April 21, 2026
00004

ಹಿರಿಯೂರು:

ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ  ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ  ಮತ್ತು ಸಮಗ್ರ  ಭೂ ಅಭಿವೃದ್ಧಿಗಾಗಿ  ಶೇ.3ರ ಬಡ್ಡಿ ದರದಲ್ಲಿ  ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂಬುದಾಗಿ  ಅಧ್ಯಕ್ಷರಾದ ಪಿ.ಎಸ್.ಸಾದತ್ ಅವರು ಹೇಳಿದರು.

ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ  ಹಮ್ಮಿಕೊಳ್ಳಲಾಗಿದ್ದ ಕಾರ್ಯಕಾರಿ ಮಂಡಳಿ ನಿರ್ದೇಶಕರ ಸಭೆಯ  ಅಧ್ಯಕ್ಷತೆಯನ್ನು  ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂಬುದಾಗಿ ಅವರು ಹೇಳಿದರು. ನಿರ್ದೇಶಕರಾದ ಹರಿಯಬ್ಬೆ ಸಿ.ಹೆಂಜೇರಪ್ಪ  ಅವರು ಮಾತನಾಡಿ  ರೈತರ ಕೃಷಿ ಚಟುವಟಿಕೆಗಳಿಗೆ  ನಮ್ಮ ಸಂಘ ಹೆಚ್ಚಿನ ಬೆಂಬಲ ನೀಡಬೇಕು. ಆ ಮೂಲಕ  ರೈತರ ಸರ್ವತೋಮುಖ ಅಭಿವೃದ್ಧಿಗೆ  ಶ್ರಮಿಸಬೇಕು  ಎಂದರಲ್ಲದೆ,

ಸಾಲ ಮರುಪಾವತಿಯ ಹೊಣೆಗಾರಿಕೆಯನ್ನು  ಎಲ್ಲಾ ನಿರ್ದೇಶಕರು  ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ  ಸಾಲ ತೀರುವಳಿ ಮಾಡದರವರಿಗೆ ಸಾಲ ನೀಡಬಾರದು ಎಂಬುದಾಗಿ ಅವರು ಹೇಳಿದರು.

ನಿರ್ದೇಶಕರಾದ ಎಂ.ಡಿ.ಸಣ್ಣಪ್ಪ ಅವರು ಮಾತನಾಡಿ ಹೆಚ್ಚಿನ ಷೇರುದಾರರಿಗೆ ನೀಡಲು ಪ್ರತಿಯೊಬ್ಬರೂ ಕೆಲಸ ಮಾಡಬೇಕು. ಸಂಘದ ಅಡಿಯಲ್ಲಿ   ಕಾಮನ್ ಸರ್ವೀಸ್ ಸೆಂಟರ್ ತೆರೆದು  ಸೇವೆ ಒದಗಿಸಬೇಕು ಎಂಬುದಾಗಿ ಅವರು ಹೇಳಿದರು.

ನಿರ್ದೇಶಕರಾದ ಹೆಚ್.ಎನ್.ವೆಂಕಟೇಶ್ ಅವರು ಮಾತನಾಡಿ  ಪ್ರತಿ ತಿಂಗಳು  ನಿಗದಿತ ಸಮಯಕ್ಕೆ ಕಡ್ಡಾಯವಾಗಿ ಸಭೆ ಮಾಡಬೇಕು. ಲೆಕ್ಕಪತ್ರಗಳನ್ನು ವಿವರವಾಗಿ ದಾಖಲಿಸಬೇಕು ಎಂಬುದಾಗಿ ಕಾರ್ಯದರ್ಶಿ ಯಶವಂತ್ ಅವರಿಗೆ ಸೂಚನೆ ನೀಡಿದರು.

ಗುಟ್ಕಾ, ಪಾನ್ ಪರಾಕ್, ಹೊಗೆಸೊಪ್ಪು ಇತ್ಯಾದಿ ಕ್ಯನ್ಸರ್ ಕಾರಕ  ವಸ್ತುಗಳನ್ನು ಸೇವನೆ  ಮಾಡುತ್ತಿದ್ದು ಸಂಘದ ವತಿಯಿಂದ ಕ್ಯಾನ್ಸರ್  ತಪಾಸಣೆ ಶಿಬಿರ ಏರ್ಪಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಲಾಯಿತು.

ಯಶಸ್ವಿನಿ ಯೋಜನೆಯಡಿ ಷೇರುದಾರ ಕುಟುಂಬಗಳಿಗೆವಿಮೆ ಮಾಡಿಸಬೇಕು.ಎಸ್ಸಿ, ಎಸ್ಟಿ ವರ್ಗಗಳಿಗೆ ಯಶಸ್ವಿನಿ ಪಾಲಿಸಿಗೆ ಯಾವುದೇ ಶುಲ್ಕ ಇರುವುದಿಲ್ಲ.  ಸಾಮಾನ್ಯ ರೈತ ಕುಟುಂಗಳಿಗೆ  ತಲಾ ನೂರು ರೂ.ಶುಲ್ಕ ಇದ್ದು ನಿರ್ದೇಶಕರು ಹೆಚ್ಚು ಸದಸ್ಯರಿಗೆ ವಿಮೆ ಮಾಡಿಸಲು ಅರಿವು ಮೂಡಿಸಬೇಕು ಎಂಬುದಾಗಿ ಸಭೆಯಲ್ಲಿ ಚರ್ಚಿಸಲಾಯಿತು.

ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರು ಸದಸ್ಯರೊಂದಿಗೆ ಸಭೆಗಳನ್ನು ನಡೆಸಿ, ಸಂಘದ ಕಾರ್ಯಗಳ ಬಗ್ಗೆ ಚರ್ಚಿಸಿ, ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು.

ಹಿರಿಯೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ನಿಯಮಿತ ಸಭೆಗಳನ್ನು ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ  ಎಂಬುದಾಗಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಪ್ಯಾರೇಜಾನ್, ಎನ್.ಪ್ರಕಾಶ್ ಕುಮಾರ್, ಸಿ.ಸುಬ್ರಮಣ್ಯ, ಎನ್. ಸುಬ್ರಮಣ್ಯ, ನಾಗರತ್ನಮ್ಮ, ಸಂಘದ ಕಾರ್ಯದರ್ಶಿ ಯಶವಂತ್, ಸಹಾಯಕಿ ಸುಲೋಚನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *