May 31, 2026
004

ಹಿರಿಯೂರು :

“ಬಹುತೇಕ ಶೂನ್ಯ ಸಂಖ್ಯೆಯ ಜನಾಂಗದವರಾದ ಡಿ.ಸುಧಾಕರ್ ಅವರು ನಾಲ್ಕು ಸಲ ಶಾಸಕರಾಗಿ ಗೆದ್ದು, ಎರಡು ಸಲ ಮಂತ್ರಿಯಾಗಿ,  ಕೇವಲ ಒಂದುಸಲ ಮಾತ್ರ ಕಡಿಮೆ ಅಂತರದಲ್ಲಿ ಸೋತ ಒಬ್ಬ ವಿರಳ ರಾಜಕಾರಣಿ.” ಎಂಬುದಾಗಿ ಖ್ಯಾತ ಕಾದಂಬರಿಕಾರ ಡಿ.ಸಿ.ಪಾಣಿ  ಜಿಲ್ಲಾ ಉಸ್ತುವಾರಿ ಸಚಿವರ ಆಕಸ್ಮಿಕ ಮರಣದ ಸಂದರ್ಭದಲ್ಲಿ ವ್ಯಾಖ್ಯಾನಿಸಿದ್ದಾರೆ.

“ಯುಗಾದಿ ಹಬ್ಬದ ಸಂದರ್ಭದಲ್ಲಿ, ಹಿರಿಯೂರಿನಲ್ಲಿ ನಡೆಯುವ ಇಸ್ಪೀಟ್ ಆಟವನ್ನು ಯಾವುದೇ ಒತ್ತಡಕ್ಕೆ ಮಣಿಯದೆ ತಡೆದ ಧೀಮಂತ ನಾಯಕರು ಎಂಬುದನ್ನು  ನೆನಪು ಮಾಡಿಕೊಂಡ ಡಿ.ಸಿ.ಪಾಣಿರವರು ಡಿ.ಸುಧಾಕರ್ ರವರ ನಿಧನ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ, ಸಚಿವ ಡಿ.ಸುಧಾಕರ್ ರವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತನೆ ಕರುಣಿಸಲಿ ಎಂಬುದಾಗಿ ಸಂತಾಪ ಸೂಚಿಸಿದ್ದಾರೆ.

About The Author

Leave a Reply

Your email address will not be published. Required fields are marked *