July 29, 2026
0005

ಹಿರಿಯೂರು :

ತವನಿಧಿ ಬಸವರಾಜ್ ರವರು ತಮ್ಮ  ಶಿಕ್ಷಕ ವೃತ್ತಿ ಜೀವನದಲ್ಲಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುವ ಮೂಲಕ ವಿದ್ಯಾರ್ಥಿಗಳ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂಬುದಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಸುನಂದಮ್ಮ ಹೇಳಿದರು.

ತಾಲ್ಲೂಕಿನ ಕಸವನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತವನಿಧಿ ಬಸವರಾಜುರವರ ವಯೋನಿವೃತ್ತಿ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ನಂತರ ಅವರು ಮಾತನಾಡಿದರು.

“ಇವರು ಮೂಲತಃ ಹಿರಿಯೂರು ತಾಲೂಕಿನ ತವನಿಧಿ  ಗ್ರಾಮದವರು, 1998ರ ಆಗಸ್ಟ್ 18ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಗ್ಗೆರೆ ಚಳ್ಳಕೆರೆ ತಾಲೂಕು ಇಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. ನಂತರ 2003 ರಲ್ಲಿ ತಮ್ಮ ಸ್ವಂತ ತಾಲೂಕು ಹಿರಿಯೂರು ತಾಲೂಕಿನ ಗೌನಹಳ್ಳಿ ಶಾಲೆಯಲ್ಲಿ ಸಹಶಿಕ್ಷಕರು, ಹಾಗೂ ಮುಖ್ಯೋಪಾದ್ಯಯರಾಗಿ ಸೇವೆಯನ್ನು ಸಲ್ಲಿಸಿದರು,

ನಂತರ 2011 ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚಳಮಡು  ಶಾಲೆಗೆ ವರ್ಗಾವಣೆ ಹೊಂದಿ ಆ ಶಾಲೆಯಲ್ಲಿ 2019 ರ ವರೆಗೆ ಸೇವೆಯನ್ನು ಸಲ್ಲಿಸಿ 2019 ರಲ್ಲಿ ಮಸ್ಕಲ್ ಗೊಲ್ಲರಹಟ್ಟಿ ಶಾಲೆಗೆ ವರ್ಗಾವಣೆ ಹೊಂದಿ ಬಂದರು. 2021 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಸವನಹಳ್ಳಿ ಶಾಲೆಯಲ್ಲಿ ನಿಯೋಜನೆ ಮೂಲಕ ಸೇವೆ ಸಲ್ಲಿಸಿದರು.

2025 ರಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಆ ಶಾಲೆಯು ಮುಚ್ಚಿದ ಸಂದರ್ಭದಲ್ಲಿ  ಹೆಚ್ಚುವರಿ ವರ್ಗಾವಣೆ ಮೂಲಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಸವನಹಳ್ಳಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಸುಧೀರ್ಘ 28 ವರ್ಷಗಳಕಾಲ ಸೇವೆ ಸಲ್ಲಿಸಿ, ಇದೀಗ ವಯೋನಿವೃತ್ತಿ ಹೊಂದಿದ್ದಾರೆ. ಇವರಿಗೆ ಭಗವಂತನು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಎಂಬುದಾಗಿ ಹೇಳಿದರು.

ಈ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಾಥಮಿಕ ಸಂಘದ ಅಧ್ಯಕ್ಷರು ಶ್ರೀಮತಿ ಸುನಂದಮ್ಮ, ಕಾರ್ಯದರ್ಶಿ ಕೋಟಿಲಿಂಗಯ್ಯ, ಉಪಾಧ್ಯಕ್ಷ ನಾಗೇಶ್, ಪದಾಧಿಕಾರಿಗಳಾದ ಮಹೇಶ್, ಮಂಜುನಾಥ್, ಶ್ರೀಮತಿ ದೇವರತ್ನ, ಶ್ರೀಮತಿ ಹಸೀನಾ, ಮುಖ್ಯ ಶಿಕ್ಷಕ ರಂಗನಾಥ್, ಸಹಶಿಕ್ಷಕ ಜಯಪ್ರಕಾಶ್,  ಕ್ಲಸ್ಟರ್ ಶಿಕ್ಷಕರು, ಸಿ.ಆರ್.ಪಿ ಮಂಜುನಾಥ್, ಸಾಮಾಜಿಕ ಕಾರ್ಯಕರ್ತ ರಾಮಚಂದ್ರ, ಶ್ರೀನಿವಾಸ್, ಪೋಷಕರು, ಗ್ರಾಮಸ್ಥರು, ಶಿಕ್ಷಕರಾದ ಬಾಲಾಜಿ, ಈರಣ್ಣ, ತಿಪ್ಪೇಸ್ವಾಮಿ, ಲಿಂಗಮ್ಮ, ಚೇತನ್, ಗಂಗಮ್ಮ, ಮಮತಾ, ವಿಜಯಕುಮಾರ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.

About The Author

Leave a Reply

Your email address will not be published. Required fields are marked *