
ಹಿರಿಯೂರು :
ನಗರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ಕಟ್ಟಡ ಮಾಲೀಕರಿಗೆ, ಬ್ಯಾನರ್ ಮತ್ತು ಬೆಟಿಂಗ್ಸ್ ತಯಾರಿಸುವ ಮತ್ತು ಕಟ್ಟುವ ಮಾಲೀಕರು ನಗರದ ಕಟ್ಟಡಗಳ ಮೇಲೆ ಹಾಗೂ ನಗರಸಭೆ ವಾಪ್ತಿಯಲ್ಲಿ ಅನುಮತಿ ಇಲ್ಲದೇಯಾವುದೇ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ ಗಳು ಅಳವಡಿಸಿರುವುದು ಕಾನೂನು ಬಾಹಿರವಾಗಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಇದರಿಂದ ಗಾಳಿ, ಮಳೆಯಿಂದಾಗಿ, ರಸ್ತೆ ಮದ್ಯ ವಾಹನ ಸಂಚಾರ ಪುಟ್ಟುಬಾತ್ ಸಂಚಾರ ಸಾರ್ವಜನಿಕರುಗಳಿಗೆ ತೊಂದರೆಯಾದಲ್ಲಿ ಅಥವಾ ಇನ್ನೀತರೆ ಯಾವುದೇ ರೀತಿ ಅನಾಹುತವಾದಲ್ಲಿ ಅದಕ್ಕೆ ನಗರಸಭೆಯು ಜವಾಬ್ದಾರರಾಗಿರುವುದಿಲ್ಲ. ಸಂಬಂಧಪಟ್ಟ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ ಗಳ ಕಟ್ಟಡ ಮಾಲೀಕರೆ ಜವಾಬ್ದಾರರಾಗಿರಿತ್ತೀರಿ.
ಆದಪ್ರಯುಕ್ತ ಈ ಮಾಹಿತಿ ತಲುಪಿದ 7 ದಿನದೊಳಗಾಗಿ ಈ ನಗರಸಭೆಯಿಂದ ನಿಯಾಮಾನುಸಾರ ಕಡ್ಡಾಯವಾಗಿ ನಗರಸಭೆಯಿಂದ ಕಟ್ಟುವ ಸ್ಥಳದ ಅನುಮತಿ ಪಡೆದು ವಿಶೇಷವಾಗಿ ಕಟ್ಟಡ ಮೇಲೆ ಹೊಂದಿರುವ ಹೊರ್ಡಿಂಗ್ ಗಳ ಬಾಕಿ ಫೀಯನ್ನು ಪಾವತಿಸಿ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ ಗಳನ್ನು ಅಳವಡಿಸಲು ಸೂಚಿಸಿದೆ.
ತಪ್ಪಿದಲ್ಲಿ “ಬಹಿರಂಗ ಸ್ಥಳಗಳ ತಡೆಗಟ್ಟುವ ಕಾಯಿದೆ” [Prevention of Disfigurement] Act, 1981 (1982ರ ಕಾಯಿದೆ 35) ಮತ್ತು 2026 ರ ಕರ್ನಾಟಕ ಅಧಿನಿಯಮದ ಸುತ್ತೋಲೆ ಸಂಖ್ಯೆ:- ಸಂ.ವ್ಯ.ಶಾ.ಇ 05 ಶಾಸನ 2026 ಬೆಂಗಳೂರು, ದಿನಾಂಕ:-10.04.2026 ಹಾಗೂ ಪುರಸಭೆ ಕಾಯ್ದೆ 1964 ರೀತ್ಯಾ ಹಾಗೂ ಸರ್ಕಾರದ ಆದೇಶದ ಸುತೋಲೆಗಳ ಅನ್ವಯ ಕೂಡಲೇ ತಾವು ತೆರುವುಗೊಳಿಸಲು ಸೂಚನೆ ನೀಡಿದೆ.
ತಪ್ಪಿದಲ್ಲಿ ಕಟ್ಟಡ ಮೇಲ್ಬಾಗದಲ್ಲಿ ಅಥವ ನಗರಸಭೆ ವಾಪ್ತಿಯ ಯಾವುದೇ ಸ್ಥಳಗಳಲ್ಲಿ ಅಳವಡಿಸಿರುವ ಫ್ಲೆಕ್ಸ್ ಬ್ಯಾನರ್ ಹೋರ್ಡಿಂಗ್ಸ್ ಗಳನ್ನು ನಗರಸಭೆ ಇಂದ ತೆರುವುಗೊಳಿಸಿ ಸಬಂಧಪಟ್ಟವರಿಂದ ಮತ್ತು ಕಟ್ಟಡ ಮಾಲೀಕರಿಗೆ ಕಂದಾಯ ರೂಪದಲ್ಲಿ ಬಾಕಿ ದಂಡದೊಂದಿಗೆ ವಸೂಲಾತಿ ಮಾಡಲಾಗುವುದು ಎಂಬುದಾಗಿ ಪೌರಾಯುಕ್ತರಾದ ಎ.ವಾಸೀಂರವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
