September 13, 2026
0000002

ಹಿರಿಯೂರು :                                                         

ಸಮಾಜದಲ್ಲಿ ನೊಂದವರ, ಅನ್ಯಾಯಕ್ಕೊಳಗಾದ ಶೋಷಿತ ಜನರ ಧ್ವನಿಯಾಗಿ, ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಜನಪರವಾಗಿ ಕೆಲಸ ಮಾಡುತ್ತಿರುವ ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ಚಂದ್ರವಳ್ಳಿ ದಿನಪತ್ರಿಕೆ ಮುಂದಿನ ದಿನಗಳಲ್ಲಿ ಪತ್ರಿಕಾರಂಗದಲ್ಲಿ ಇನ್ನಷ್ಟು ಯಶಸ್ಸನ್ನು ಸಾಧಿಸಲಿ ಎಂಬುದಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ ಶುಭಹಾರೈಸಿದರು.

ಚಂದ್ರವಳ್ಳಿ ಪತ್ರಿಕೆ ಸಂಪಾದಕರಾದ ಹರಿಯಬ್ಬೆ ಹೆಂಜಾರಪ್ಪ, ಗೌ.ಸಂಪಾದಕ ಎನ್.ಜಿ.ಕೃಷ್ಣಮೂರ್ತಿ ವಕೀಲರು, ಜಾಹಿರಾತು ವಿಭಾಗದ ಹೆಚ್.ಸಿ.ಗಿರೀಶ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಚಂದ್ರವಳ್ಳಿ ದಿನಪತ್ರಿಕೆ ವರದಿಗಾರರಾದ ಎಂ.ಎಲ್.ಗಿರಿಧರ್ ರವರ ಪರಿಶ್ರಮದಿಂದ ನಗರದ ಬಿ.ಎಲ್.ಗೌಡ ಬಡಾವಣೆಯಲ್ಲಿರುವ “ಚಂದ್ರವಳ್ಳಿ ಕನ್ನಡ ದಿನಪತ್ರಿಕೆ”ಯ ನೂತನ ಮುದ್ರಣಾಲಯ ಇಂದು ಕಾರ್ಯಾರಂಭ ಮಾಡಲಾಗಿದೆ ಎಂದರಲ್ಲದೆ,

ಈ ಚಂದ್ರವಳ್ಳಿ ದಿನಪತ್ರಿಕೆ ಅತ್ಯಂತ ಸುಂದರ ವರ್ಣವಿನ್ಯಾಸವಾಗಿ ಮೂಡಿಬಂದಿದ್ದು, ತುಂಬಾ ಆಕರ್ಷಕವಾಗಿದ್ದು, ಸ್ಥಳೀಯವಾಗಿ ಜನರಿಗೆ ನಮ್ಮ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಅನೇಕ ಉದಯೋನ್ಮುಖ ಬರಹಗಾರರಿಗೆ ಅವಕಾಶ ನೀಡಲಿದೆ, ನಮ್ಮ ಹಿರಿಯೂರು ತಾಲ್ಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ಮನೆಮನೆಗಳಿಗೆ ಈ ಪತ್ರಿಕೆ ತಲುಪಲಿ. ಅಲ್ಲದೆ ಈ ಚಂದ್ರವಳ್ಳಿ ಪತ್ರಿಕೆ ಗ್ರಾಮೀಣ ಭಾಗದ ಪ್ರಾದೇಶಿಕ ಪತ್ರಿಕೆಯಾಗಿ ರಾಜ್ಯಾದ್ಯಂತ ಹೆಸರು ಮಾಡಲಿ ಎಂಬುದಾಗಿ ಶುಭಕೋರಿದರು. 

 

About The Author

Leave a Reply

Your email address will not be published. Required fields are marked *