April 18, 2026
...1

ಹಿರಿಯೂರು:

ವಿದ್ಯಾರ್ಥಿಗಳು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಹಾಗೂ   ಪರೀಕ್ಷೆಯ ಭಯವನ್ನು  ದೂರಮಾಡಿಕೊಳ್ಳಬೇಕು. ಈ ಪರೀಕ್ಷೆಯು ವಿದ್ಯಾರ್ಥಿಗಳ  ಕಲಿಕೆಯನ್ನು ಅಳೆಯುವ ಸಾಧನ ಹಾಗೂ ನಿಮ್ಮ ಮುಂದಿನ ಜೀವನಕ್ಕೆ ಬುನಾದಿ   ಎಂಬುದಾಗಿ ಇನ್ನರ್ವೀಲ್ ಅಧ್ಯಕ್ಷರಾದ  ಶ್ರೀಮತಿ ರೋಷ್ನಿಮಹೇಶ್ ಅವರು ಹೇಳಿದರು.

ನಗರದ ಇನ್ನರ್ ವೀಲ್ ಕ್ಲಬ್ ವತಿಯಿಂದ ವೇದಾವತಿ ಸರ್ಕಾರಿ ಶಾಲೆಯಲ್ಲಿ  ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರೇರಣೆಗಾಗಿ ಪರೀಕ್ಷೆ ಬರೆಯುವ  ರೊಟ್ಟುಗಳ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಠಿಣ ಪರಿಶ್ರಮ ಹಾಗೂ ಅಭ್ಯಾಸದ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಹಾಗೂ  ನಿಮ್ಮ ತಂದೆ-ತಾಯಿಗೆ ಕೀರ್ತಿಯನ್ನು ತರಬೇಕು ಎಂಬುದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಬೇಸಿಗೆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ  ದೃಷ್ಠಿಯಿಂದ  ಕಲ್ಲಂಗಡಿ ಹಣ್ಣುಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಇದರಿಂದ ಮಕ್ಕಳು ಅಪಾರ ಸಂತೋಷ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಧ್ಯಾಯರಾದ  ಶಿವಮೂರ್ತಿ, ಇ.ಸಿ.ಓ.ಜಾಫರ್, ಸಾಧಿಕ್, ಶಿಕ್ಷಕರಾದ ಸವಿತಾ ಹಾಗೂ ಇತರ ಶಿಕ್ಷಕರು ಮತ್ತು ಇನ್ನರ್ ವೀಲ್ ಸದಸ್ಯರಾದ ಲತಾ, ಅನಿಲ್, ಪದ್ಮಜಾ, ಮಹಾಬಲೇಶ್,  ಶ್ರೀಮತಿ ಪದ್ಮಾಆನಂದ್,  ಶ್ರೀಮತಿ  ಪದ್ಮಾಮಂಜೇಶ್, ಶ್ರೀಮತಿ ಸೌಮ್ಯಪ್ರಶಾಂತ್, ಪ್ರೇಮಾ, ಯಮುನಾ,  ಶ್ರೀಮತಿ ನಿರ್ಮಲಾಮಹಾಂತೇಶ್,  ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *