
ಹಿರಿಯೂರು :
ತಾಲೂಕಿನ ಕಸಬಾ ಹೋಬಳಿ ಹಾಗೂ ಐಮಂಗಳ ಹೋಬಳಿ ಕೆರೆಗಳಿಗೆ ಭದ್ರಾಮೇಲ್ದಂಡೆ ಯೋಜನೆಯಿಂದ ಈಗಾಗಲೇ ಅಲೋಕೇಶನ್ ಆಗಿ ಟೆಂಡರ್ ಕರೆದು ಏಜೆನ್ಸಿ ಕೂಡ ಆಗಿದೆ, ಆದರೆ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಸ್ಥಗಿತಗೊಳಿಸಿ, ಈ ಭಾಗದಲ್ಲಿ ಹನಿನೀರಾವರಿ ಕಾಮಗಾರಿ ಮಾಡುತ್ತಿದ್ದಾರೆ ಎಂಬುದಾಗಿ ರಾಜ್ಯರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ತಾಲೂಕು ಕಸಬಾ ಹೋಬಳಿ ಹಾಗೂ ಐಮಂಗಳ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸುವಂತೆ ಒತ್ತಾಯಿಸಿ, ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ರವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ತುರ್ತಾಗಿ ಕಸಬಾ ಹೋಬಳಿ ಹಾಗೂ ಐಮಂಗಳ ಹೋಬಳಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡು, ಇನ್ನು ಎರಡು ತಿಂಗಳೊಳಗಾಗಿ ನೀರು ಹರಿಸದೆ ಹೋದರೆ ನಾವು ಸಾಕಿರುವ ಎಲ್ಲಾ ತೋಟಗಳು ಒಣಗಿ ಹೋಗಿ ಮತ್ತು ಜನಜಾನುವಾರು ಕುಡಿಯುವ ನೀರಿಗೂ ತುಂಬಾ ಅಭಾವ ಉಂಟಾಗಿದೆ,
ಆದ್ದರಿಂದ ತಾವುಗಳು ಈ ಕೂಡಲೇ ತುರ್ತಾಗಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಆರಂಭಿಸಿ, ಕೆರೆಗಳಿಗೆ ನೀರು ಹರಿಸದೇ ಹೋದರೆ ಮುಂಬರುವ ಉಪಚುನಾವಣೆಯನ್ನು ಬಹಿಷ್ಕರಿಸಲು ಮತದಾರರು ತೀರ್ಮಾನಿಸಿದ್ದಾರೆ ಎಂಬುದಾಗಿ ಅವರು ಈ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ವೆಂಕಟೇಶ್, ಲಕ್ಷ್ಮಣ್ ಹೂಗಾರ್, ನಿರಂಜನ್ ಗೌಡ, ಎಲ್.ಜಿ.ಗೋವಿಂದ, ಎನ್.ವಿ.ರಾಜಪ್ಪ, ಸಿದ್ದಮ್ಮ, ಶಿವಣ್ಣ, ತಿಮ್ಮಯ್ಯ, ರಾಜಣ್ಣ, ಕರಿಯಪ್ಪ, ರಮೇಶ್, ಸಣ್ಣತಿಮ್ಮಣ್ಣ, ರಾಮಣ್ಣ, ಹರಿಹರ, ರಾಮಣ್ಣ, ಪರಮೇಶ್, ಇತರರು ಉಪಸ್ಥಿತರಿದ್ದರು.
