
ಹಿರಿಯೂರು :
ತಾಲ್ಲೂಕಿನ ಎಂ.ಎಲ್.ಎ ಚುನಾವಣಾ ಟಿಕೆಟ್ ಸಚಿವ ಡಿ.ಸುಧಾಕರ್ ರವರ ಕುಟುಂಬಸ್ಥರಿಗೆ ಸಿಕ್ಕರೆ ನಾವು ಅವರ ಬೆನ್ನ ಹಿಂದೆ ನಿಂತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೆಂಲಿಸುತ್ತೇವೆ ಇದರಲ್ಲಿ ಯಾವುದೇ ಗೊಂದಲ ಬೇಡ, ಆದರೆ ಡಿ.ಸುಧಾಕರ್ ರವರ ಕುಟುಂಬಕ್ಕೆ ಟಿಕೆಟ್ ಕೈತಪ್ಪಿದರೆ ನಾನೂ ಸಹ ತಾಲ್ಲೂಕಿನ ಜನರ ಸೇವೆ ಸಲ್ಲಿಸಿದ್ದು, ಎಂ.ಎಲ್.ಎ ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂಬುದಾಗಿ ಜಿ.ಪಂ.ಮಾಜಿ ಅಧ್ಯಕ್ಷೆ ಶಶಿಕಲಾಸುರೇಶ್ ಬಾಬುರವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವೀಡಿಯೋ ಹೇಳಿಕೆ ಮೂಲಕ “ಹಿರಿಯೂರುನ್ಯೂಸ್” ತಂಡದೊಂದಿಗೆ ಮಾಹಿತಿ ಹಂಚಿಕೊಂಡಿರುವ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರು, ಜಾರಕಿಹೊಳೆ, ಜಿಲ್ಲಾ ಮಟ್ಟದ ಶಾಸಕರುಗಳಾದ ಬಿ.ಜಿ.ಗೋವಿಂದಪ್ಪ, ವೀರೇಂದ್ರಪಪ್ಪಿ, ರಘುಮೂರ್ತಿ, ಗೋಪಾಲಕೃಷ್ಣ, ಮಾಜಿ ಮಂತ್ರಿ ಆಂಜನೇಯ, ಮಾಜಿ ಸಚಿವ ಚಂದ್ರಪ್ಪ, ನಿಗಮ ಮಂಡಳಿ ಅಧ್ಯಕ್ಷ ಜಿ.ಎಸ್.ಮಂಜಣ್ಣ, ಇವರುಗಳ ಮಾರ್ಗದರ್ಶನದಲ್ಲಿ ನಾನೂ ಸಹ ಹಿರಿಯೂರು ಉಪಚುನಾವಣೆಯಲ್ಲಿ ಪ್ರಬಲ ಆಕಾಂಕ್ಷೆಯಾಗಿ ಸ್ಪರ್ಧಿಸಲು ಬಯಸುತ್ತಿದ್ದೇನೆ.
ಸಾರ್ವಜನಿಕರಲ್ಲಿ ಯಾವುದೇ ಗೊಂದಲ ಬೇಡ, ನಾವು ಸಹ ಡಿ.ಸುಧಾಕರ್ ರವರ ಕುಟುಂಬದಲ್ಲಿ ಒಬ್ಬರೆಂದೇ ತಿಳಿದುಕೊಂಡಿದ್ದು, ಡಿ.ಸುಧಾಕರ್ ರವರ ಕುಟುಂಬಕ್ಕೆ ಟಿಕೆಟ್ ಸಿಕ್ಕರೆ ನಾವು ಖಂಡಿತ ಅವರಿಗೆ ಬೆಂಬಲವಾಗಿ ನಿಂತು, ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡು ಅವರನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ, ಒಂದು ವೇಳೆ ಡಿ.ಸುಧಾಕರ್ ರವರ ಕುಟುಂಬಕ್ಕೆ ಟಿಕೆಟ್ ಸಿಗದಿದ್ದ ಪಕ್ಷದಲ್ಲಿ ನಾನು ಸಹ ಚುನಾವಣಾ ಕಣಕ್ಕೆ ಇಳಿಯಲು ನಿರ್ಧರಿಸಿದ್ದು, ಕಾಂಗ್ರೆಸ್ ಪಕ್ಷದ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂಬುದಾಗಿ ತಿಳಿಸಿದ್ದಾರೆ.
