July 29, 2026
0004

ಹಿರಿಯೂರು;

ಜಿಲ್ಲೆಯ ಪ್ರಖ್ಯಾತ ಸಾಹಿತಿ ಹಾಗೂ ಹಿರಿಯ ಪತ್ರಕರ್ತರಾದ  ಜಿ,ಎಸ್, ಉಜ್ಜಿನಪ್ಪನವರು ಬರೀ ಅವರ ಕುಟುಂಬಕ್ಕೆ ಒಡನಾಡಿಯಾಗಿರದೆ ಇಡೀ ಸಮಾಜಕ್ಕೆ ಆಸ್ತಿಯಾಗಿದ್ದರು, ಇವರು ಪ್ರೀತಿ ಮಮತೆ, ವಾತ್ಸಲ್ಯ ಮಾನವೀಯ ಮೌಲ್ಯಗಳಿಗೆ ಸದಾ ಒತ್ತು ಕೊಡುವ ಸಾಕಾರಮೂರ್ತಿ, ನಿಜವಾಗಿಯೂ ಅವರ ಸಾವು ದೊಡ್ಡ ಆಘಾತ ತಂದಿದೆ ಎಂಬುದಾಗಿ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಾದ ಡಾ. ಡಿ ಧರಣೇಂದ್ರಯ್ಯ ಹೇಳಿದರು.

ನಗರದ ಸರ್ಕಾರಿ ನಿವೃತ್ತ ನೌಕರರ ಸಂಘದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ , ಹಿರಿಯೂರು, ಕಳವಿಭಾಗಿ ಶ್ರೀ ರಂಗನಾಥ ಸ್ವಾಮಿ ಸಾಂಸ್ಕೃತಿಕ ಕಲಾಸಂಘ (ರಿ) ಸಕ್ಕರ, ಇವರುಗಳ  ಸಂಯುಕ್ತಾಶ್ರಯದಲ್ಲಿ ಸಾಹಿತಿ ಹಾಗೂ ಪತ್ರಕರ್ತ ಜಿ,ಎಸ್,ಉಜ್ಜಿನಪ್ಪ, ಹಾಗೂ ನಿವೃತ್ತ ಶಿಕ್ಷಕ ಸಿ,ಆರ್, ಏಕಾಂತಪ್ಪ, ಇವರುಗಳಿಗೆ ಆಯೋಜಿಸಿದ್ದ “ನುಡಿನಮನ” ಕಾರ್ಯಕ್ರಮದಲ್ಲಿ ಜಿ,ಎಸ್,ಉಜ್ಜಿನಪ್ಪ ಹಾಗೂ ಸಿ,ಆರ್,ಏಕಾಂತಪ್ಪ, ಇವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಹಿರಿಯ ಪತ್ರಕರ್ತರಾದ  ಜಿ,ಎಸ್,ಉಜ್ಜಿನಪ್ಪನವರು ಮೊದಲಿಗೆ ಜಯಲಕ್ಷ್ಮಿ ಮಿಲ್ಲಿನಲ್ಲಿ ಕಾರ್ಮಿಕರಾಗಿ ಆಫೀಸರ್ ಆಗಿ ಬದುಕನ್ನ ಆರಂಭಿಸಿದರು, ಲೋಕವಾಣಿ ಪತ್ರಿಕೆಯ ವರದಿಗಾರರಾಗಿ ಏಜೆನ್ಸಿಯಾಗಿ ಲಂಕೇಶ್ ಪತ್ರಿಕೆಯ ಏಜೆನ್ಸಿಯಾಗಿ  ಹಾಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಸುಮಾರು 40 ವರ್ಷಗಳ ಕಾಲ ಸುಧೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ.

ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಕಥೆ, ಕಾದಂಬರಿ, ಸಣ್ಣ ಕಥೆ, ವ್ಯಕ್ತಿಚಿತ್ರ, ಲೇಖನಗಳನ್ನು ಬರೆದಿದ್ದಾರೆ,  ನೆನಪೆಂಬ ನಿಧಿ ,ಹಬ್ಬಿದ ಮೇಲೆ ಮಧ್ಯದೊಳಗೆ, ದಾರಿಗೆ ಜೊತೆ ಇಲ್ಲ, ಗೌನಳ್ಳಿ ಎಂಬ ಗ್ರಾಮ ಭಾರತ, ಗೌನಳ್ಳರು, ಭೀಮಪ್ಪ ನಾಯಕ ಹೀಗೆ 16ಕ್ಕೂ ಹೆಚ್ಚು ಕೃತಿಗಳನ್ನು  ನಾಡಿಗೆ ನೀಡಿದ್ದಾರೆ ಎತ್ತಪ್ಪ ಮತ್ತು ಜುಂಜಪ್ಪ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ಈ ಕೃತಿ ಇಂಗ್ಲಿಷ್ ಸಾಹಿತ್ಯಕ್ಕೆ ಹೊಸಮೆರಗನ್ನು ತಂದುಕೊಟ್ಟಿತು, ಚಿತ್ರದುರ್ಗದ ಮುರುಘ ಮಠದ ಒಡನಾಡಿಯಾಗಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಪಿ, ಎಚ್ ಡಿ, ಸಂಶೋಧಕರಿಗೆ ಕಿರಿಯ ಪತ್ರಕರ್ತರಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿ ಸಲಹೆ  ಸಹಕಾರ ನೀಡಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಹೇಳಿದರು.    

ನಿವೃತ್ತಶಿಕ್ಷಕಿ ಟಿ,ಯಮುನಾ ಮಾತನಾಡಿ ಸಿ,ಆರ್,ಏಕಾಂತಪ್ಪನವರು ಶಿಕ್ಷಕರಾಗಿ ಮಾರ್ಗದರ್ಶಿಯಾಗಿ ಶಿಕ್ಷಣ ಇಲಾಖೆಯಲ್ಲಿ ಸುಮಾರು 25 ವರ್ಷ ಕಾಲ ಕೆಲಸ ಮಾಡಿದ್ದಾರೆ ಹಾಗೆ ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ,ಕರ್ನಾಟಕ ಜಾನಪದ ಪರಿಷತ್ತು, ಹಾಗೂ ವಿವಿಧ ಸಂಘ-ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಕ್ಕೆ ದುಡಿದಿದ್ದಾರೆ, ಬಡವಿದ್ಯಾರ್ಥಿಗಳಿಗೆ ಸಹಕಾರ ನೀಡಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಇವರ ಸಮಾಜ ಸೇವೆ ನಿರಂತರ ವಾಗಿತ್ತುಎಂದು ಅವರ ಬದುಕನ್ನು ಕುರಿತು ಹೇಳಿದರು,

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸರ್ಕಾರಿನಿವೃತ್ತ ನೌಕರ ಸಂಘದ ಉಪಾಧ್ಯಕ್ಷರಾದ ಜಿ,ಏಕಾಂತಪ್ಪ, ವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಎಸ್, ಜಿ, ರಂಗಸ್ವಾಮಿ ಸಕ್ಕರ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಜೆ, ನಿಜಲಿಂಗಪ್ಪ, ತಾಲೂಕು  ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರ್ತಿಕೋಟಿ ಮಹಾಸ್ವಾಮಿ , ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ  ಉಪಾಧ್ಯಕ್ಷೆ ಎನ್, ಯಶೋದಮ್ಮ, ಕಾರ್ಯದರ್ಶಿ ಕೆ, ಗುರುಸಿದ್ದಪ್ಪ, ಜಿ,ಎಸ್,  ಉಜ್ಜಿನಪ್ಪ ನವರ ಸಹೋದರ ಜಿ,ಎಸ್, ಬಸವರಾಜ್, ಮಗಳು ಜಿ,ಯು, ಹೇಮಲತಾ, ಮಂಜುಳಾ, ಎಂ,ಬಿ, ಲಿಂಗಪ್ಪ, ಎಚ್, ಎಸ್, ಚಂದ್ರವದನ, ಎಂ, ವಿ, ನಾಗರತ್ನಮ್ಮ, ರಾಧಿಕಾ, ಸರೋಜಮ್ಮ, ನರಸಿಂಹಯ್ಯ, ಶಂಭುಲಿಂಗಪ್ಪ, ಲಕ್ಷ್ಮಣಪ್ಪ  ತಿಪ್ಪೇಸ್ವಾಮಿ, ಶಾಂತಮ್ಮ,  ಹಾಗೂ ಇತರರು ಉಪಸ್ಥಿತರಿದ್ದರು,

About The Author

Leave a Reply

Your email address will not be published. Required fields are marked *