July 29, 2026
05

ಹಿರಿಯೂರು :

ಹಿರಿಯೂರಿನ ಸುತ್ತಮುತ್ತಲಿನ ಹಳ್ಳಿಗಳಿಂದ ಪದವಿ ವ್ಯಾಸಂಗ ಮಾಡಲು ವಿದ್ಯಾರ್ಥಿ ವಿದ್ಯಾರ್ಥಿನಿಯರು ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬರುತ್ತಿದ್ದು, ಈ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಕಾಲೇಜಿನ ಬಂದು ವ್ಯಾಸಂಗ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಗಡಿಭಾಗದ ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂಬುದಾಗಿ ವಾಣಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯರವರು ಮಾನ್ಯಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ಮನವಿ ಮಾಡಿದ್ದಾರೆ.

ಕರ್ನಾಟಕ, ಆಂಧ್ರಪ್ರದೇಶ ಹಾಗೂ ಚಿತ್ರದುರ್ಗ ಜಿಲ್ಲೆಯ ಗಡಿಭಾಗದ ಹಳ್ಳಿಗಳಾದ ಕಡೇಹುಡೆ, ಮಾರ್ಗವಾಗಿ ಅಗ್ರಹಾರ, ವಲಸೆ, ಖಂಡೇನಹಳ್ಳಿ, ಪಾಳ್ಯ, ಹೊಸಕೆರೆ, ಪಿಡಿಕೋಟೆ, ಧರ್ಮಪುರ ಶ್ರವಣಗೆರೆ, ಹರಿಯಬ್ಬೆ, ಗೊಲ್ಲಹಳ್ಳಿಗೇಟ್, ಚಿಲ್ಲಹಳ್ಳಿ, ಅಬ್ಬಿನಹೊಳೆ, ದೇವರಕೊಟ್ಟಗೇಟ್, ಬ್ಯಾಡರಹಳ್ಳಿ, ಮಸ್ಕಲ್ ಮಟ್ಟಿ, ಮಸ್ಕಲ್, ಮಲ್ಲೇಣು, ಭೀಮನಬಂಡೆ, ಬಬ್ಬೂರು ಹಿರಿಯೂರು ಮಾರ್ಗವಾಗಿ 60 ಕಿಲೋಮೀಟರ್ ದೂರದ ಮಾರ್ಗ ಮಾರ್ಗವಾಗಿರುತ್ತದೆ.

ಇದುವರೆಗೂ ಬಸ್ಸುಗಳನ್ನೇ ನೋಡದ ಹಳ್ಳಿಗಳ ಮಾರ್ಗವಾದ ಕಡೇಹುಡೆ, ಹಳ್ಳಿಗಳ ಮಾರ್ಗವಾದ ಓಬನಹಳ್ಳಿ, ದೊಡ್ಡಚೆಲ್ಲೂರು, ಹೊಸಕೆರೆ, ಪಿಡಿಕೋಟೆ, ಧರ್ಮಪುರ, ಶ್ರವಣಗೆರೆ, ಹರಿಯಬ್ಬೆ, ಗೊಲ್ಲಹಳ್ಳಿ, ತೋಪು, ಗುಳ್ಯಾ, ಶಿಡ್ಲಯ್ಯನಕೋಟೆ, ರಂಗೇನಹಳ್ಳಿ, ಕಂದೀಕೆರೆ, ಯರಬಳ್ಳಿ, ಕಳಾವಿಭಾಗಿ, ಕಪಿಲೆಹಟ್ಟಿ, ಹರ್ತಿಕೋಟೆ, ಚನ್ನಮ್ಮನಹಳ್ಳಿ, ಬಾಲನಹಳ್ಳಿ, ಗನ್ನಾಯಕನಹಳ್ಳಿ, ಈ ಮಾರ್ಗವಾಗಿ ಬಸ್ಸಿನ ಸೌಲಭ್ಯ ಕಲ್ಪಿಸಬೇಕು.

ನಗರಕ್ಕೆ ಬರುವ ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ಸಾರ್ವಜನಿಕರುಗಳಿಗೆ ತಾಲೂಕು ಕೇಂದ್ರ ಮತ್ತು ನಗರವನ್ನು ಸಂಪರ್ಕಿಸಲು ಸಹಕಾರಿಯಾಗುತ್ತದೆ, ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕೆ.ಎಸ್.ಆರ್.ಟಿ.ಸಿ ಹಿರಿಯೂರು ನೂತನ ಡಿಪೋ ಮೂಲಕ ಗಡಿಭಾಗದ ಹಳ್ಳಿಗಳಿಗೆ ಬಸ್ಸು ಸೌಲಭ್ಯ ಕಲ್ಪಿಸುವಂತೆ ಮಾನ್ಯ ಸಾರಿಗೆ ಸಚಿವರು ಹಾಗೂ ಡಿಪೋ ಮ್ಯಾನೇಜರ್ ಗಳಿಗೆ ಸೂಚನೆ ನೀಡಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *