July 29, 2026
00003

ಹಿರಿಯೂರು :

ಶಿಕ್ಷಣದಿಂದ ಜನರಲ್ಲಿರುವ ಮೌಢ್ಯತೆ ಹಾಗೂ ಮೂಢನಂಬಿಕೆ ದೂರಮಾಡಲು ಸಾಧ್ಯ ಎಂಬುದನ್ನು ಜಗತ್ತಿಗೆ ತಿಳಿಸಿದ ಭಾರತ ರತ್ನ ಸಂವಿಧಾನಶಿಲ್ಪಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಶೋಷಿತರ ಗುಡಿಸಲುಗಳಲ್ಲಿ ಹೋರಾಟದ ಹಣತೆ ಹಚ್ಚಿದ ಮಹಾನ್ ಮಾನವತವಾಗಿ ಪ್ರೊ.ಬಿ.ಕೃಷ್ಣಪ್ಪ ರವರ ತತ್ವಗಳನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕು ಎಂಬುದಾಗಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ  ಕೆ.ರಾಮಚಂದ್ರ ಹೇಳಿದರು.

ನಗರದ ಗುರುಭವನದಲ್ಲಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ರಾಜ್ಯ ಸಮಿತಿ ವತಿಯಿಂದ ಮೊದಲ ಮೊದಲನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಶೇಕಡ 80% ಕಿಂತ ಹೆಚ್ಚು ಅಂಕ ಪಡೆದ ಸರ್ವ ಜನಾಂಗದ  ಪ್ರತಿಭಾವಂತ  ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ “ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ” ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಶೋಷಿತರ ಗುಡಿಸಲುಗಳಲ್ಲಿ ಅಕ್ಷರದ ಹಣತೆ ಬೆಳಗಿದರೆ ಮಾತ್ರ ಗಾಳಿ-ಬೆಳಕಿನಿಂದ ಕೂಡಿದ ಹೊರ ಜಗತ್ತನ್ನು ನೋಡಲು ಸಾಧ್ಯ, ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ನಮ್ಮ ಬದುಕು ಕಟ್ಟಿಕೊಂಡರೆ ಮಾತ್ರ ಬಾಬಾಸಾಹೇಬರಿಗೆ ಗೌರವ ಕೊಟ್ಟಂತೆ ಆಗುತ್ತದೆ, ಶೋಷಣೆ ಸಹಿಸಿಕೊಳ್ಳುವುದಕ್ಕೂ ಒಂದು ಮಿತಿ ಇದೆ, ಎಂಬುದನ್ನು ಯಾರೂ ಮರೆಯಬಾರದು ಎಂಬುದಾಗಿ ಎಚ್ಚರಿಸಿದರು.

ನಟ ಚೇತನ್ ಅಹಿಂಸಾ ಮಾತನಾಡಿ, ಚುನಾವಣೆಗಳು ಬಂದಾಗ ನಮ್ಮ ಮತವನ್ನು ಹಣಕ್ಕೆ, ಮದ್ಯಕ್ಕೆ, ಉಡುಗೊರೆಗಳಿಗೆ ಮಾರಿಕೊಂಡರೆ ಬದುಕನ್ನು ಉಳ್ಳವರಿಗೆ ಅಡವಿಟ್ಟಂತೆ, ಜನರ ಬಡತನವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಬಂಡವಾಳಷಾಹಿಗಳ ಕೈಗೆ ಅಧಿಕಾರ ಹೋಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಜನರ ಮೇಲಿದೆ, ಯೋಗ್ಯರನ್ನು, ಬಡವರ ಕಣ್ಣೀರು ಒರೆಸುವವರನ್ನು ಸಮಸಮಾಜದ ನಿರ್ಮಾಣಕ್ಕೆ ಶ್ರಮಿಸುವವರನ್ನು ಆಯ್ಕೆ ಮಾಡಿಕೊಳ್ಳುವ ಗೈರತ್ತು ತೋರಿಸಿರಿ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ  ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಆರ್.ರಾಘವೇಂದ್ರ, ಚಲನಚಿತ್ರ ನಟ ಹಾಗೂ ಸಾಮಾಜಿಕ ಹೋರಾಟಗಾರರಾದ ಚೇತನ್ ಅಹಿಂಸಾ, ಚಿಂತಕರು ಹಾಗೂ ಅಂಬೇಡ್ಕರ್ ವಾದಿಗಳಾದ ಸುರೇಶ್ ಗೌತಮ್, ಹಿರಿಯೂರು ತಾಲೂಕು ದಲಿತಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷರಾದ ತಿಮ್ಮ ರಾಜ್ ಕೆ, ತಾಲೂಕು ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾದ ರವಿಕುಮಾರ್ ಘಾಟ್, ಬಿಡಿಎಸ್ಎಸ್ ರಾಜ್ಯ ಉಪಾಧ್ಯಕ್ಷರಾದ ಚಂದ್ರಪ್ಪ ಘಾಟ್, ಮಾ ನಾಯಕ ದಲಿತ ಸೇನೆ ಜಿಲ್ಲಾ ಕಾರ್ಯಧ್ಯಕ್ಷರಾದ ಕರ್ಣಕುಮಾರ್,ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಮಾರುತಿ ಎನ್, ರಾಜ್ಯ ಸಲಹೆಗಾರರಾದ ವಸಂತ್ ಬಿ ಶಿಕ್ಷಕರು , ರಾಜ್ಯ ಕಾನೂನು ಸಲಹೆಗಾರರಾದ ಗೋಣೆಪ್ಪ ಸಂಗೊಳ್ಳಿ, ರಾಜ್ಯ ಕಾರ್ಯದರ್ಶಿಯಾದ ಮಲ್ಲಪ್ಪ ಹಂಚಿನಮನಿ,ಮದ್ಯ ಕರ್ನಾಟಕ ವಿಭಾಗೀಯ ಅಧ್ಯಕ್ಷರಾದ ಬಸವರಾಜ್ ಕುರುಬರಹಳ್ಳಿ ಹಾವೇರಿ ಜಿಲ್ಲಾ ಅಧ್ಯಕ್ಷರಾದ ಹೊನ್ನಪ್ಪ ಮಾಳಗಿ,ಗೌರವ ಉಪಾಧ್ಯಕ್ಷರಾದ ಗುಡ್ಡಪ್ಪ ಬಣಕಾರ್ ಜಿಲ್ಲಾ ಉಪಾಧ್ಯಕ್ಷರಾದ ಗುಡ್ಡಪ್ಪ ಮಾಳಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಗುಡ್ಡಪ್ಪ ವೈ ಹೆಚ್,ವಿಜಯ ನಗರ ಜಿಲ್ಲಾ ಉಪಾಧ್ಯಕ್ಷರಾದ ಪರಶುರಾಮ್, ಸಾಂಸ್ಕೃತಿಕ ಕಲಾತಂಡದ ಜಿಲ್ಲಾಧ್ಯಕ್ಷರಾದ ನಿಚ್ಚವನಹಳ್ಳಿ ಭೀಮಜ್ಜ, ಜಿಲ್ಲಾ ಕಾರ್ಯದರ್ಶಿಯಾದ ಮಾತಂಗಿ ಆಂಜಿನಪ್ಪ, ಪೂಜಾರ್ ಗೋಣೆಪ್ಪ , ಹರಪನಹಳ್ಳಿ ಗೌರವಾಧ್ಯಕ್ಷರಾದ ರಮೇಶ್, ಹರಪನಹಳ್ಳಿ ತಾಲೂಕು ಅಧ್ಯಕ್ಷರಾದ ಜಗದೀಶ್ ಪೂಜಾರ್, ತಾಲೂಕು ಪ್ರಧಾನ ಕಾರ್ಯದರ್ಶಿಯಾದ ರವಿಚಂದ್ರ, ತಾಲೂಕು ಸಂಘಟನಾ ಕಾರ್ಯದರ್ಶಿಯಾದ ಜೈ ಕುಮಾರ್, ತಾಲೂಕು ಕಾರ್ಯದರ್ಶಿ ದುರ್ಗೇಶ್, ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿಯಾದ ರಂಗನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಲ್ಲೇಶ್, ಜಿಲ್ಲಾ ಉಪಾಧ್ಯಕ್ಷರುಗಳಾದ ಲಕ್ಷ್ಮಣ್ ರಾವ್, ಕೆಂಚಪ್ಪ ಆಟೋ, ನಿರಂಜನ್, ಅಲ್ಪಸಂಖ್ಯಾತರ ಘಟಕ ಜಿಲ್ಲಾಧ್ಯಕ್ಷರಾದ ಸಾಧಿಕ್ ಸೀಮೆಎಣ್ಣೆ, ಯುವ ಘಟಕ ಜಿಲ್ಲಾ ಅಧ್ಯಕ್ಷರಾದ ಮಲ್ಲಪ್ಪ, ಹಿರಿಯೂರ್ ತಾಲೂಕು ಅಧ್ಯಕ್ಷರಾದ ಓಂಕಾರ್ ಮೂರ್ತಿ ಕೆ (ದೊಡ್ಡಘಟ್ಟ) ತಾಲೂಕು ಗೌರವಾಧ್ಯಕ್ಷರಾದ ದೇವರಾಜ್ ಸೀಗೆಹಟ್ಟಿ, ತಾಲೂಕು ಕಾರ್ಯಧ್ಯಕ್ಷರಾದ ರಂಗಸ್ವಾಮಿ (ಆಟೋ) ತಾಲೂಕು ಉಪಾಧ್ಯಕ್ಷರಾದ ದಾಸಪ್ಪ ಶ್ರವಣಗೆರೆ, ತಾಲೂಕು ಯುವ ಘಟಕ ಅಧ್ಯಕ್ಷರಾದ ಅಶೋಕ್ ಹರ್ತಿಕೋಟೆ, ತಾಲೂಕು ಆಟೋ ಘಟಕ ಅಧ್ಯಕ್ಷರಾದ ರಮೇಶ್, ನಗರಾಧ್ಯಕ್ಷರಾದ ದಿಲೀಪ್ ಕುಮಾರ್, ತಾಲೂಕು ಯುವ ಘಟಕ ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ ಸೂರಗೊಂಡನಹಳ್ಳಿ, ತಾಲೂಕು ಸಂಘಟನಾ ಕಾರ್ಯದರ್ಶಿಯಾದ ರಾಘವೇಂದ್ರ ಟಿ, ತಾಲೂಕು ಸಂಘಟನಾ ಕಾರ್ಯದರ್ಶಿ ಗೌರೀಶ್ ಗೊಲ್ಲಹಳ್ಳಿ, ತಾಲೂಕು ಕಾರ್ಯದರ್ಶಿ ಅಜಯ್, ಐಮಂಗಳ ಹೋಬಳಿ ಅಧ್ಯಕ್ಷರಾದ ಸುದೀಪ್, ತಾಲೂಕು ಕಾರ್ಯದರ್ಶಿಗಳಾದ ನವೀನ್ ಅಜಯ್ ಗಿರೀಶ್ ತಾಲೂಕು ಕಾರ್ಯದರ್ಶಿಗಳು ನವೀನ್ ಸೂಗೂರು, ಅಜಯ್, ಗಿರೀಶ್ ಡಿಸಿಕಾಲೋನಿ ಗ್ರಾಮ ಶಾಖೆ ಅಧ್ಯಕ್ಷರುಗಳಾದ ದೊಡ್ಡ ಆಲಘಟ್ಟ ಅಧ್ಯಕ್ಷರಾದ ವೆಂಕಟೇಶ್, ಕಾಲ್ಗೆರೆ ಗ್ರಾಮ ಶಾಖೆ ಅಧ್ಯಕ್ಷರಾದ ಲೋಕೇಶ್, ಹೊಂಬಳಗಟ್ಟೆ ಗ್ರಾಮ ಶಾಖೆ ಅಧ್ಯಕ್ಷರಾದ ಬಸವರಾಜ್, ಹಳ್ಳಿಕೆರೆ ಗ್ರಾಮ ಶಾಖೆಯ ಪದಾಧಿಕಾರಿಗಳು, ಹೊಸಕೋಟೆ ಗ್ರಾಮ ಶಾಖೆಯ ಪದಾಧಿಕಾರಿಗಳು ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *