July 30, 2026
00004

ಹಿರಿಯೂರು :

ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ದಾನಿಗಳ ಸಹಕಾರವೇ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದ್ದು, ಪ್ರತಿದಿನ ನೂರಾರು ರೋಗಿಗಳಿಗೆ ಉಚಿತ ಉಪಹಾರ ಕೊಡಲಾಗುತ್ತಿದ್ದು, ನೂರಾರು ಜನ ರೋಗಿಗಳಿಗೆ ಇದರಿಂದ ಅನುಕೂಲವಾಗಿದೆ  ಎಂಬುದಾಗಿ ರೋಟರಿ ಸಂಸ್ಥೆ ನೂತನ ಅಧ್ಯಕ್ಷರಾದ ಹೆಚ್.ಡಿ.ವಸಂತ್ ಕುಮಾರ್ ಹೇಳಿದರು.

ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ರೋಟರಿ ಸಂಸ್ಥೆ ಹಾಗೂ ರೆಡ್ ಕ್ರಾಸ್ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಿಗೆ ವಾರದ 6 ದಿನಗಳು ಕೊಡಲಾಗುತ್ತಿರುವ ಉಚಿತ ಉಪಹಾರವನ್ನು ಆಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ವಿತರಿಸಿ, ನಂತರ ಅವರು ಮಾತನಾಡಿದರು.

ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ ಮಾತನಾಡಿ, ಈ ಉಪಹಾರ ವಿತರಣೆ ಕಾರ್ಯಕ್ರಮಕ್ಕೆ ಹೆಚ್ಚು ಹೆಚ್ಚು ದಾನಿಗಳು ಮುಂದೆ ಬಂದು ಸಹಕಾರ ನೀಡುತ್ತಿರುವುದರಿಂದ ಈ ಕಾರ್ಯಕ್ರಮ ಯಶಸ್ವಿಯಾಗುತ್ತಿದ್ದು, ಇದಕ್ಕೆ ಸಹಕಾರ ನೀಡುತ್ತಿರುವ ಎಲ್ಲಾ ದಾನಿಗಳಿಗೂ ನಮ್ಮ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯಿಂದ ಧನ್ಯವಾದ ತಿಳಿಸುತ್ತೇನೆ ಎಂಬುದಾಗಿ ಹೇಳಿದರು.

ರೆಡ್ ಕ್ರಾಸ್ ವೈಸ್ ಚೇರ್ಮನ್ ಎ.ರಾಘವೇಂದ್ರ ಮಾತನಾಡಿ, ನಮ್ಮ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ನಿಸ್ವಾರ್ಥ ಸೇವೆ  ಹಾಗೂ ಜನಪರ ಕಾರ್ಯಗಳಿಂದ ಜನಮೆಚ್ಚುಗೆಗೆ ಪಾತ್ರರಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೊಸಹೊಸ ಜನಪರ ಕಾರ್ಯಕ್ರಮಗಳನ್ನು ಸಾರ್ವಜನಿಕರ ಹಿತಕ್ಕಾಗಿ ಹಮ್ಮಿಕೊಳ್ಳಲಾಗುತ್ತದೆ ಎಂಬುದಾಗಿ ಹೇಳಿದರು.

ರೋಟರಿ ಕಾರ್ಯದರ್ಶಿ ಚಂದ್ರಹಾಸ್ ಮಾತನಾಡಿ, ವಾರದ 6 ದಿನಗಳು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಉಚಿತ ಆಹಾರವನ್ನು ನೀಡಲಾಗುತ್ತಿದ್ದು, ಗ್ರಾಮೀಣ ಭಾಗದಿಂದ ಚಿಕಿತ್ಸೆಗಾಗಿ ಬರುವ ಹಲವಾರು ಜನರಿಗೆ ಇದರಿಂದ ತುಂಬಾ ಅನುಕೂಲವಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ನೂತನ ಅಧ್ಯಕ್ಷರಾದ ಹೆಚ್.ಡಿ.ವಸಂತ್ ಕುಮಾರ್,  ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ರೆಡ್ ಕ್ರಾಸ್ ವೈಸ್ ಚೇರ್ಮನ್ ಎ.ರಾಘವೇಂದ್ರ, ರೋಟರಿ ಕಾರ್ಯದರ್ಶಿ ಚಂದ್ರಹಾಸ್, ಸಮಾಜ ಸೇವಕರಾದ ಶ್ರೀಮತಿಶಶಿಕಲಾರವಿಶಂಕರ್ ಎಲ್.ಆನಂದಶೆಟ್ಟಿ, ಬಿ.ಕೆ.ನಾಗಣ್ಣ, ಡಿಶ್ ಪ್ರೇಮ್ ಕುಮಾರ್, ಹೆಚ್.ವೆಂಕಟೇಶ್, ಅನಿಲ್ ಕುಮಾರ್, ಕಿರಣ್, ಹೆಚ್.ಎಸ್.ನಾಗರಾಜ್ ಗುಪ್ತಾ, ಟಿ.ಮಲ್ಲೇಶಪ್ಪ, ಆರ್.ಶಿವಕುಮಾರ್, ಸುರೇಶ್ ಕುಮಾರ್ ಚಾಜೆಟ್, ಹರ್ಷ, ರವಿಕುಮಾರ್, ಪಿ.ಆರ್.ಸತೀಶ್ ಬಾಬು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *