
ಹಿರಿಯೂರು :
ಸಚಿವರಾದ ಡಿ.ಸುಧಾಕರ್ ಅವರು ಬೇಗ ಗುಣಮುಖರಾಗಿ ಬಂದು ಹಿರಿಯೂರು ಕ್ಷೇತ್ರದಲ್ಲಿ ಕೆಜೆ ಹಳ್ಳಿ ಹೋಬಳಿಯ ಮತ್ತು ತಾಲೂಕಿನ ಎಲ್ಲ ಮಣ್ಣಿನ ಕೆರೆಗಳನ್ನು ಶಾಸಕರ ಅವಧಿಯಲ್ಲಿ ನೀರು ತುಂಬಿಸಬೇಕಾಗಿದೆ, ಆದ್ದರಿಂದ ಅವರು ಬೇಗ ಗುಣಮುಖರಾಗಿ ಕ್ಷೇತ್ರದಲ್ಲಿ ನೆನೆಗುತಿಗೆ ಬಿದ್ದಿರುವ ಎಲ್ಲಾ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲಿ ಎಂಬುದಾಗಿ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಭಗವಂತನಲ್ಲಿ ಪ್ರಾರ್ಥಿಸಿದರು.
ನಗರದ ಶ್ರೀತೇರುಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಸಚಿವರಾದ ಡಿ.ಸುಧಾಕರ್ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿ, ಬೇಗಗುಣಮುಖರಾಗಲಿ ಎಂದು ಪ್ರಾರ್ಥಿಸಿ, ತಾಲೂಕು ರೈತಸಂಘದ ಪದಾಧಿಕಾರಿಗಳು ಶ್ರೀತೇರುಮಲ್ಲೇಶ್ವರಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿ, ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ವೆಂಕಟೇಶ್, ಸಿದ್ದರಾಮಣ್ಣ, ರಂಗಸ್ವಾಮಿಕಲ್ಲತಿಮಯ್ಯ, ಈರಣ್ಣ, ಚಂದ್ರಪ್ಪ, ರಾಮಕೃಷ್ಣ, ಶಿವಣ್ಣ, ಸೇರಿದಂತೆ ಅನೇಕ ರೈತಮುಖಂಡರುಗಳು ಉಪಸ್ಥಿತರಿದ್ದರು.
