August 7, 2026
05

ಹಿರಿಯೂರು :

ತಾಲ್ಲೂಕಿನ ಯಲ್ಲದಕೆರೆ ಗ್ರಾಮಪಂಚಾಯ್ತಿಗೆ ಮಂಗಳವಾರ ಮದ್ಯಾಹ್ನ 1:30 ಗಂಟೆಯಿಂದ ಸಂಜೆ 3:00ಗಂಟೆವರೆಗೆ ಮುತ್ತಿಗೆ ಹಾಕಿಲಾಯಿತು, “ಅಹವಾಲು ಪಡೆಯಲು ಪಿಡಿಓ ತಡ ಮಾಡಿದ ಕಾರಣ ಗ್ರಾಮಸ್ಥರು ಪಂಚಾಯ್ತಿ ಕಾರ್ಯಾಲಯದ ಆವರಣದಲ್ಲಿಯೇ ಅಡುಗೆ ತಯಾರಿ ಮಾಡಲು ಮುಂದಾದ ಘಟನೆ ನಡೆಯಿತು”.

ಸುಮಾರು ಎರಡು ತಿಂಗಳಿಂದ  ಕುಡಿಯುವ ನೀರಿಗೆ ತೊಂದರೆ ಆಗುತ್ತಿದ್ದು  ಗ್ರಾಮದಲ್ಲಿ ಅಂತರ್ಜಲ ಮಟ್ಟ ತೀರ್ವವಾಗಿ ಪಾತಾಳಕ್ಕೆ ಹೋಗಿದೆ ಯಾವುದೇ ಹೊಸ ಬೋರ್ವೆಲ್ ಗಳನ್ನು ಸಹ ಹಾಕಿಸಿಲ್ಲ ಪಿಡಿಒ ಗಮನಕ್ಕೆ ತಂದರೆ ಕುಡಿಯುವ ನೀರಿಗೆ ಯಾವುದೇ ಅನುದಾನ ಇಲ್ಲ ಎಂದು ಬೇಜವಾಬ್ದಾರಿತನದ ಉತ್ತರ ನೀಡುತ್ತಾರೆ.

ಚಿಗಳಿಕಟ್ಟೆ ಗ್ರಾಮದ ಜನ, ಜಾನುವಾರುಗಳಿಗೆ ನೀರಿನ ಅನುಕೂಲ ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ ತೋರುತ್ತಿರುವ ಗ್ರಾಮಪಂಚಾಯತಿ ಸಿಬ್ಬಂದಿಗೆ ಗ್ರಾಮಸ್ಥರಿಂದ ಪ್ರತಿಭಟನೆ ಮಾಡಿದಾಗ ಹೊಸದಾಗಿ ಒಂದು ಮೋಟರ್ ಕೊಡಿಸಿ ಕಳಿಸಿದ್ದಾರೆ. ಹಿರಿಯೂರು ತಾಲ್ಲೂಕು, ಚಿಗಳಿಕಟ್ಟೆ ಗ್ರಾಮದ ಜನ ಹಾಗೂ ಜಾನುವಾರುಗಳಿಗೆ ನೀರಿನ ಅನುಕೂಲಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ ತೋರುತ್ತಿದ್ದಾರೆ ಎಂಬುದಾಗಿ ಗ್ರಾಮಸ್ಥರು ಆಪಾದಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ಮಣಿಕಂಠ, ಕರೇಗೌಡ ಗಿರೀಶ್,ಸಿ.ಆರ್.ರಾಜಪ್ಪ, ಲಕ್ಷ್ಮಿಕಾಂತ್, ಯಶವಂತ್, ಶಿವಾನಂದಣ್ಣ, ಶ್ರೀನಿವಾಸ್, ದಿವಾಕರ್, ಲೋಹಿತ್ ಮುಕುಂದ  ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *