
ಹಿರಿಯೂರು :
ವಿವಿ ಸಾಗರ ಜಲಾಶಯದಿಂದ ಚಳ್ಳಕೆರೆ ಚಿತ್ರದುರ್ಗ ಡಿ ಆರ್ ಡಿ ಓ, ಐಎಎಸ್ಸಿ, ಬಿಎಆರ್ಸಿಗಳಿಗೆ ಸಂಸ್ಥೆಗಳಿಗೆ ಹಾಗೂ ಮಾರ್ಗ ಮಧ್ಯದ 18 ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ 0.980 ಟಿಎಂಸಿ ನೀರು, ಎರಡನೆಯದಾಗಿ ಹಿರಿಯೂರು ತಾಲೂಕಿನ ಐಮಂಗಳ 37 ಹಳ್ಳಿಗಳಿಗೆ ರಾಜೀವ್ ಗಾಂಧಿ ಸಬ್ಮಿಶನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿಗಾಗಿ 0.0150 ಟಿಎಂಸಿ ಅಡಿ ನೀರು ಬಳಸಲು ಅನುಮತಿ ನೀಡಲಾಗಿದೆ ಎಂಬುದಾಗಿ ವಾಣಿವಿಲಾಸಸಾಗರ ಅಚ್ಚುಕಟ್ಟುದಾರ ರೈತರ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿರಮೇಶ್ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ವಾಣಿವಿಲಾಸಸಾಗರ ಅಚ್ಚುಕಟ್ಟುದಾರ ರೈತರ ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೂರನೇಯದಾಗಿ ಚಳ್ಳಕೆರೆ ಕ್ಷೇತ್ರಕ್ಕೆ ಕುಡಿಯುವ ನೀರಿಗಾಗಿ ೦.25 ಟಿಎಂಸಿ ಅಡಿ ನೀರು, ನಾಲ್ಕನೇದಾಗಿ ಮೇ. ಕಿರ್ಲೋಸ್ಕರ್ ಸ್ಟೀಲ್ ಲಿಮಿಟೆಡ್ ಅವರಿಗೆ 0.0 353 ಮತ್ತು 0.034 ಟಿಎಂಸಿ ನೀರನ್ನು, ಐದನೇದಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ 198 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 0.357 ಟಿಎಂಸಿ ಅಡಿ ನೀರನ್ನು ಆರನೇದಾಗಿ ಹಿರಿಯೂರ್ ತಾಲೂಕಿನ 131 ಹಳ್ಳಿಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ 0.220 ನೀರು ಬಳಸಲು ಅನುಮತಿ ನೀಡಲಾಗಿದೆ
ಅಲ್ಲದೆ ಧರ್ಮಪುರ ಭಾಗದ ಏಳುಕೆರೆಗಳಿಗೆ ಹೊಸಳ್ಳಿ ಗ್ರಾಮದ ಬಳಿ ನೀರು ತುಂಬಿಸಲು ನೀರನ್ನು ಬಳಕೆ ಮಾಡಲಾಗುತ್ತಿದೆ. ಇದು ಅಲ್ಲದೆ ವೇದಾವತಿ ನದಿಗೆ ಚಳ್ಳಕೆರೆ ತಾಲ್ಲೂಕಿನ ಕೆರೆಗಳಿಗೆ ನೀರುಣಿಸಲು 0.25ಟಿಎಂಸಿ ನೀರನ್ನು ಮೀಸಲಿಡಲಾಗಿದೆ ಇತ್ತೀಚಿಗೆ ಹಿರಿಯೂರು ತಾಲೂಕಿನ ಜೆಜೆ ಹಳ್ಳಿ ಹೋಬಳಿಯ ಕಲ್ವಳ್ಳಿ ಭಾಗದ ಕೆರೆಗಳಿಗೆ 0.370 ಟಿಎಂಸಿ ಅಡಿ ನೀರನ್ನು ನಿಗದಿಪಡಿಸಲಾಗಿದೆ
ಇದಲ್ಲದೆ ಒಂದು ವರ್ಷಕ್ಕೆ ಆವಿಯಾಗುವ ನೀರಿನ ಪ್ರಮಾಣ 1.257 ಟಿಎಂಸಿ ಅಡಿನೀರು ಅಲ್ಲದೆ ಇಂಗುವ ನೀರಿನ ಪ್ರಮಾಣ ಅಳತೆಗೆ ಸಿಕ್ಕಿರುವುದಿಲ್ಲ ಈಗ ಸಿಕ್ಕಿರುವ ಮಾಹಿತಿಗಳ ಪ್ರಕಾರ 9 ಟಿಎಂಸಿ ಅಡಿ ನೀರು ವಾಣಿವಿಲಾಸ ಸಾಗರಕ್ಕೆ ಬೇಕಾಗಿರುತ್ತದೆ ಆದರೆ ಭದ್ರ ಮೇಲ್ದಂಡೆ ಯೋಜನೆಯಲ್ಲಿ ಕೇವಲ ಎರಡು ಟಿಎಂಸಿ ಅಡಿ ನೀರನ್ನು ಮೀಸಲಿಡಲಾಗಿದೆ.
ಜಿಲ್ಲೆಯ ಎಲ್ಲ ಶಾಸಕರು ವಾಣಿವಿಲಾಸ ಸಾಗರದ ಮೇಲೆ ಕಣ್ಣಿಟ್ಟೆ ಬರುತ್ತಾರೆ. ಬರುವ ದಿನಗಳಲ್ಲಿ ವಾಣಿವಿಲಾಸಸಾಗರ ಬರಿದಾಗುವುದರಲ್ಲಿ ಯಾವುದೇ ಸಂಶಯವಿಲ್ಲ ವಾಣಿವಿಲಾಸಸಾಗರ ತುಂಬಿಸಬೇಕೆಂದರೆ ಭದ್ರಾ ಜಲಾಶಯದಲ್ಲಿ ಹೆಚ್ಚುವರಿ ನೀರನ್ನು ವಾಣಿವಿಲಾಸ ಸಾಗರಕ್ಕೆ ಹರಿಸಬೇಕು ಅಲ್ಲದೆ ಈ ಹಿಂದೆ ಧರ್ಮಪುರ ಭಾಗದ ಕೆರೆಗಳಿಗೆ ತುಮಕೂರು ಬ್ರಾಂಚ್ ಕ್ಯಾನಲ್ ಇಂದ ಶಿರಾ ತಾಲೂಕಿನ ಮೂಲಕ ಹರಿಸಬೇಕಾಗಿದ್ದ ನೀರನ್ನು ವಿವಿಸಾಗರಕ್ಕೆ ಮರುಹೊಂದಾಣಿಕೆ ಮಾಡಬೇಕು.
ಜೊತೆಗೆ ಚಳ್ಳಕೆರೆ ಭಾಗದ ಕೆರೆಗಳಿಗೆ ನಿಗದಿಯಾಗಿದ್ದ ನೀರನ್ನು ವಿವಿಸಾಗರ ಜಲಾಶಯಕ್ಕೆ ಮರುವಂದಾಣಿಕೆ ಮಾಡಿ ಹರಿಸಬೇಕು ಇಲ್ಲವಾದಲ್ಲಿ ಮುಂದೊಂದು ದಿನ ವಿವಿಸಾಗರ ಅಚ್ಚುಕಟ್ಟು ಪ್ರದೇಶದ ರೈತರು ಈಗಿರುವ ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿಗೆ ಕೆಟ್ಟ ಪರಿಸ್ಥಿತಿಗೆ ಬರಬೇಕಾಗುತ್ತದೆ.. ಎಂಬುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಎಚ್.ಆರ್.ತಿಮ್ಮಯ್ಯ ಮಾತನಾಡಿ, ಮುಖ್ಯಮಂತ್ರಿಗಳಿಗೆ ತಾಲೂಕಿನ ರೈತರ ನಿಯೋಗ ಕೊಂಡೊಯ್ಯುವಾಗ ನೈಜ, ನೀರಾವರಿ ಹೋರಾಟಗಾರರನ್ನು ಕಡೆಗಣಿಸಿ ಪಕ್ಷಕ್ಕೆ ಸೀಮಿತರಾದ ರನ್ನು ಅಥವಾ ಬೆಂಬಲಿಗರನ್ನು ಮಾತ್ರ ಕರೆದುಕೊಂಡು ಹೋಗಿ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ವಿಫಲರಾಗಿದ್ದಾರೆ ಎಂಬುದಾಗಿ ಖಂಡಿಸಿದರು.
ಈ ಸಂಬಂಧವಾಗಿ ಮುಂದಿನ ದಿನಗಳಲ್ಲಿ ನೀರಾವರಿ ಸಚಿವರನ್ನು ಹಾಗೂ ಮುಖ್ಯಮಂತ್ರಿ ಅವರನ್ನು ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳೊಂದಿಗೆ, ನೈಜ ಹೋರಾಟಗಾರರನ್ನು ಭೇಟಿ ಮಾಡಿ ವಾಣಿವಿಲಾಸ ಸಾಗರದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು .
ಇದೇ ರೀತಿ ಅಚ್ಚುಕಟ್ಟು ಪ್ರದೇಶದ ರೈತರು ನಾಗರಿಕರು ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀರಿಗೆ ತೊಂದರೆಯಾಗುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಆಲೂರು. ಸಿದ್ದರಾಮಣ್ಣ ತಿಳಿಸಿದರು.
ಈ ಸಭೆಯಲ್ಲಿ ಹಿರಿಯರಾದ ಆನಂದಶೆಟ್ಟರು, ಎಂ.ರಾಜೇಂದ್ರ , ವಕೀಲರಾದ ಎಂ.ಟಿ.ಸುರೇಶ್, ಆರ್.ಕೆ.ಗೌಡ್ರು, ಮಂಜುನಾಥ್ ಮಾಳಿಗೆ, ಪಿಟ್ಲಾಲಿ ಶ್ರೀನಿವಾಸ್, ಪ್ರೊಫೆಸರ್ ಮೈಸೂರ್ ಶಿವಣ್ಣ, ಸಿಡ್ಲಯ್ಯನಕೋಟೆ ಮಲ್ಲಿಕಾರ್ಜುನಪ್ಪ, ದಸ್ತಗಿರ್ ಸಾಬ್. ಜಿ.ಬಿ.ರಾಜು. ರಾಮಚಂದ್ರಕಸವನಹಳ್ಳಿ, ಆನ್ಸರ್ ಅಲಿ, ಮಮತಾ ಕೃಷ್ಣಮೂರ್ತಿ, ಎಂಎಂಎಂ ಮಣಿ, ಜಿ.ಓನಾಗರಾಜ್. ಶಿವಣ್ಣ ಬೀರೇನಳ್ಳಿಪ್ರಜ್ವಲ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
