿಗೆ ಆರ್ಥಿಕ ಬೆಂಬಲವನ್ನು ನೀಡಿದ್ದಾರೆ, ಇವರ ನಿಧನದಿಂದ ರಾಜಕೀಯ ಕ್ಷೇತ್ರದ ಜೊತೆಗೆ ಸಹಕಾರಿ ಕ್ಷೇತ್ರಕ್ಕೂ ತುಂಬಲಾರದ ನಷ್ಟವಾಗಿದೆ ಎಂಬುದಾಗಿ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷರಾದ ಡಿ.ತಿಪ್ಪೇಸ್ವಾಮಿ ಹೇಳಿದರು.
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಿ.ಸುಧಾಕರ್ ಅವರ ನಿಧನದ ಪ್ರಯುಕ್ತ ಪಿಕಾರ್ಡ್ ಬ್ಯಾಂಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಡಿ.ಸುಧಾಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಈ ಸಭೆಯಲ್ಲಿ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷರಾದ ಡಿ.ತಿಪ್ಪೇಸ್ವಾಮಿ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಕಮಲಮ್ಮ ಮತ್ತು ನಿರ್ದೇಶಕರುಗಳಾದ ಕೆ.ಕೃಷ್ಣಪ್ಪ, ಪಿ.ಎಸ್.ಸಾದತ್ ಉಲ್ಲಾ, ಎಸ್.ಗಿರಿಜಪ್ಪ, ಪಿ.ಎಲ್.ಶಿವಣ್ಣ, ಟಿ.ಮಲ್ಲಿಕಾರ್ಜುನಯ್ಯ, ಡಿ.ಮಂಜಾನಾಯ್ಕ, ಕೆ.ಶಂಕರಮೂರ್ತಿ, ಆರ್.ಮನೋಹರ್, ಮಲ್ಲನಾಯ್ಕ್, ಶ್ರೀಮತಿ ಅಂಬುಜಮ್ಮ, ಆರ್.ಲಕ್ಷ್ಮಿದೇವಿ, ಶಶಿಧರ್ ಹಾಗೂ ವ್ಯವಸ್ಥಾಪಕರಾದ ಪಿ.ಶಿವಮೂರ್ತಿ ಭಾಗವಹಿಸಿದ್ದರು.
