August 6, 2026
003

ಹಿರಿಯೂರು :

ಕಾಂಗ್ರೆಸ್ ಹೈಕಮಾಂಡ್ ನೂತನ ಸಂಪುಟದ ವಿಸ್ತರಣೆಯಲ್ಲಿ  ಸೂಕ್ತ ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಸಮತೋಲನತೆಗೆ ಒತ್ತು ಕೊಡದೇ ಹಿಂದುಳಿದ ವರ್ಗದ ಸಮುದಾಯಗಳಿಗೆ ಅವಕಾಶ ನೀಡದೇ ಅನ್ಯಾಯವೆಸಗಲಾಗಿದೆ ಎಂಬುದಾಗಿ ಬಿಜೆಪಿ ಯುವಮುಖಂಡರಾದ ಎನ್.ಧನಂಜಯ  ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸಚಿವ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್  ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಸಂಪುಟ ವಿಸ್ತರಣೆ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದೆ, ಆದರೆ  ವಾಸ್ತವವಾಗಿ ಹಲವು ಹಿಂದುಳಿದ ಶೋಷಿತ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ, ಹೈಕಮಾಂಡ್ ಪಟ್ಟಿಯಲ್ಲಿ ಇಬ್ಬರು  ಹಿಂದುಳಿದ  ವರ್ಗದವರ ಹೆಸರು ಪ್ರಕಟಿಸಿ  ತಾಂತ್ರಿಕ ಕಾರಣದ ನೆಪ ಹೇಳಿ ಅವಕಾಶ ತಿರಸ್ಕರಿಸಿದ್ದಾರೆ,

ಅದರಲ್ಲೂ ಹಿಂದುಳಿದ ವರ್ಗದ ಮಹಿಳೆಯೊಬ್ಬರಿಗೆ  ಈ ರೀತಿ ಅವಕಾಶ ನೀಡಿ, ಆನಂತರ ಅವಕಾಶ ನಿರಾಕರಿಸಿ, ಬೇರೊಂದು ನೆಪಹೇಳಿ ಹೈಕಮಾಂಡ್ ಸಂಪುಟ ವಿಸ್ತರಣೆ ಪಟ್ಟಿಯಿಂದ ಕೈಬಿಟ್ಟಿರುವುದು ತೀವ್ರ ವಿಷಾದನೀಯ ಸಂಗತಿ.ಎರಡು ದಶಕದ ಹಿಂದೆ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ನೀಡುವಲ್ಲಿ ಕರ್ನಾಟಕ ಮಾದರಿಯೊಂದನ್ನು ಹಾಕಿಕೊಂಡಿತ್ತು.

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ತಂದ ಹೆಗ್ಗಳಿಕೆಯೂ ರಾಜ್ಯಕ್ಕಿತ್ತು, ಅಂತಹ ಉನ್ನತ ಪರಂಪರೆ ಹೊಂದಿರುವ ರಾಜ್ಯದಲ್ಲಿ ಮಹಿಳೆಯರನ್ನು ಹೀಗೆ ಕಡೆಗಣಿಸುತ್ತಿರುವುದು ಪ್ರಗತಿಪರ ರಾಜ್ಯಕ್ಕೆ ಶೋಭೆಯಲ್ಲ. ಮಹಿಳಾ ಪ್ರಾತಿನಿಧ್ಯವಿಲ್ಲದೆ ರಾಜ್ಯ ಸಚಿವ ಸಂಪುಟ ಪೂರ್ಣಗೊಳ್ಳುವುದಿಲ್ಲ, ಪ್ರಾದೇಶಿಕ ಸಮತೋಲನತೆಯನ್ನು ಕಾಂಗ್ರೆಸ್ ಗಾಳಿಗೆ ತೂರಿದೆ,

ಸುಮಾರು 8 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ  ದೊರೆತಿಲ್ಲ, ಕೆಲವು ಜಿಲ್ಲೆಗಳಿಗೆ ಎರಡೆರಡು ಅವಕಾಶಗಳನ್ನು ನೀಡಲಾಗಿದೆ,   ಭ್ರಷ್ಟಾಚಾರದ ಆರೋಪ ಮೆತ್ತಿಕೊಂಡಿರುವ ಕೆಲವರಿಗೆ ಮಂತ್ರಿಸ್ಥಾನವನ್ನು ನೀಡಿರುವುದು ನಿಜಕ್ಕೂ ದುರಾದೃಷ್ಟಕರವಾದ ಸಂಗತಿಯಾಗಿದೆ ಎಂಬುದಾಗಿ ಬಿಜೆಪಿ ಯುವಮುಖಂಡರಾದ ಎನ್.ಧನಂಜಯ ವಿಷಾದ ವ್ಯಕ್ತಪಡಿಸಿದ್ದಾರೆ.

About The Author

Leave a Reply

Your email address will not be published. Required fields are marked *