
ಹಿರಿಯೂರು :
ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಸುಧಾಕರ್ ರವರು ಕೊಡುಗೈ ದಾನಿಯಾಗಿದ್ದು, ಯಾರೇ ಸಹಾಯ ಕೇಳಿ ಬಂದರೂ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ, ಶಿಕ್ಷಣ, ಮದುವೆ, ಉದ್ಯೋಗ ಸೇರಿದಂತೆ ಹಲವಾರು ಕಾರ್ಯಕ್ಕೆ ವೈಯಕ್ತಿಕವಾಗಿ ಸಹಾಯವನ್ನು ಮಾಡುತ್ತಿದ್ದ ಜನಾನುರಾಗಿ ನಾಯಕರಾಗಿದ್ದಾರೆ, ಇವರನ್ನು ಕಳೆದುಕೊಂಡ ನಮ್ಮ ಹಿರಿಯೂರು ತಾಲ್ಲೂಕಿನ ಜನ ಅನಾಥರಾಗಿದ್ದಾರೆ ಎಂಬುದಾಗಿ ತಾಲ್ಲೂಕು ಗ್ರಾಮಾಂತರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ವಿನಯ ಪ್ರಸಾದ್ ಸಂತಾಪ ಸೂಚಿಸಿದರು.
ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಡಿ.ಸುಧಾಕರ್ ಅವರ ನಿಧನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ಭಾವಪೂರ್ಣ ಶ್ರದ್ಧಾಂಜಲಿ” ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕು ಗ್ರಾಮಾಂತರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ವಿನಯ ಪ್ರಸಾದ್, ಮುಖಂಡರಾದ ಸುರೇಶ, ರವಿಕುಮಾರ್, ಹನುಮಂತರಾಯ, ಮಂಜು, ರಾಜು, ಶಂಕರ್, ಅಕ್ಷಯ ಇತರರು ಹಾಜರಿದ್ದರು.
