August 7, 2026
00002

ಹಿರಿಯೂರು :    

ಜಾತಿ ಧರ್ಮಗಳನ್ನು ಮೀರಿದ ಅಂತಸ್ತು ವಯಸ್ಸುಗಳನ್ನು ದಾಟಿದ ಲಿಂಗ ಭೇದಗಳನ್ನು ಮರೆತು ಮೇಲು ಕೀಳು ದೂರ ಮಾಡುವ ಶಕ್ತಿ ಸಂಗೀತಕ್ಕಿದೆ. ಸಂಗೀತ ನಾಡಿನ ಗಡಿ ದಾಟಿ ಸರ್ವರನ್ನು ಒಂದುಗೂಡಿಸುವ ಏಕೈಕ ಸಾಧನ ಎಂಬುದಾಗಿ ಕೆಂಪೇಗೌಡ ದಂತ ವೈದ್ಯಕೀಯ ಮಹಾವಿದ್ಯಾಲಯದ ಅಧ್ಯಕ್ಷರಾದ ಬೇತೂರ್ ಪಾಳ್ಯ ಜೆ.ರಾಜು ಹೇಳಿದರು.

ನಗರದ ಗುರುಭವನದಲ್ಲಿ ರೈನ್ ಟ್ರಸ್ಟ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಆಷಾಡ ಗಾನ ಸಂಗಮ ಸೀಸನ್ 2 ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ್ ಮಾಳಿಗೆ ಮಾತನಾಡಿ, ರೈನ್ ಟ್ರಸ್ಟ್ ಸಂಸ್ಥೆ ವತಿಯಿಂದ ಆಯೋಜಿಸಿರುವ ಆಷಾಡ ಗಾನ ಸಂಗಮ  ಕಾರ್ಯಕ್ರಮ ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಈ ಗ್ರಾಮೀಣ ಭಾಗದ ಗಾಯಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂಬುದಾಗಿ ತಿಳಿಸಿದರು.

ರೈನ್ ಟ್ರಸ್ಟ್ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮಾತನಾಡಿ, ಈ ಸಂಗೀತ ಕಾರ್ಯಕ್ರಮ ಮೊನ್ನೆ ತಾನೆ ಆಗಲಿದ ಗಾನವಿಶಾರದೆ ಎಸ್.ಜಾನಕಿಯಮ್ಮ ಅವರ ಸ್ಮರಣಾರ್ಥ ಹಾಗೂ ನಾಡಿನ ಹೆಸರಾಂತ ಗಾಯಕರಾದ ಪಿ.ಬಿ.ಶ್ರೀನಿವಾಸ್ ಎಸ್.ಪಿ.ಬಾಲಸುಬ್ರಮಣ್ಯಂರಂತ ಗಾಯಕರ ಗೀತೆಗಳನ್ನು ನಾಡಿನ ವಿವಿದೆಡೆಯಿಂದ ಆಗಮಿಸಿರುವ ಸುಮಾರು 50ಕ್ಕೂ ಹೆಚ್ಚು ಗಾಯಕರಿಂದ ಪ್ರಸ್ತುತಪಡಿಸಲಾಗುತ್ತಿದೆ ಎಂಬುದಾಗಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರೈನ್ ಟ್ರಸ್ಟ್ ಉಪಾಧ್ಯಕ್ಷ ದೊಡ್ಡಘಟ್ಟ ಕುಮಾರ್, ಕಾರ್ಯದರ್ಶಿ ಮಂಜುನಾಥ್ ಕಳ್ಳಿಹಟ್ಟಿ, ಗಾಯಕರಾದ ರಂಗೇನಹಳ್ಳಿ ರಮೇಶ್, ಹಿರಿಯೂರಿನ ಡ್ಯಾನ್ಸ್ ಮಾಸ್ಟರ್ ಮಹೇಶ್, ಕಾರ್ಮಿಕಪರಿಷತ್ ಅಧ್ಯಕ್ಷಪರಮೇಶ್, ಮುಖಂಡರುಗಳಾದ ಕುಬೇರಪ್ಪ, ರಾಮಚಂದ್ರಕಸವನಹಳ್ಳಿ, ಕೆ.ಜಿ.ಹನುಮಂತರಾಯ, ಕಲಾವಿದ ಮಾರುತೇಶ್, ರೈತ ಮುಖಂಡರುಗಳಾದ ಆಲೂರುಸಿದ್ದರಾಮಣ್ಣ. ಕೆ.ಸಿ.ಹೊರೆಕೇರಪ್ಪ. ಆರ್.ಕೆ.ಗೌಡ್ರು, ರಾಜೇಶ್, ಹುಲಗಲಕುಂಟೆ ಶಶಿಕಲಾ, ಬಬ್ಬೂರು ಸುರೇಶ್, ಎಚ್ಆರ್ ತಿಮ್ಮಯ್ಯ. ಆಲಂ ಚಳ್ಳಕೆರೆ, ಶೃತಿ ಬೆಂಗಳೂರು, ಶಾಂಭವಿ ಚಿತ್ರದುರ್ಗ, ನಾಗರಾಜ್ ಬೆಂಗಳೂರು, ನಾಗವೇಣಿ, ಪುಟ್ಟಮ್ಮ ರಂಗಮ್ಮ ಲಿಂಗರಾಜು ರಂಗನಾಥ್, ಭೂತೇಶ್, ಇತರ ಗ್ರಾಮೀಣ ಭಾಗದ ಎಲೆಮರೆಕಾಯಿ ಆಗಿರುವ ಗಾಯಕರು ಕಾರ್ಯಕ್ರಮದಲ್ಲಿ ಹಾಡುವ ಮುಖಾಂತರ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

About The Author

Leave a Reply

Your email address will not be published. Required fields are marked *