April 14, 2026
002

ಹಿರಿಯೂರು :

ಯುಗಾದಿ ಅಂದರೆ ಹೊಸತನ, ಹಿಂದೂ ಪಂಚಾಂಗದ ಮೊದಲ ಮಾಸವಾದ ಚೈತ್ರ ಮಾಸದ ಆರಂಭವಾಗಿದ್ದು, ಈ ಹೊಸವರ್ಷದ ಮೊದಲ ದಿನವಾಗಿರುವ ಯುಗಾದಿ ಹಬ್ಬವನ್ನು ವಿಶಿಷ್ಟವಾಗಿ ಸ್ವಾಗತಿಸುವುದು ವಿಶೇಷವಾಗಿದೆ, ಈ ಹಬ್ಬದಂದು ಮನೆಯ ಬಾಗಿಲಿಗೆ ಮಾವು ಮತ್ತು ಬೇವಿನ ಸೊಪ್ಪಿನ ತೋರಣ ಹಾಕಿ, ಬೇವು-ಬೆಲ್ಲವನ್ನು ದೇವರಿಗೆ ಸಮರ್ಪಿಸಿ, ಜೀವನದಲ್ಲಿ ಕಹಿ ನೆನಪುಗಳು ಕಳೆದುಹೋಗಿ ಸಿಹಿಯಾದ ಹೊಸಜೀವನ ನಿಮ್ಮದಾಗಲಿ ಎಂಬುದಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಶುಭಕೋರಿದ್ದಾರೆ.

ಹೊಸ ಚಿಗುರು, ಹಳೆಬೇರು ಕೂಡಿರಲು ಮರ ಸೊಗಸು ಎನ್ನುವಂತೆ ಮನೆಯ ಹಿರಿಯರು ಹಾಗೂ ಕಿರಿಯರುಗಳು ಒಟ್ಟಾಗಿ ಯುಗಾದಿ ಆಚರಿಸುವ ಮೂಲಕ ಕುಟುಂಬದಲ್ಲಿ ಉತ್ತಮ ಬಾಂಧವ್ಯವನ್ನು ಉಂಟು ಮಾಡಲಿ, ಈ ವರ್ಷದ ಯುಗಾದಿ ಹಬ್ಬವು ನಾಡಿನ ಸಮಸ್ತ ಜನತೆಗೆ, ನಮ್ಮ ಆತ್ಮೀಯ ಬಂಧುಗಳಿಗೆ, ಸ್ನೇಹಿತರಿಗೆ, ಫೇಸ್ ಬುಕ್ ಗೆಳೆಯ ಹಾಗೂ ಗೆಳತಿಯರಿಗೆ ಆರೋಗ್ಯ, ಆಯಸ್ಸು,ಯಶಸ್ಸನ್ನು ಕೊಟ್ಟು ಕಾಪಾಡಲಿ,

ಯುಗಾದಿ ಹಬ್ಬದ ಹೊಸವರ್ಷವು ತಾಲ್ಲೂಕಿನ ಸಮಸ್ತ ನಾಗರೀಕರಿಗೂ ಸನ್ಮಂಗಳವನ್ನುಂಟುಮಾಡಲಿ ಎಂಬುದಾಗಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರಾದ ಆಲೂರು ಹನುಮಂತರಾಯಪ್ಪ, ಹಾಗೂ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್ ಯಾದವ್, ಪರಮೇಶ್ವರಪ್ಪ, ವೆಂಕಟೇಶ್, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ, ಇವರುಗಳು ಶುಭಕೋರಿದ್ದಾರೆ.

About The Author

Leave a Reply

Your email address will not be published. Required fields are marked *