May 31, 2026
00002

ಹಿರಿಯೂರು :

ಕನ್ನಡದ ಹಲವಾರು ಪ್ರಖ್ಯಾತ ಚಲನಚಿತ್ರಗಳಲ್ಲಿ  ಹಾಗೂ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವಾರು ನಾಯಕ ನಟರೊಂದಿಗೆ ಅಭಿನಯಿಸುವ ಮೂಲಕ  ತಮ್ಮ ಅಮೋಘ ಅಭಿನಯದಿಂದ ಜನಮನ ಗೆದ್ದಿರುವ ನಟ ದಿಲೀಪ್ ರಾಜ್ ರವರು ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಟ ದಿಲೀಪ್ ರಾಜ್ ರವರ ನಿಧನಕ್ಕೆ   “ಹಿರಿಯೂರುನ್ಯೂಸ್” ತಂಡದ ವತಿಯಿಂದ ಭಾವಪೂರ್ಣಶ್ರದ್ಧಾಂಜಲಿ ಅರ್ಪಿಸಲಾಗಿದೆ.

ದೂರದರ್ಶನದ ಹಿಟ್ಲರ್ ಕಲ್ಯಾಣದಂತಹ ಧಾರವಾಹಿಗಳಲ್ಲಿ ಹಿಟ್ಲರ್ ಪಾತ್ರದಲ್ಲಿ ಕಾಣಿಸಿಕೊಂಡ ಇವರು ನಾಡಿನೆಲ್ಲೆಡೆ ಮನೆಮಾತಾಗಿದ್ದರು, ದೂರದರ್ಶನ ವಾಹಿನಿಯಲ್ಲಿ ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ಕೆಲಸ ನಿರ್ವಹಿಸಿದ್ದ ಇವರು ಕಿರುತೆರೆಯಲ್ಲೂ ಸಹ ಅತ್ಯುತ್ತಮ ನಟ ಹಾಗೂ ನಿರ್ದೇಶಕನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

ನಟ ದಿಲೀಪ್ ರಾಜ್ ರವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ, ನಟ ದಿಲೀಪ್ ರಾಜ್ ರವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬವರ್ಗದವರಿಗೆ ಆ ಭಗವಂತನು ದಯಪಾಲಿಸಲಿ ಎಂಬುದಾಗಿ “ಹಿರಿಯೂರು ನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆ ರಂಗನಾಥ್ ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್, ಯಾದವ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ ಇವರುಗಳು ಸಂತಾಪ ಸೂಚಿಸಿದ್ದಾರೆ.

About The Author

Leave a Reply

Your email address will not be published. Required fields are marked *