
ಹಿರಿಯೂರು :
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬವು ಅತ್ಯಂತ ಪವಿತ್ರ ಹಬ್ಬವಾಗಿದ್ದು, ಸುಮಾರು 30 ದಿನಗಳ ಕಾಲ ಪ್ರಾರ್ಥನೆ ಹಾಗೂ ಉಪವಾಸದ ಮೂಲಕ ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ದೇಶ ಸುಭಿಕ್ಷವಾಗಿರಲಿ ಎಂದು ಪ್ರಾರ್ಥನೆ ಮಾಡಿ, ಕೊನೆಯ ದಿನ ಹೊಸ ಬಟ್ಟೆ ತೊಟ್ಟು ಎಲ್ಲರೂ ಒಟ್ಟಾಗಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಆಚರಿಸುವ ರಂಜಾನ್ ಹಬ್ಬವು ಸಮಸ್ತ ಮುಸ್ಲಿಂಬಾಂಧವರಿಗೆ ಸನ್ಮಂಗಳವನ್ನು ಉಂಟುಮಾಡಲಿ ಎಂಬುದಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಶುಭಹಾರೈಸಿದ್ದಾರೆ.
ಈ ವರ್ಷದ ರಂಜಾನ್ ಹಬ್ಬವು ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ, ನಮ್ಮ ಆತ್ಮೀಯ ಬಂಧುಗಳಿಗೆ, ಸ್ನೇಹಿತರಿಗೆ, ಫೇಸ್ ಬುಕ್ ಗೆಳೆಯ ಹಾಗೂ ಗೆಳತಿಯರಿಗೆ ಆರೋಗ್ಯ, ಆಯಸ್ಸು, ಯಶಸ್ಸನ್ನು ಕೊಟ್ಟು ಕಾಪಾಡಲಿ ಎಂಬುದಾಗಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ “ಹಿರಿಯೂರುನ್ಯೂಸ್”ತಂಡದ ಮುಖ್ಯಸ್ಥರಾದ ಆಲೂರುಹನುಮಂತರಾಯಪ್ಪ, ಹಾಗೂ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್ ಯಾದವ್, ಪರಮೇಶ್ವರಪ್ಪ, ವೆಂಕಟೇಶ್, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ, ಇವರುಗಳು ಶುಭಕೋರಿದ್ದಾರೆ.
