July 29, 2026
00001

ಹಿರಿಯೂರು :

ನಗರದ ಆರ್ಯವೈಶ್ಯ ಸಮಾಜದ ಉದ್ಯಮಿ, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷರು, ಆರ್ಯವೈಶ್ಯ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಗೌರವಾಧ್ಯಕ್ಷರಾದ ಎಲ್.ಆನಂದಶೆಟ್ಟಿರವರು ತಮ್ಮ 84 ನೇ ವರ್ಷದ ಹುಟ್ಟುಹಬ್ಬವನ್ನು ನಮ್ಮ ಆಶ್ರಮದಲ್ಲಿ ಆಚರಿಸಿಕೊಳ್ಳುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂಬುದಾಗಿ ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಹೇಳಿದರು. 

   

ತಾಲ್ಲೂಕಿನ ಭೀಮನಬಂಡೆ ಶ್ರೀಶುಭೋದಯ ವೃದ್ಧಾಶ್ರಮದಲ್ಲಿ ನಗರದ ಉದ್ಯಮಿ ಎಲ್.ಆನಂದಶೆಟ್ಟಿರವರ 84 ನೇ ವರ್ಷದ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ನಂತರ ಅವರು ಮಾತನಾಡಿದರು.

ವೃದ್ಧಾಶ್ರಮದ ಹಿರಿಯರಿಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಮಾಡಿದ ಶ್ರೀಯುತ ಎಲ್.ಆನಂದಶೆಟ್ಟಿರವರು ಹಾಗೂ ಅವರ ಕುಟುಂಬಸ್ಥರಿಗೆ ಭಗವಂತನು ಆರೋಗ್ಯ, ಯಶಸ್ಸು, ಸುಖ-ಶಾಂತಿ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ಎಂಬುದಾಗಿ ಆಶ್ರಮದ ನಿವಾಸಿಗಳ ಪರವಾಗಿ ಅವರು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಹಿರಿಯರೆಲ್ಲರೂ ಶ್ರೀಯುತ ಎಲ್.ಆನಂದಶೆಟ್ಟಿರವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿಯ ಉಪಾಧ್ಯಕ್ಷರಾದ ಕೆ.ವಿ.ಅಮರೇಶ್, ಕಾರ್ಯದರ್ಶಿ ಪಿ.ವಿ.ನಾಗರಾಜ್, ವೆಂಕಟಾಚಲ, ಪಿ.ಆರ್.ಸತೀಶ್ ಬಾಬು, ಹೆಚ್.ಎಸ್.ನಾಗರಾಜ್ ಗುಪ್ತಾ, ಹೆಚ್.ಎಸ್.ಸುಂದರ್ ರಾಜ್, ಆರ್.ಅನಿಲ್ ಕುಮಾರ್, ರಾಜ್ ಕುಮಾರ್, ಜಗದೀಶ್, ದೇವರಾಜ್ ಮೂರ್ತಿ, ಬಿ.ಕೆ.ನಾಗಣ್ಣ, ಈ.ರಮೇಶ್ ಬಾಬು, ಡಾ.ಡಿ.ಧರಣೇಂದ್ರಯ್ಯ, ಹೆಚ್.ಡಿ.ವಸಂತ್ ಕುಮಾರ್, ಕಿರಣ್, ಬಿ.ಎನ್.ತಿಪ್ಪೇಸ್ವಾಮಿ, ಶ್ರೀಯುತ ಎಲ್.ಆನಂದಶೆಟ್ಟಿರವರ ಪುತ್ರರಾದ ಎ.ಬಾಲಾಜಿ, ಎ.ಲಕ್ಷ್ಮೀಶ, ಸೊಸೆಯಂದಿರಾದ ಮಧುರ, ಶ್ವೇತಾ ಸೇರಿದಂತೆ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *