
ಹಿರಿಯೂರು :
ಪ್ರತಿವರ್ಷದಂತೆ ಈ ವರ್ಷವೂ ಸಹ ಆಶ್ರಮದ ಹಿರಿಯರಿಗೆ ಮದ್ಯಾಹ್ನ ಹಾಗೂ ರಾತ್ರಿಯ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿ ಮಾಡಿರುವ ಮಾಹಿ ಜೂವೇಲರ್ಸ್ ಹಾಗೂ ಮಾಹಿಫಾರಂ ಹೌಸ್ ಮಾಲೀಕರಾದ ಕೌಶಿಕ್ ನಾಯ್ಡು ಹಾಗೂ ಅವರ ಕುಟುಂಬವರ್ಗಕ್ಕೆ ದೈವಾನುಗ್ರಹ ಪ್ರಾಪ್ತಿಯಾಗಲಿ ಎಂಬುದಾಗಿ ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿರವರು ಆಶ್ರಮದ ನಿವಾಸಿಗಳ ಪರವಾಗಿ ಶುಭಹಾರೈಸಿದರು.
ತಾಲ್ಲೂಕಿನ ಶ್ರೀಶುಭೋದಯ ಶೈ ಕ್ಷಣಿಕ ಸೇವಾ ಆಶ್ರಮದ ದಾನಿಗಳು ಆದ ಮಾಹಿ ಜೂವೇಲರ್ಸ್ ಹಾಗೂ ಮಾಹಿಫಾರಂ ಹೌಸ್ ಮಾಲೀಕರು ಆದ ಕೌಶಿಕ್ ನಾಯ್ಡು ರವರ ಹುಟ್ಟುಹಬ್ಬದ ಪ್ರಯುಕ್ತ ಆಶ್ರಮದ ನಿವಾಸಿಗಳಿಗೆ ಮದ್ಯಾಹ್ನ ಹಾಗೂ ರಾತ್ರಿಯ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿ, ನಂತರ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.
