
ಹಿರಿಯೂರು :
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 71.29ರಷ್ಟು ಫಲಿತಾಂಶ ಬಂದಿದ್ದು, 27 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ 143 ರಥಮ ಶ್ರೇಣಿ 42 ದ್ವಿತೀಯ ಶ್ರೇಣಿ ಹಾಗು ಮೂರು ತೃತೀಯ ಶ್ರೇಣಿ ಪಡೆದಿರುತ್ತಾರೆ ಕಾಲೇಜಿನ ಪ್ರಾಚಾರ್ಯರಾದ ಟಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಒಟ್ಟು 215 ವಿದ್ಯಾರ್ಥಿನಿಯರು ಉತ್ತೀರ್ಣಗೊಂಡಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡ 95 ರಷ್ಟು, ಕಲಾ ವಿಭಾಗದಲ್ಲಿ ಶೇಕಡ 67ರಷ್ಟು ಹಾಗೂ ವಿಜ್ಞಾನ ವಿಭಾಗದಲ್ಲಿ ಶೇಕಡ 65, ರಷ್ಟು ಫಲಿತಾಂಶ ಬಂದಿದೆ.

ವಾಣಿಜ್ಯ ವಿಭಾಗದಲ್ಲಿ ಎನ್.ಸ್ವಾತಿ 571 ಅಂಕಗಳು, ಎಲ್.ದಿವ್ಯ ಕಲಾವಿಭಾಗದಲ್ಲಿ 553 ಅಂಕಗಳು ಹಾಗೂ ವಿಜ್ಞಾನ ವಿಭಾಗದಲ್ಲಿ ಸುಹಾನ ಬಾನು 535 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿಯನ್ನು ತಂದಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯರಾದ ಟಿ.ತಿಪ್ಪೇಸ್ವಾಮಿ ಹಾಗೂ ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ.
