August 7, 2026
0002

ಹಿರಿಯೂರು :

ನಗರದ ಚಿಕ್ಕಪೇಟೆ ವೃತ್ತದಲ್ಲಿರುವ ಗಣಪತಿ ದೇವಾಲಯದಲ್ಲಿ ಸಂಕಷ್ಟಹರ ಚತುರ್ಥಿಯ ಅಂಗವಾಗಿ ಸಕಲ ವಿಘ್ನಗಳನ್ನು ನಿವಾರಿಸುವಂತಹ ವಿಘ್ನೇಶ್ವರನಿಗೆ ಹಲಸಿನ ಹಣ್ಣಿನಿಂದ ಅಲಂಕರಿಸಿ, ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಗಣಪತಿಯ ಕಥಾಶ್ರವಣ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ನಗರದ ಹಲವಾರು ಭಕ್ತರು ಗಣಪತಿ ದೇವಾಲಯಕ್ಕೆ ಭೇಟಿ ನೀಡಿ, ಗಣಪತಿಯ ದರ್ಶನ ಪಡೆದು, ಸ್ವಾಮಿಯ ಕೃಪೆಗೆ ಪಾತ್ರರಾದರು.

About The Author

Leave a Reply

Your email address will not be published. Required fields are marked *