July 29, 2026
04

ಹಿರಿಯೂರು :

ನಗರದ ತಾಲೂಕು ಕಚೇರಿ ಬಳಿ ಇರುವ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಇದೇ 29ರ ಬುಧವಾರ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಪೂಜಾ ಕಾರ್ಯಕ್ರಮ ಸಂಯೋಜಕರು ತಿಳಿಸಿದ್ದಾರೆ.

ಇದರ ಅಂಗವಾಗಿ ದೇವರಿಗೆ ಪುಷ್ಪಾರ್ಚನೆ ಪಂಚಾಮೃತ ಅಭಿಷೇಕ ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನ್ನಪೂರ್ಣೇಶ್ವರಿ ದೇವರ ಕೃಪೆಗೆ ಪಾತ್ರರಾಗುವಂತೆ ಪೂಜಾ ಕಾರ್ಯಕ್ರಮ ಸಂಯೋಜಕರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *